ರಾಯಚೂರು ಜಿಲ್ಲೆಯಲ್ಲಿ ಬೆಳೆಹಾನಿ ಸಮೀಕ್ಷೆಗೆ ಸೂಚನೆ : ಡಾ.ಶರಣಪ್ರಕಾಶ ಪಾಟೀಲ
ರಾಯಚೂರು, 28 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ರಾಯಚೂರು ಜಿಲ್ಲೆಯಾದ್ಯಂತ ಮಳೆ ಬಿದ್ದು, ಬೆಳೆಹಾನಿಯಾದ ಬಗ್ಗೆ ಕೂಡಲೇ ಸಮೀಕ್ಷೆ ಆರಂಭಿಸಿ ಪರಿಹಾರಕ್ಕೆ ಕ್ರಮ ವಹಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ರಾಯಚೂರ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾ
ರಾಯಚೂರು ಜಿಲ್ಲೆಯಲ್ಲಿ ಬೆಳೆಹಾನಿ ಸಮೀಕ್ಷೆಗೆ ಸೂಚನೆ : ಡಾ.ಶರಣಪ್ರಕಾಶ ಪಾಟೀಲ


ರಾಯಚೂರು, 28 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ರಾಯಚೂರು ಜಿಲ್ಲೆಯಾದ್ಯಂತ ಮಳೆ ಬಿದ್ದು, ಬೆಳೆಹಾನಿಯಾದ ಬಗ್ಗೆ ಕೂಡಲೇ ಸಮೀಕ್ಷೆ ಆರಂಭಿಸಿ ಪರಿಹಾರಕ್ಕೆ ಕ್ರಮ ವಹಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ರಾಯಚೂರ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್ ಅವರು ಹೇಳಿದ್ದಾರೆ.

ಸಿಂಧನೂರ ನಗರದ ಸತ್ಯ ಗಾರ್ಡನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ರಾಯಚೂರ ಜಿಲ್ಲೆ ಸೇರಿದಂತೆ ಪಕ್ಕದ ಕೊಪ್ಪಳ, ಯಾದಗಿರಿ, ಬೀದರ, ಕಲಬುರಗಿ, ವಿಜಯನಗರ, ಬಳ್ಳಾರಿ ಒಳಗೊಂಡು ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಸಮೃದ್ಧವಾಗಿ ಬೆಳೆದು ನಿಂತಿದ್ದ ಬೆಳೆ ಮಧ್ಯೆ ನೀರು ನಿಂತಿದೆ. ಮಳೆಯಿಂದಾಗಿ ಬೆಳೆ ಹಾನಿಯಾಗಿದ್ದರಿಂದ ರೈತರು ಕಂಗಾಲಾಗಿದ್ದಾರೆ. ಹಾನಿ ಅನುಭವಿಸಿದ ಎಲ್ಲ ರೈತರಿಗೆ ನ್ಯಾಯಯುತಾಗಿ ಕೂಡಲೇ ಪರಿಹಾರ ಸಿಗುವ ನಿಟ್ಡಿನಲ್ಲಿ ಕ್ರಮಕ್ಕಾಗಿ ಜಿಲ್ಲೆಯಾದ್ಯಂತ ಸಮೀಕ್ಷಾ ಕಾರ್ಯ ಆರಂಭವಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಸಚಿವರು ತಿಳಿಸಿದರು.

ಕೃಷಿ, ತೋಟಗಾರಿಕೆ ಸೇರಿದಂತೆ ಎಲ್ಲ ಇಲಾಖೆಗಳು ಸಮೀಕ್ಷೆಗೆ ಆದ್ಯತೆ ನೀಡಬೇಕು ಎಂದು ನಿರ್ದೇಶನ ನೀಡಿದ್ದಾಗಿ ಸಚಿವರು ತಿಳಿಸಿದರು.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಆರಂಭದಲ್ಲಿ 2500 ಇದ್ಧ ಪ್ರವೇಶಾತಿಯನ್ನು ಇದೀಗ ತಮ್ಮ ಅವಧಿಯಲ್ಲಿ 6000 ಮಕ್ಕಳಿಗೆ ಸಿಗುವಂತೆ ಪ್ರವೇಶಾತಿ ಪ್ರಮಾಣ ಹೆಚ್ಚಿಸಲಾಗಿದೆ. ಇಲಾಖೆಯಿಂದ ಕೊಡ ಮಾಡುವ ಎಲ್ಲಾ ತರಬೇತಿಗಳನ್ನು ಜಾಬಗೆ ಲಿಂಕ್ ಮಾಡಿದ್ದೇವೆ. ಪ್ರವೇಶ ಪಡೆದ 6000 ವಿದ್ಯಾರ್ಥಿಗಳಿಗೂ ನೌಕರಿ ಸಿಗಲಿದೆ. ಇಂತಹ ತರಬೇತಿ ಕೇಂದ್ರಗಳನ್ನು ಮತ್ತಷ್ಟು ಹೆಚ್ಚಿಸಲಾಗುತ್ತಿದೆ. ಉದ್ಯೋಗವಕಾಶಕ್ಕೆ ಹೆಚ್ಚಿನ ಉತ್ತೇಜನ ನೀಡುವ ದಿಶೆಯಲ್ಲಿ ಯೋಚಿಸಿ, ಯೋಜಿಸಿ ಮಲ್ಟಿ ಸ್ಕಿಲ್ ಡವಲಪಮೆಂಟ್ ತರಬೇತಿ ಕೇಂದ್ರಗಳನ್ನು ಕೊಪ್ಪಳ ಸೇರಿದಂತೆ ಆರಂಭಿಸುತ್ತಿದ್ದೇವೆ ಎಂದು ಸಚಿವರು ತಿಳಿಸಿದರು.

ಯುವನಿಧಿ ಯೋಜನೆ : ಡಿಪೆÇ್ಲಮಾ ಮತ್ತು ಪದವಿ ಪೂರ್ಣಗೊಳಿಸಿ 6 ತಿಂಗಳಾದರು ಸಹ ನೌಕರಿ ಸಿಗದ ನಿರೋದ್ಯೋಗಿಗಳಿಗಾಗಿ ನಾವು ರಾಜ್ಯದಲ್ಲಿ ಯುವನಿಧಿ ಯೋಜನೆ ಜಾರಿ ಮಾಡಿದ್ದೇವೆ. ಮುಂದುವರೆದು, ಯುವನಿಧಿ ಫಲಾನುಭವಿಗಳಿಗೆ ನಾವು ಕೇವಲ ಯುವನಿಧಿಯನ್ನμÉ್ಟೀ ನೀಡುತ್ತಿಲ್ಲ. ಬದಲಾಗಿ ಅವರಿಗೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ತರಬೇತುಗೊಳಿಸುತ್ತಿದ್ದೇವೆ. ಈ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಲು ಕಾರ್ಯಯೋಜನೆ ಹಾಕಿ ಅನುμÁ್ಠನ ಮಾಡುತ್ತ ನಮ್ಮ ಸರ್ಕಾರವು ಜನಪರವಾಗಿ ಕೆಲಸ ಮಾಡುತ್ತಿದೆ ಎಂದರು.

ಸಮೀಕ್ಷೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದಿಂದ ಈಗ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಎಲ್ಲರೂ ಭಾಗಿಯಾಗಬೇಕು. ಇದು ಜಾತಿ ಸಮೀಕ್ಷೆಯಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಪ್ರಯತ್ನದಡಿ ರಾಜ್ಯ ಸರ್ಕಾರದಿಂದ ಸಮೀಕ್ಷಾ ಕಾರ್ಯ ನಡೆಯುತ್ತಿದೆ. ಈ ಕಾರ್ಯವು ರಾಯಚೂರ ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ನಡೆಯಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಉತ್ತಮವಾಗಿ ಮಾನೀಟರ್ ಮಾಡಬೇಕು ಎಂದು ತಿಳಿಸಿದರು.

371ಜೆ ಜಾರಿಯಿಂದ ಕ್ರಾಂತಿ: ಮಲ್ಲಿಕಾರ್ಜುನ ಖರ್ಗೆ ಅವರಂತಹ ದೂರದೃಷ್ಟಿ ಹೊಂದಿದ ನಾಯಕರ ಪರಿಶ್ರಮದಿಂದಾಗಿ 371ಜೆ ಜಾರಿಯಾಗಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಕಳೆದ 10 ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ಆಗಿವೆ. ಅಭಿವೃದ್ಧಿ ಕಾರ್ಯಗಳಿಗೆ ಪ್ರತಿ ವರ್ಷ 5 ಸಾವಿರ ಕೋಟಿ ರೂ ಮೀಸಲಿಡುತ್ತಿದ್ದೇವೆ. 371 ಜೆ ಮೀಸಲು ಜಾರಿಯಾಗಿ ವೃತ್ತಿಪರ ಕೋರ್ಸಗಳಲ್ಲಿ ಅವಕಾಶ ಸಿಗುತ್ತಿದೆ. ಸಾಮಾನ್ಯ ಹಿನ್ನೆಲೆಯ ಮಕ್ಕಳು ವೈದ್ಯಕೀಯ ಕೋರ್ಸ, ಎಂಜಿನಿಯರಿಂಗ್ ಕೊರ್ಸ ಓದಿ ಡಾಕ್ಟರ್, ಎಂಜಿನಿಯರ್ಸ ಆಗುವಂತಾಗಿದೆ. ಈ ಭಾಗದ ಅಭ್ಯರ್ಥಿಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಸರ್ಕಾರಿ ಹುದ್ದೆ ಲಭಿಸಿದೆ ಎಂದು ತಿಳಿಸಿದರು.

ಸಿಂಧನೂರಲ್ಲಿ ಅಭಿವೃದ್ದಿಯ ಪರ್ವ ಆರಂಭವಾಗಿದೆ: ಅಂದಾಜು 1630 ಕೋಟಿ ರೂ ವೆಚ್ಚದಲ್ಲಿ ಸಿಂಧನೂರ-ರಾಯಚೂರು ರಾಜ್ಯ ಹೆದ್ದಾರಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮಸ್ಕಿ ಮತ್ತು ಇನ್ನೀತರ ಕಡೆ ಬ್ರಿಜ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 30 ಕೋಟಿ ರೂ.ವೆಚ್ಚದಲ್ಲಿ ಕುಡಿವ ನೀರಿನ ಕಾಮಗಾರಿಗಳು, 28 ಕೋಟಿ ರೂ ವೆಚ್ಚದಲ್ಲಿ ಜಿಲ್ಲಾಸ್ಪತ್ರೆ ನಿರ್ಮಾಣ ಸೇರಿದಂತೆ ಸಿಂಧನೂರ ತಾಲೂಕಿನಲ್ಲಿ ಅಭಿವೃದ್ಧಿಯ ಪರ್ವವೇ ಆರಂಭವಾಗಿದೆ. ಸಿಂಧನೂರ ತಾಲೂಕು ಸಮೃದ್ಧ ನಾಡಾಗಿದೆ ಎಂದರು.

ಮಾದರಿ ದಸರಾ: ನಮ್ಮ ಭಾಗದಲ್ಲಿ ಸಹ ಹೀಗೂ ದಸರಾ ಮಾಡಬಹುದು ಎಂಬುವಂತೆ ಎಲ್ಲರಿಗೂ ಮಾದರಿಯಾಗುವ ಹಾಗೆ ಶಾಸಕರಾದ ಹಂಪನಗೌಡ ಬಾದರ್ಲಿ ಅವರು ಕಾಳಜಿ ವಹಿಸಿ ಮಾದರಿಯಾಗುವ ರೀತಿ ದಸರಾ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ ಎಂದು ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande