ವಿಜಯಪುರ, 28 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ನೂರಾರು ಮಣ್ಣಿನ ಮನೆಗಳು ಕುಸಿದು ಹಾನಿಗೊಳಗಾಗಿವೆ. ಬಾಗಲಕೋಟೆ ನಗರದ ಕಿಲ್ಲಾ ಓಣಿಯಲ್ಲಿ ಮನೆ ಗೋಡೆ ಕುಸಿದು ಬಿದ್ದ ಪರಿಣಾಮ 75 ವರ್ಷದ ಶಶಿಕಲಾ ದಾಬಡೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ತಲೆಗೆ ಕಟ್ಟಿಗೆಯ ತೊಲೆ ಬಿದ್ದು ಆರು ಹೊಲಿಗೆ ಬಿದ್ದಿದ್ದು, ಕೈಗಳಿಗೂ ಗಾಯಗಳಾಗಿವೆ. ಈ ಘಟನೆ ಕುರಿತು ಭಾನುವಾರ ಮಾಜಿ ಶಾಸಕ ವೀರಣ್ಣ ಚರಂತಿಮಠ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಧಿಕಾರಿಗಳಿಗೆ ಪರಿಹಾರ ನೀಡುವಂತೆ ಸೂಚಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande