ಕಳೆದ 70 ವರ್ಷದಲ್ಲಿ ಇಂತಹ ಮಳೆ ನೋಡಿರಲಿಲ್ಲ : ಹಂಪನಗೌಡ ಬಾದರ್ಲಿ
ರಾಯಚೂರು, 28 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಕಳೆದ 70 ವರ್ಷದಲ್ಲಿ, ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳಲ್ಲಿ ಈ ರೀತಿ ಏಕಕಾಲಕ್ಕೆ ಹೆಚ್ಚು ಮಳೆ ಬಿದ್ದಿರುವುದನ್ನು ತಾವು ನೋಡಿರಲಿಲ್ಲ ಎಂದು ಶಾಸಕರಾದ ಹಂಪನಗೌಡ ಬಾದರ್ಲಿ ಅವರು, ಸಿಂಧನೂರಿನ ಸತ್ಯ ಗಾರ್ಡನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿವ
ಕಳೆದ 70 ವರ್ಷದಲ್ಲಿ ಇಂತಹ ಮಳೆ ನೋಡಿರಲಿಲ್ಲ : ಹಂಪನಗೌಡ ಬಾದರ್ಲಿ


ರಾಯಚೂರು, 28 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕಳೆದ 70 ವರ್ಷದಲ್ಲಿ, ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳಲ್ಲಿ ಈ ರೀತಿ ಏಕಕಾಲಕ್ಕೆ ಹೆಚ್ಚು ಮಳೆ ಬಿದ್ದಿರುವುದನ್ನು ತಾವು ನೋಡಿರಲಿಲ್ಲ ಎಂದು ಶಾಸಕರಾದ ಹಂಪನಗೌಡ ಬಾದರ್ಲಿ ಅವರು, ಸಿಂಧನೂರಿನ ಸತ್ಯ ಗಾರ್ಡನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿವೃಷ್ಠಿಯ ದುಸ್ಥಿತಿಯನ್ನು ಸಚಿವರ ಗಮನಕ್ಕೆ ತಂದರು.

ಮಳೆಯಿಂದಾಗಿ ಸಿಂಧನೂರ ಸೇರಿದಂತೆ ಹಾಳಾದ ಹತ್ತಿ, ಭತ್ತ, ತೊಗರಿ, ಜೋಳ, ಸೂರ್ಯಪಾನ ಬೆಳೆಹಾನಿಗೆ ಸಮರ್ಪಕ ಪರಿಹಾರ ಕೊಡುವ ಬಗ್ಗೆ ಕೂಡಲೇ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಸರ್ಕಾರವು ಪರಿಹಾರ ಘೋಷಣೆ ಮಾಡಬೇಕು ಎಂದು ಮನವಿ ಮಾಡಿದರು.

ಸಿಂಧನೂರು ತಾಲೂಕಿಗೆ ಮಂಜೂರಾದ ಆಸ್ಪತ್ರೆಗಳಿಗೆ ಅಗತ್ಯ ಪ್ರಮಾಣದಲ್ಲಿ ವೈದ್ಯರು ಮತ್ತು ಸಿಬ್ಬಂದಿಗೆ ಮಂಜೂರಾತಿ ನೀಡಬೇಕು ಎಂದು ಅವರು ಆರೋಗ್ಯ ಸಚಿವರಲ್ಲಿ ಮನವಿ ಮಾಡಿದರು.

ಜನಪರ ಆಡಳಿತ ನೀಡುತ್ತಿರುವ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ಮಂಜೂರಾತಿ ಪಡೆದು ಸಿಂಧನೂರ ತಾಲೂಕಿನಲ್ಲಿ ನಾನಾ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ಕೊಡುತ್ತಿದ್ದೇವೆ. ಯುವಕರಿಗೆ ಅನುಕೂಲವಾಗಲು ಕೌಶಲ ತರಬೇತಿ ಕೇಂದ್ರ, ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಮಹಾವಿದ್ಯಾಲಯದ ಕಟ್ಟಡಕ್ಕೆ ಭೂಮಿ ಪೂಜೆ, ಜ್ಯುನಿಯರ್ ಕಾಲೇಜ್ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡುತ್ತಿದ್ದೇವೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆ ಲೋಕಾರ್ಪಣೆ ಆಗುತ್ತಿದೆ. ಈ ಸಾಧನೆಯು ಸಿಂಧನೂರ ಇತಿಹಾಸದಲ್ಲಿ ದಾಖಲಾಗಲಿದೆ ಎಂದು ಶಾಸಕರು ತಿಳಿಸಿದರು.

ಈ ಭಾಗದಲ್ಲಿ ಕಾಲುವೆ ನಿರ್ಮಾಣ ಕಾಮಗಾರಿಗಳಿಗೆ ಮಂಜೂರಾತಿ ನೀಡಬೇಕು. ಈ ಭಾಗದ 6 ಲಕ್ಷ ಎಕರೆ ಜಮೀನಿಗೆ ನೀರು ಉಣಿಸುವ ಎಡದಂಡೆ ಕಾಲುವೆಯ ದುರಸ್ಥಿ ಕಾಮಗಾರಿಯನ್ನು ತುಂಡುತುಂಡಾಗಿ ನಡೆಸಲು ಅವಕಾಶ ಕಲ್ಪಿಸಬೇಕು. ಪಾಪಯ್ಯ ಕೆನಾಲ್ ದಿಂದ ಕನಿಷ್ಟ 4700 ಕ್ಯುಸೆಕ್ ನೀರು ಹರಿದು ಬರುವ ಹಾಗೆ ಮಾಡಬೇಕಿದೆ. ಇದಕ್ಕಾಗಿ ಅವಶ್ಯವಿರುವ ಅಂದಾಜು 90 ಕೋಟಿ ರೂ ಗೆ ಮಂಜೂರಾತಿ ಮಾಡಿಸಿದರೆ

ಮಾನವಿ ಮತ್ತು ರಾಯಚೂರ ತಾಲೂಕಿನ ಜಮೀನಿಗೆ ನೀರು ಸರಾಗವಾಗಿ ಹರಿದು ಬರಲಿದೆ ಎಂದು ತಿಳಿಸಿದರು.

ಈ ಭಾಗದಲ್ಲಿನ ಕಾಲುವೆಗಳಿಗೆ ದುರಸ್ತಿ ಮಾಡಿ ಹೊಸ ಶೆಲ್ಟರ್ಸ ಕೂಡಿಸುವ ಕೆಲಸ ತೀವ್ರಗತಿಯಲ್ಲಿ ಆಗಬೇಕು ಎಂದು ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande