ನಾಳೆ ನಿಧಿ ಆಯ್ಕೆ ನಿಕಟ್ ಕಾರ್ಯಕ್ರಮ
ಹಾಸನ, 28 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಪ್ರತಿಯೊಂದು ಜಿಲ್ಲೆಗಳಲ್ಲಿ ದುಡಿಯುವ ಜನಸಂಖ್ಯೆಯ ಸಾಮಾಜಿಕ ಭದ್ರತೆಯ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ತನ್ನ ಉಪಸ್ಥಿತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳ ನಿಧಿ ಆಯ್ಕೆ ನಿಕಟ್ ಕಾರ್ಯಕ್ರಮವನ್ನು ಎಲ್ಲಾ
ನಾಳೆ ನಿಧಿ ಆಯ್ಕೆ ನಿಕಟ್ ಕಾರ್ಯಕ್ರಮ


ಹಾಸನ, 28 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಪ್ರತಿಯೊಂದು ಜಿಲ್ಲೆಗಳಲ್ಲಿ ದುಡಿಯುವ ಜನಸಂಖ್ಯೆಯ ಸಾಮಾಜಿಕ ಭದ್ರತೆಯ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ತನ್ನ ಉಪಸ್ಥಿತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳ ನಿಧಿ ಆಯ್ಕೆ ನಿಕಟ್ ಕಾರ್ಯಕ್ರಮವನ್ನು ಎಲ್ಲಾ ಜಿಲ್ಲೆಗಳಲ್ಲಿ ಆಯೋಜಿಸಲಾಗುತ್ತಿದೆ.

ಇದು ಭವಿಷ್ಯ ನಿಧಿ ಸದಸ್ಯರ ಪಿಂಚಣಿದಾರರ ಮತ್ತು ಉದ್ಯೋಗದಾತರ ಕುಂದು ಕೊರತೆ ನಿವಾರಣಾ ವೇದಿಕೆಯಾಗಿ ಮತ್ತು ಮಾಹಿತಿ ವಿನಿಮಯ ಕಾರ್ಯಕ್ರಮವಾಗಿ ರೂಪುಗೊಂಡಿದ್ದು, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಿಕೆಯಿಂದ, ಹೆಚ್ಚಿನ ವ್ಯಾಪ್ತಿಯನ್ನು ತಲುಪಬಹುದಾಗಿದೆ.

“ನಿಧಿ ಆಯ್ಕೆ ನಿಕಟ್ ಕಾರ್ಯಕ್ರಮವನ್ನು ಕುಮರ್‌ಗೋಡ್ ಎಸ್ಟೇಟ್ ಲಿಮಿಟೆಡ್, ಪಿ.ಬಿ. ನಂ. 7, ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಾಗೂ ಅರವಿಂದ್ ಲಿಮಿಟೆಡ್, ಕೋಡಿಹಳ್ಳಿ ಗ್ರಾಮ, ಅರಸೀಕೆರೆ, ಹಾಸನ ಜಿಲ್ಲೆಯಲ್ಲಿ ಸೆ.29 ರಂದು ಬೆಳಿಗ್ಗೆ 9 ಗಂಟೆಯಿಂದ ಹಮ್ಮಿಕೊಳ್ಳಲಾಗಿದೆ. ಸದಸ್ಯರು, ಪಿಂಚಣಿದಾರರು ಮತ್ತು ಉದ್ಯೋಗದಾತರು ಈ ಕಾರ್ಯಕ್ರಮದ ಸದುಪಯೋಗ ಪಡೆಯಬೇಕಾಗಿ ಚಿಕ್ಕಮಗಳೂರು ಪ್ರಾದೇಶಿಕ ಕಚೇರಿಯ ಕ್ಷೇತ್ರೀಯ ಭವಿಷ್ಯ ನಿಧಿ ಆಯುಕ್ತರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande