ಖಾಲಿ ಇರುವ ಸ್ಥಾನಗಳಿಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ
ಹಾಸನ, 28 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಹಾಸನ ಜಿಲ್ಲೆಯ ಮಾವಿನಕೆರೆಯಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ 9 ಮತ್ತು 11 ನೇ ತರಗತಿಯಲ್ಲಿ 2026-27 ಶೈಕ್ಷಣಿಕ ವರ್ಷಕ್ಕಾಗಿ ಖಾಲಿ ಇರುವ ಸ್ಥಾನಗಳಿಗೆ, ಪ್ರವೇಶ ಪರೀಕ್ಷೆಯ ಮೂಲಕ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ
ಖಾಲಿ ಇರುವ ಸ್ಥಾನಗಳಿಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ


ಹಾಸನ, 28 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಹಾಸನ ಜಿಲ್ಲೆಯ ಮಾವಿನಕೆರೆಯಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ 9 ಮತ್ತು 11 ನೇ ತರಗತಿಯಲ್ಲಿ 2026-27 ಶೈಕ್ಷಣಿಕ ವರ್ಷಕ್ಕಾಗಿ ಖಾಲಿ ಇರುವ ಸ್ಥಾನಗಳಿಗೆ, ಪ್ರವೇಶ ಪರೀಕ್ಷೆಯ ಮೂಲಕ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ದಿನಾಂಕವನ್ನು 07.10.2025 ವರೆಗೆ ವಿಸ್ತರಿಸಲಾಗಿದೆ.

2025-26ನೇ ಸಾಲಿನಲ್ಲಿ ಹಾಸನ ಜಿಲ್ಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಮತ್ತು ವಾಸವಿರುವ ವಿದ್ಯಾರ್ಥಿಗಳು ಆನ್‌ಲೈನ್ ನಲ್ಲಿ ಅರ್ಜಿಯನ್ನು https://cbseitms.nic.in/2025/nvsix_9 ಈ ವೆಬ್ ಸೈಟ್ ಮೂಲಕ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 01.05.2011 ರಿಂದ 31.07.2013 ರೊಳಗೆ ಜನಿಸಿರಬೇಕು ಎಂದು ಪಿ.ಎಂ.ಶ್ರೀ ಸ್ಕೂಲ್ ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande