ಕಲಬುರಗಿ, 28 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ನಗರದ ವಿಮಾನದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆಯವರನ್ನು ಹೈದರಾಬಾದ್ ಕರ್ನಾಟಕ ಪ್ರದೇಶದ ವಾಲ್ಮೀಕಿ ನಾಯಕ ಸಂಘದ ನೇತೃತ್ವದಲ್ಲಿ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಹಾಗೂ ಯವ ನಾಯಕರು ಭೇಟಿಯಾಗಿ ನಕಲಿ ಎಸ್.ಟಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಸಮಾಜ ಸಂಘದ ಕಲಬುರ್ಗಿ ವಿಭಾಗೀಯ ಅಧ್ಯಕ್ಷರಾದ ನಂದಕುಮಾರ ಮಾಲಿ ಪಾಟೀಲ್ ಹಾಗೂ ಇತರ ಮುಖಂಡರು ಜೊತೆಗೂಡಿ ಸಚಿವರೊಂದಿಗೆ ಸುದೀರ್ಘವಾಗಿ ಚರ್ಚಿಸಿ ಸಮಸ್ಯೆಯ ಗಂಭೀರತೆಯನ್ನು ಮನವರಿಕೆ ಮಾಡಿಕೊಟ್ಟರು.
ಸರಕಾರ ಒಂದೆಡೆ ನಕಲಿ ಎಸ್. ಟಿ. ಪ್ರಮಾಣಪತ್ರ ಪಡೆದವರ ವಿರುದ್ಧ ಮೃದುಧೋರಣೆ ತಾಳುತ್ತಿದೆ. ಮತ್ತೆ ಹಿಂದುಳಿದ ವರ್ಗದಲ್ಲಿರುವ ಪ್ರಬಲ ಜಾತಿಯನ್ನು ಎಸ್.ಟಿ ಗೆ ಸೇರಿಸುವ ಮುನ್ನ ಅಲ್ಲಿ ಅವರು ಪಡೆಯುತ್ತಿದ್ದ ಮೀಸಲಾತಿಯ ಪ್ರಮಾಣವನ್ನು ಎಸ್.ಟಿ ಗೆ ಸೇರಿಸಿ ಮೀಸಲಾತಿ ಪ್ರಮಾಣ ಹೆಚ್ಚಿಸುವುದರ ಮೂಲಕ ಎಸ್.ಟಿ ಸೇರಿಸಬೇಕೆಂಬ ಹೇಳಿಕೆಗಳು ಸರಕಾರದ ಸಚಿವರಿಂದ ಬರಬೇಕಾಗಿದೆ ಎನ್ನುವುದನ್ನು ಮನವರಿಕೆ ಮಾಡಿಕೊಡಲಾಯಿತು.
ಇದಕ್ಕೆ ಸ್ಪಂದಿಸಿದ ಸಚಿವರು ಸಿ.ಎಂ ಜೊತೆ ಚರ್ಚಿಸಿ ಎಸ್.ಟಿ ಹೆಸರಿನ ಮೇಲೆ ಹಿಂದುಳಿದ ವರ್ಗದವರು ಪ್ರಮಾಣ ಪತ್ರ ಪಡೆದು ಮೀಸಲಾತಿ ದುರುಪಯೋಗ ಪಡಿಸಿಕೊಳ್ಳುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದು ಕೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾರುತಿ ಜಮಾದಾರ್, ಗುರು ಸುಭೇದಾರ್, ಗುರು ನರಬೋಳ, ಶ್ರವಣ ಕುಮಾರ್ ನಾಯಕ, ಮಹೇಶ ನಾಯಕ, ಬಾಗು ನಾಯಕ, ಮಹದೇವ ಚೂರಿ, ನಂದಕುಮಾರ ನಾಯಕ, ಸಾಯಿಬಣ್ಣ ಲಾಲ್ದಾಪುರು, ದೇವು ಲಕಣಾಪುರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್