ವಾಲ್ಮೀಕಿಗಳು ಜಾತಿ ಕಾಲಂನಲ್ಲಿ `ನಾಯಕ' ಎಂದು ನಮೂದಿಸಿ
ಬಳ್ಳಾರಿ, 27 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ - 2025ರಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ವಾಲ್ಮೀಕಿ ಸಮಾಜದ ಬಾಂಧವರು ಜಾತಿ ಕಾಲಂ ಸಂಖ್ಯೆ 9 ರಲ್ಲಿ `ನಾಯಕ'' ಸಂಖ್ಯೆ ಸಿ-38.2 ಎಂದು ಬರೆಸಬೇಕು ಎಂ
ವಾಲ್ಮೀಕಿಗಳು ಜಾತಿ ಕಾಲಂನಲ್ಲಿ `ನಾಯಕ' ಎಂದು ನಮೂದಿಸಿ


ಬಳ್ಳಾರಿ, 27 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ - 2025ರಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ವಾಲ್ಮೀಕಿ ಸಮಾಜದ ಬಾಂಧವರು ಜಾತಿ ಕಾಲಂ ಸಂಖ್ಯೆ 9 ರಲ್ಲಿ `ನಾಯಕ' ಸಂಖ್ಯೆ ಸಿ-38.2 ಎಂದು ಬರೆಸಬೇಕು ಎಂದು ಬಳ್ಳಾರಿ ಜಿಲ್ಲಾ ವಾಲ್ಮೀಕಿ ನಾಯಕರ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಬಿ. ರಾಂಪ್ರಸಾದ್ ಅವರು ಮನವಿ ಮಾಡಿದ್ದಾರೆ.

ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ಟ್ರಸ್ಟ್‍ನ ನಿರ್ದೇಶನದ ಪ್ರಕಾರ, ಪ್ರತಿಯೊಬ್ಬರೂ ಜಾತಿ ಕಾಲಂನಲ್ಲಿ `ನಾಯಕ' ಎಂದು, ಉಪ ಜಾತಿ ಕಾಲಂ 10 ರಲ್ಲಿ ಏನನ್ನೂ ಬರೆಸದೇ ಖಾಲಿ ಬಿಡಬೇಕು. ಅಲ್ಲದೇ, ಜಾತಿ ಕಾಲಂ ಸಂಖ್ಯೆ 11ರಲ್ಲಿ ನಮ್ಮ ಜಾತಿಗೆ ಇರುವ ಇನ್ನಿತರ ಸಮಾರ್ಥದ (ಪರ್ಯಾಯ) ಹೆಸರುಗಳಾದ ನಾಯಕ, ನಾಯಿಕ್, ನಾಯಕ್, ಬೇಡ, ಬೇಡರ್, ವಾಲ್ಮೀಕಿ, ನಾಯಕ ಪರಿವಾರ ಮತ್ತು ನಾಯಕ ತಳವಾರ ಎಂದು ಬರೆಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande