ವಿಜಯಪುರ, 27 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ 13 ಫಲಾನುಭವಿ ಆಧಾರಿತ ಯೋಜನೆಗಳನ್ನು 2025-26ನೇ ಸಾಲಿನಲ್ಲಿ ಸೇವಾಸಿಂಧು, ಗ್ರಾಮಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಸಿಟಿಜೆನ್ಸ್ ಫೋರ್ಟಲ್ ಆನ್‌ಲೈನ್ ತಂತ್ರಾಂಶದಡಿ ಅಳವಡಿಸಲಾಗಿದ್ದು, ಈ ಯೋಜನೆಯಡಿ ಸೌಲಭ್ಯ ಪಡೆಯಲು (https://sevasindhu.karnataka.gov.in/sevasindhu/Kannada) ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಅ.15ರವರೆಗೆ ವಿಸ್ತರಿಸಲಾಗಿದೆ.
ಫಲಾನುಭವಿಗಳು ಆನಲೈನ್ ಮೂಲಕ ಅರ್ಜಿ ಸಲ್ಲಿಸಿದ ಹಾರ್ಡಪ್ರತಿ ಅಗತ್ಯ ದಾಖಲೆ ಸಹಿತ ಜಿಲ್ಲೆಯ ವಿವಿದ್ದೊದ್ದೇಶ ಪುನರ್ವಸತಿ ಕಾರ್ಯಕರ್ತರಿಗೆ ಸಲ್ಲಿಸಬೇಕು. ಹಾರ್ಡ ಪ್ರತಿ ಸಲ್ಲಿಸದೇ ಇರುವ ಅರ್ಜಿ ತಿರಸ್ಕರಿಸಲಾಗುವುದು.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವಿಜಯಪುರ ಜಿಲ್ಲಾ ಸಂಯೋಜಕರಾದ ಪ್ರತಿಭಾ ಮೊ:9606151149, ವಿಜಯಪುರ ತಾಲೂಕಿನ ರವಿ ರಾಠೋಡ ಮೊ: 9035553337, ಸಿಂದಗಿ ತಾಲೂಕಿನ ಮುತ್ತುರಾಜ ಸಾತಿಹಾಳ ಮೊ: 9980019635, ಬಸವನಬಾಗೇವಾಡಿ ತಾಲೂಕಿನ ಶಿವಲೀಲಾ ಬಿರಾದಾರ ಮೊ: 8722135660,ಇಂಡಿ ತಾಲೂಕಿನ ಪರಶುರಾಮ ಭೋಸಲೆ ಮೊ:992441464 ಹಾಗೂ ಮುದ್ದೇಬಿಹಾಳ ತಾಲೂಕಿನ ಎಸ್.ಕೆ.ಘಾಟಿ ಮೊ: 9740682979 ಸಂಖ್ಯೆಗೆ ಸಂಪರ್ಕಿಸುವಂತೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande