ನವದೆಹಲಿ, 27 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಬಿಎಸ್‌ಎನ್‌ಎಲ್‌ನ ಸ್ವದೇಶಿ 4ಜಿ ನೆಟ್‌ವರ್ಕ್ ಉದ್ಘಾಟಿಸಲಿದ್ದಾರೆ.
ಈ ಯೋಜನೆಯಡಿ ದೇಶದಾದ್ಯಂತ 98,000 4ಜಿ ಟವರ್‌ಗಳು ಸ್ಥಾಪನೆಯಾಗಲಿದ್ದು, ಈಗಾಗಲೇ 22 ಮಿಲಿಯನ್ ಗ್ರಾಹಕರಿಗೆ ಸೇವೆ ಒದಗಿಸಲಾಗುತ್ತಿದೆ.
ಸ್ವದೇಶಿ ತಂತ್ರಜ್ಞಾನ ಆಧಾರಿತ ಈ ವ್ಯವಸ್ಥೆಯನ್ನು ತೇಜಸ್ ನೆಟ್‌ವರ್ಕ್ಸ್, ಸಿ-ಡಾಟ್ ಮತ್ತು ಟಿಸಿಎಸ್ ಅಭಿವೃದ್ಧಿಪಡಿಸಿದ್ದು, ಡಿಜಿಟಲ್ ಇಂಡಿಯಾ ಫಂಡ್ ಮೂಲಕ 29,000 ಹಳ್ಳಿಗಳಿಗೆ 4ಜಿ ಸಂಪರ್ಕ ಕಲ್ಪಿಸಲಾಗುತ್ತಿದೆ.
ಈ ಉಪಕ್ರಮವು ದೂರಸಂಪರ್ಕ ಸ್ವಾವಲಂಬನೆಗೆ ಮತ್ತು ಡಿಜಿಟಲ್ ಇಂಡಿಯಾ ದೃಷ್ಟಿಗೆ ಮಹತ್ವದ ಹೆಜ್ಜೆಯಾಗಿದೆ.
--
ಹಿಂದೂಸ್ತಾನ್ ಸಮಾಚಾರ್ / Rakesh Mahadevappa