ಹುಬ್ಬಳ್ಳಿ, 27 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಮಳೆಗಾಲದಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ನೆಗಡಿ, ಕೆಮ್ಮು, ಜ್ವರದಂತಹ ತೊಂದರೆಗಳು ಸಾಮಾನ್ಯವಾಗುತ್ತವೆ. ಇಂತಹ ಸಂದರ್ಭದಲ್ಲಿ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಶುಂಠಿ–ಬೆಳ್ಳುಳ್ಳಿ ಸೂಪ್ ಆರೋಗ್ಯಕ್ಕೆ ಮಾತ್ರವಲ್ಲ, ಹಸಿವನ್ನೂ ನೀಗಿಸುವ ಮನೆಮದ್ದಾಗಿದೆ.
ಈ ಸೂಪಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುಣ ಅಡಗಿದೆ. ಶುಂಠಿ ಮತ್ತು ಬೆಳ್ಳುಳ್ಳಿಯ ಸಂಯೋಜನೆ ಶ್ವಾಸಕೋಶಕ್ಕೆ ಬಲ ನೀಡುವುದರ ಜೊತೆಗೆ ಗಂಟಲು ನೋವು, ಕೆಮ್ಮು ತಗ್ಗಿಸಲು ಸಹಕಾರಿಯಾಗಿದೆ.
ಮಾಡುವ ವಿಧಾನ:
ಕರಿಮೆಣಸು, ಶುಂಠಿ, ಬೆಳ್ಳುಳ್ಳಿ, ತುಪ್ಪ, ಎಲೆಕೋಸು, ಕ್ಯಾರೆಟ್, ಜೋಳದ ಹಿಟ್ಟು ಹಾಗೂ ನೀರಿನಿಂದ ಈ ಸೂಪ್ ತಯಾರಿಸಲಾಗುತ್ತದೆ. ಮೊದಲು ಶುಂಠಿ–ಬೆಳ್ಳುಳ್ಳಿ ಪೇಸ್ಟ್‌ನ್ನು ತುಪ್ಪದಲ್ಲಿ ಹುರಿದು, ನಂತರ ತರಕಾರಿಗಳನ್ನು ಸೇರಿಸಿ ಕುದಿಸಿ, ಕೊನೆಯಲ್ಲಿ ಕರಿಮೆಣಸು ಪುಡಿ ಮತ್ತು ಜೋಳದ ನೀರು ಸೇರಿಸಿ ಗಟ್ಟಿಯಾಗುವಂತೆ ಬೇಯಿಸಿದರೆ ಬಿಸಿಬಿಸಿ ಸೂಪ್ ಸಿದ್ಧವಾಗುತ್ತದೆ.
ಮಕ್ಕಳು ಹಸಿವು ತೋರದ ಸಂದರ್ಭದಲ್ಲಿಯೂ ಈ ಸೂಪ್ ನೀಡುವುದರಿಂದ ಹಸಿವು ಹೆಚ್ಚುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.
ಮಳೆಯ ತೇವ ವಾತಾವರಣದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಇದು ಮನೆಮದ್ದಿನಲ್ಲೇ ಅತ್ಯಂತ ಸರಳ ಹಾಗೂ ಪರಿಣಾಮಕಾರಿ ವಿಧಾನವೆಂದು ಪರಿಗಣಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa