
ಹುಬ್ಬಳ್ಳಿ, 16 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಇಡ್ಲಿ ಎಂದರೆ ದಕ್ಷಿಣ ಭಾರತದ ಪ್ರತಿದಿನದ ಉಪಾಹಾರದ ಅವಿಭಾಜ್ಯ ಅಂಗ. ಸಾಮಾನ್ಯವಾಗಿ ರವಾ ಇಡ್ಲಿ, ಓಟ್ಸ್ ಇಡ್ಲಿ, ಸಬ್ಬಕ್ಕಿ ಇಡ್ಲಿ ಮುಂತಾದವುಗಳನ್ನು ಜನರು ಸವಿಯುತ್ತಾರೆ. ಆದರೆ ಇವತ್ತಿನ ನಮ್ಮ ಅಡುಗೆ ಕುಟೀರದಲ್ಲಿ ಸ್ವಲ್ಪ ವಿಭಿನ್ನ ರುಚಿ— ಬಾಳೆಹಣ್ಣಿನ ಇಡ್ಲಿ.
ಬೇಕಾಗುವ ಸಾಮಗ್ರಿಗಳು:
ಇಡ್ಲಿ ಹಿಟ್ಟು – 1 ಕಪ್, ಬೆಲ್ಲದ ಪೌಡರ್ – 6 ಚಮಚ, ಉಪ್ಪು – ಅಗತ್ಯಕ್ಕೆ ತಕ್ಕಷ್ಟು, ಏಲಕ್ಕಿ ಪುಡಿ – 1 ಚಿಟಿಕೆ, ಹೆಚ್ಚಿದ ಬಾಳೆಹಣ್ಣು – 1, ತೆಂಗಿನ ಹಾಲು – 1 ಕಪ್, ತುಪ್ಪ/ಬೆಣ್ಣೆ – ಸ್ವಲ್ಪ.
ಮಾಡುವ ವಿಧಾನ:
ಮೊದಲು ಇಡ್ಲಿ ಹಿಟ್ಟಿಗೆ 4 ಚಮಚ ಬೆಲ್ಲದ ಪೌಡರ್, ಉಪ್ಪು, ಹೆಚ್ಚಿದ ಬಾಳೆಹಣ್ಣು ಮತ್ತು ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಸಿ. ಇಡ್ಲಿ ಟ್ರೇಗೆ ತುಪ್ಪ/ಬೆಣ್ಣೆ ಸವರಿ ಮಿಶ್ರಣವನ್ನು ಹಾಕಿ, ಇಡ್ಲಿ ಬೇಯಿಸಿ. ನಂತರ ಪ್ಲೇಟ್‌ನಲ್ಲಿ ತೆಗೆದು ಇಡಿ.
ಸವಿಯುವ ವಿಧಾನ : ತೆಂಗಿನ ಹಾಲನ್ನು ಬಿಸಿ ಮಾಡಿ, ಅದಕ್ಕೆ 2 ಚಮಚ ಬೆಲ್ಲದ ಪೌಡರ್ ಸೇರಿಸಿ ಚೆನ್ನಾಗಿ ಕಲಸಿ. ಇದನ್ನು ಬಾಳೆಹಣ್ಣಿನ ಇಡ್ಲಿಗೆ ಜೊತೆ ನೀಡಿದರೆ ಅದ್ಭುತ ಸಿಹಿ ರುಚಿ ದೊರೆಯುತ್ತದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa