ಗಣತಿ ಮಾಡುವ ಸಿಬ್ಬಂದಿಗೆ ಎಚ್ಚರಿಕೆ ನೀಡಿದ ಡಿಸಿ
ಗದಗ, 27 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯಲ್ಲಿ ನಡೆಯುತ್ತಿರುವ ಜನಗಣತಿ ಕಾರ್ಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಎಚ್ಚರಿಕೆ ನೀಡಿದ್ದಾರೆ. ನಿನ್ನೆ ಸಂಜೆ ಗಣತಿದಾರರೊಂದಿಗೆ ನಡೆದ ಗ್ರೂಪ್ ಕಾಲ್‌ನಲ್ಲಿ ಅವರು ಮಾತನಾಡಿ, “ಮೊದಲ ಎರಡು ದಿನ ನಮ್ಮ ಜಿಲ್ಲೆ ಮುಂಚಿತ
ಪೋಟೋ


ಗದಗ, 27 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯಲ್ಲಿ ನಡೆಯುತ್ತಿರುವ ಜನಗಣತಿ ಕಾರ್ಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಎಚ್ಚರಿಕೆ ನೀಡಿದ್ದಾರೆ.

ನಿನ್ನೆ ಸಂಜೆ ಗಣತಿದಾರರೊಂದಿಗೆ ನಡೆದ ಗ್ರೂಪ್ ಕಾಲ್‌ನಲ್ಲಿ ಅವರು ಮಾತನಾಡಿ, “ಮೊದಲ ಎರಡು ದಿನ ನಮ್ಮ ಜಿಲ್ಲೆ ಮುಂಚಿತ ಸ್ಥಾನದಲ್ಲಿತ್ತು. ಆದರೆ ಇದೀಗ 5-6ನೇ ಸ್ಥಾನಕ್ಕೆ ಇಳಿದಿದೆ. ಸರ್ವೇ ಕಾರ್ಯ ನಿಧಾನಗತಿಯಲ್ಲಿ ನಡೆಯುತ್ತಿದೆ. ಆ್ಯಪ್ ಇಂದು ಯಾವುದೇ ತೊಂದರೆ ಕೊಡದೆ ಸರಾಗವಾಗಿ ಕಾರ್ಯನಿರ್ವಹಿಸಿದೆ. ಆದರೆ ಕೆಲವರು ಸೋಮಾರಿಗಳಂತೆ ವರ್ತಿಸುತ್ತಿದ್ದಾರೆ. ಒಬ್ಬೊಬ್ಬರಿಗೆ 80-90 ಮನೆಗಳ ಸರ್ವೇ ನೀಡಲಾಗಿದೆ. ನಾಲ್ಕು ದಿನಗಳಲ್ಲಿ ಎಲ್ಲ ಮನೆಗಳ ಸರ್ವೇ ಪೂರ್ಣಗೊಳಿಸಬೇಕು. ನೆಪ ಹೇಳಿದ್ರೆ ಕೇಳಲ್ಲ, ಕೆಲಸಕ್ಕೆ ದ್ರೋಹ ಒಪ್ಪಲ್ಲ. ಸಸ್ಪೆಂಡ್ ಕ್ರಮಕ್ಕೆ ಅವಕಾಶ ಮಾಡಿಕೊಳ್ಳಬೇಡಿ” ಎಂದು ಎಚ್ಚರಿಸಿದರು.

ಡಿಸಿ ಅವರು, “ಇಂದು ಬೆಳಗ್ಗೆ 9 ಗಂಟೆಯೊಳಗೆ ಪ್ರತಿಯೊಬ್ಬ ಗಣತಿದಾರರು ಲಾಗಿನ್ ಆಗಿ ಕನಿಷ್ಠ ಎರಡು ಮನೆಗಳ ಸರ್ವೇ ಪೂರ್ಣಗೊಳಿಸಬೇಕು. ಇಂದು 60 ಜನ ಲಾಗಿನ್ ಆಗದೇ ಇದ್ದರೆ, 150 ಜನ ಮಾತ್ರ ಲಾಗಿನ್ ಮಾಡಿದ್ದಾರೆ. ಈ ರೀತಿಯ ನಿರ್ಲಕ್ಷ್ಯ ಸಹಿಸಲಾರದು. ಸರ್ಕಾರಕ್ಕೆ ನಾವು ಎರಡು ದಿನ ಮುಂಚಿತವಾಗಿ ಸರ್ವೇ ಮುಗಿಸುವ ಭರವಸೆ ನೀಡಿದ್ದೇವೆ. ಇತರ ಜಿಲ್ಲೆಗಳಲ್ಲಿ 20 ಸಾವಿರ ಮನೆಗಳ ಸರ್ವೇ ಮುಗಿದರೆ, ನಮ್ಮ ಜಿಲ್ಲೆಯಲ್ಲಿ ಕೇವಲ 4-5 ಸಾವಿರ ಮನೆಗಳಷ್ಟೇ ಮುಗಿದಿವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆದರೆ ಈ ಎಚ್ಚರಿಕೆಯ ನಡುವೆ ಗಣತಿದಾರರು ತಾಂತ್ರಿಕ ಸಮಸ್ಯೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಸರ್ವರ್ ಹಾಗೂ ಆ್ಯಪ್ ಸಮಸ್ಯೆಗಳು ಮರುಮರು ಎದುರಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಗುರಿ ನೀಡಿ ಒತ್ತಡ ಹೇರುವುದು ಶಿಕ್ಷಕರ ಮೇಲೆ ಅನ್ಯಾಯ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಡಿಸಿಯವರ ಸಸ್ಪೆಂಡ್ ಎಚ್ಚರಿಕೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಿಕ್ಷಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande