ಅರ್ಹ ಬಿ.ಪಿ.ಎಲ್ ರದ್ದು ಖಂಡಿಸಿ ಸೆಪ್ಟಂಬರ್ 29 ರಂದು ಪ್ರತಿಭಟನೆ : ಇಮ್ತಿಯಾಜ್ ಮಾನ್ವಿ
ಗದಗ, 26 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ರಾಜ್ಯ ಸರ್ಕಾರ ರಾಜ್ಯಾಧ್ಯಂತ 8 ಲಕ್ಷಕ್ಕೂ ಹೆಚ್ಚು ಬಡವರ ಬಿ.ಪಿ.ಎಲ್ ಪಡಿತರ ಚೀಟಿಗಳನ್ನು ಏಕಾಏಕಿಯಾಗಿ ರದ್ದುಗೊಳಿಸಲು ಮುಂದಾಗಿರುವುದನ್ನು ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಗದಗ ಜಿಲ್ಲಾ ಸ್ಲಂ ಸಮಿತಿ ಖಂಡಿಸುತ್ತದೆ. ಬಿಪಿಎಲ್ ಕಾರ್ಡ್ ರದ್ದಾಗಿದ್ದರಿಂದ ಬ
ಪೋಟೋ


ಗದಗ, 26 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ರಾಜ್ಯ ಸರ್ಕಾರ ರಾಜ್ಯಾಧ್ಯಂತ 8 ಲಕ್ಷಕ್ಕೂ ಹೆಚ್ಚು ಬಡವರ ಬಿ.ಪಿ.ಎಲ್ ಪಡಿತರ ಚೀಟಿಗಳನ್ನು ಏಕಾಏಕಿಯಾಗಿ ರದ್ದುಗೊಳಿಸಲು ಮುಂದಾಗಿರುವುದನ್ನು ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಗದಗ ಜಿಲ್ಲಾ ಸ್ಲಂ ಸಮಿತಿ ಖಂಡಿಸುತ್ತದೆ. ಬಿಪಿಎಲ್ ಕಾರ್ಡ್ ರದ್ದಾಗಿದ್ದರಿಂದ ಬಡವರು ಆಹಾರ ಇಲಾಖೆ ಮುಂದೆ ಕಣ್ಣಿರು ಹಾಕುತ್ತಿದ್ದಾರೆ.

ಇದನ್ನು ಖಂಡಿಸಿ ಸೆಪ್ಟಂಬರ್ 29 ರಂದು ಗಾಂಧಿ ಸರ್ಕಲ್ ನಿಂದ ಆಹಾರ ಇಲಾಖೆ ಕಛೇರಿ ವರೆಗೆ ಪ್ರತಿಭಟನೆ ನಡೆಸಲಾಗುವುದು ಅಂತ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಇಮ್ತಿಯಾಜ್ ಮಾನ್ವಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸೂಚನೆಯಂತೆ ಅನರ್ಹ ಪಡಿತರ ಚೀಟಿಗಳನ್ನು ಮಾತ್ರ ರದ್ದುಗೊಳಿಸಲಾಗುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ಆದರೆ, ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಚುನಾವಣೆ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಜಾರಿಗೆ ತರುವ ಮೂಲಕ ರಾಜ್ಯದ ಎಲ್ಲಾ ಜನರಿಗೆ ಆರ್ಥಿಕವಾಗಿ ಸಹಾಯ ಮಾಡಲಾಗುವುದೆಂದು ಎಂದು ಜನತೆಗೆ ಕೊಟ್ಟ ಭರವಸೆಯನ್ನು ಮರೆತು ಕೇಂದ್ರ ಸರ್ಕಾರದ ಸೂಚನೆಯಂತೆ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗುತ್ತದೆ ಅಂತ ಹೇಳುತ್ತಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿಡರು.

ಉಳ್ಳವರ ಪಡಿತರ ಚೀಟಿಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿ ರದ್ದುಗೊಳಿಸಲಿ. ಆದರೆ ಅಧಿಕಾರಿಗಳು ಸಮೀಕ್ಷೆಯನ್ನು ನಡೆಸದೇ, ಫಲಾನುಭವಿಗಳಿಗೆ ನೋಟಿಸ್ ನೀಡದೇ ಪಡಿತರ ಅಂಗಡಿಗಳ ಮುಂದೆ ಅನರ್ಹ ಪಡಿತರ ಚೀಟಿಗಳ ಮಾಹಿತಿಯನ್ನು ಹಚ್ಚದೇ ಏಕಾಏಕಿಯಾಗಿ ನಗರದ ಸಾವಿರಾರು ಕಾರ್ಡಗಳನ್ನು ರದ್ದುಗೊಳಿಸಿದ ಕ್ರಮವನ್ನು ಖಂಡಿಸುತ್ತೇವೆ. ಗದಗ ಜಿಲ್ಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳ ಯಡವಟ್ಟಿನಿಂದ ಸಾವಿರಾರು ಬಡ ಕೊಲಿ-ಕಾರ್ಮಿಕರ ಬಿ.ಪಿ.ಎಲ್ ಕಾರ್ಡಗಳನ್ನು ರದ್ದುಗೊಳಿಸಿ ಜನರನ್ನು ಕಚೇರಿಗಳಿಗೆ ಅಲೆದಾಡಿಸುತ್ತಿದ್ದಾರೆ ಎಂದರು.

ಆಹಾರ ಇಲಾಖೆಯಿಂದ ಯಾವುದೇ ಮುನ್ಸೂಚನೆ ನೀಡಿಲ್ಲ, ಫಲಾನುಭವಿಗಳು ಪಡಿತರ ಅಂಗಡಿಗಳಿಗೆ ಆಹಾರ ಧಾನ್ಯಗಳನ್ನು ಪಡೆದುಕೊಳ್ಳಲು ಹೋದಾಗ ಅವರ ಪಡಿತರ ಚೀಟಿಗಳನ್ನು ರದ್ದುಗೊಂಡಿರುವ ವಿಷಯ ತಿಳಿದು ಸಾವಿರಾರು ಬಡ ಕುಟುಂಬಗಳು ಕಣ್ಣೀರು ಹಾಕುತ್ತಿವೆ. ಕೇಂದ್ರ ಸರ್ಕಾರದ ಮಾರ್ಗ-ಸೂಚಿಯಂತೆ ನಾವು ಪಡಿತರ ಚೀಟಿಗಳನ್ನು ರದ್ದು ಮಾಡಿದ್ದೇವೆ ಎಂದು ಹೇಳಿ ರಾಜ್ಯದ ಲಕ್ಷಾಂತರ ಬಡ ಕುಟುಂಬಗಳನ್ನು ಸರ್ಕಾರ ಬೀದಿಗೆ ತಂದಿದೆ. ಪಂಚ ಗ್ಯಾರಂಟಿ ಹೆಸರಿನಲ್ಲಿ ಲಕ್ಷಾಂತರ ಬಡ ಕುಟುಂಬಗಳಿಗೆ ವಂಚಿಸಲಾಗುತ್ತಿದೆ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರ ಬಡವರಿಗೆ ಒಂದು ಕೈಯಿಂದ ಕೊಟ್ಟು ಮತ್ತೊಂದು ಕೈಯಿಂದ ಕಿತ್ತುಕೊಳ್ಳುವ ಹುನ್ನಾರ ಮಾಡುತ್ತಿದೆ. ಬಿ.ಪಿ.ಎಲ್ ಕಾರ್ಡಗಳನ್ನು ರದ್ದುಗೊಳಿಸುವ ಹಾಗೂ ಬಿ.ಪಿ.ಎಲ್ ಕಾರ್ಡಗಳಿಂದ ಎ.ಪಿ.ಎಲ್ ಕಾರ್ಡಗಳಾಗಿ ಪರಿವರ್ತನೆ ಮಾಡುವ ಮುಂಚೆ ಫಲಾನುಭವಿಗಳಿಗೆ ಆಹಾರ ಇಲಾಖೆಯಿಂದ ನೋಟಿಸ್ ಕೊಡಬೇಕು. ಒಂದು ವೇಳೆ ಸರ್ಕಾರದ ಸೂಚನೆಯಂತೆ ಕಾರ್ಡಗಳನ್ನು ರದ್ದುಗೊಳಿಸಬೇಕಾದರೆ ಫಲಾನುಭವಿಗಳಿಗೆ ನೋಟಿಸ್ ನೀಡಿ ದಾಖಲೆಗಳನ್ನು ಪರಿಶೀಲನೆ ಮಾಡುವ ಅವಕಾಶವನ್ನು ನೀಡಬೇಕು ಅಂತ ಆಗ್ರಹಿಸಿದರು.

ಆರೋಗ್ಯ ಸಮಸ್ಯೆಯಾದಾಗ ಬಿ.ಪಿ.ಎಲ್ ಕಾರ್ಡ್ ಬಡವರಿಗೆ ಅತೀ ಅವಶ್ಯಕವಾಗಿದೆ. ಈ ಕಾರ್ಡ್ ಗಳನ್ನು ರದ್ದುಗೋಳಿಸಿದ್ದರಿಂದ ಬಡವರು ತೊಂದರೆ ಅನುಭವಿಸುತ್ತಾರೆ. ಸರ್ಕಾರ ನೀಡುವ ಉಚಿತ ಅಕ್ಕಿಯಿಂದ ಬಡವರು ಜೀವನ ಸಾಗಿಸುತ್ತಿದ್ದಾರೆ. ಹಾಗಾಗಿ ಕೂಡಲೇ ರಾಜ್ಯ ಸರ್ಕಾರ ಬಿ.ಪಿ.ಎಲ್ ಕಾರ್ಡ್ ರದ್ದು ಮಾಡಿರುವ ಕ್ರಮವನ್ನು ಹಿಂಪಡೆಯಬೇಕು.

ಈ ವೇಳೆ ಮುಕ್ತುಂಸಾಬ್ ಮುಲ್ಲಾನವರ, ಶರಣಪ್ಪ ಸೂಡಿ, ಇಮ್ರಾಹಿಂಸಾಬ್ ಮುಲ್ಲಾ, ಮೌಲಾಸಾಬ್ ಗಚ್ಚಿ, ಮೆಹಬೂಬಸಾಬ್ ಬಳ್ಳಾರಿ, ಅಶೋಕ ಕುಸಬಿ, ರವಿ ಗೋಸಾವಿ, ಮಂಜುನಾಥ ಶ್ರೀಗಿರಿ, ಸಲೀಂ ಹರಿಹರ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande