ಮಿಗ್-21 ಭಾರತೀಯರ ಹೃದಯಗಳಲ್ಲಿ ಸ್ಮರಣೀಯ : ರಾಜನಾಥ ಸಿಂಗ್
ಚಂಡೀಗಡ, 26 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ದಶಕಗಳ ಸೇವೆಯನ್ನು ಸಲ್ಲಿಸಿರುವ ಮಿಗ್-21 ಯುದ್ಧವಿಮಾನಕ್ಕೆ ಇಂದು ಚಂಡೀಗಢದಲ್ಲಿ ಭವ್ಯ ವಿದಾಯ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಾತನಾಡಿ, ಮಿಗ್-21 ಭಾರತೀಯ ವಾಯುಪಡೆಯ ಅಜರಾಮರ ಶಕ್ತಿಯ ಪ್ರತೀಕವಾಗಿತ್ತು ಎಂದ
ಮಿಗ್-21 ಭಾರತೀಯರ ಹೃದಯಗಳಲ್ಲಿ ಸ್ಮರಣೀಯ : ರಾಜನಾಥ ಸಿಂಗ್


ಚಂಡೀಗಡ, 26 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ದಶಕಗಳ ಸೇವೆಯನ್ನು ಸಲ್ಲಿಸಿರುವ ಮಿಗ್-21 ಯುದ್ಧವಿಮಾನಕ್ಕೆ ಇಂದು ಚಂಡೀಗಢದಲ್ಲಿ ಭವ್ಯ ವಿದಾಯ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಾತನಾಡಿ, ಮಿಗ್-21 ಭಾರತೀಯ ವಾಯುಪಡೆಯ ಅಜರಾಮರ ಶಕ್ತಿಯ ಪ್ರತೀಕವಾಗಿತ್ತು ಎಂದರು.

1963ರಲ್ಲಿ ಸೇರ್ಪಡೆಯಾದ ಮಿಗ್-21, 1971ರ ಯುದ್ಧ, ಕಾರ್ಗಿಲ್ ಯುದ್ಧ, ಬಾಲಕೋಟ್ ವೈಮಾನಿಕ ದಾಳಿ ಮತ್ತು ಇತ್ತೀಚಿನ ಆಪರೇಷನ್ ಸಿಂಧೂರವರೆಗೂ ಅನೇಕ ನಿರ್ಣಾಯಕ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ವಹಿಸಿತು. ಮಿಗ್-21 ನಮ್ಮ ತ್ರಿವರ್ಣ ಧ್ವಜದ ಗೌರವವನ್ನು ಹೆಚ್ಚಿಸಿದ್ದು, ದೇಶದ ಹೆಮ್ಮೆ, ಧೈರ್ಯ ಮತ್ತು ತ್ಯಾಗದ ಕಥೆಯನ್ನು ಬರೆದಿದೆ, ಎಂದು ರಾಜನಾಥ್ ಸಿಂಗ್ ಶ್ಲಾಘಿಸಿದರು.

ಮಿಗ್-21 ಕೇವಲ ಫೈಟರ್ ಜೆಟ್ ಅಲ್ಲ, ಇದು ನಮ್ಮ ದೇಶದ ನೆನಪು ಮತ್ತು ಭಾವನೆಗಳ ಭಾಗವಾಗಿದೆ. ಇದು ನಮ್ಮ ವಿಶ್ವಾಸವನ್ನು ರೂಪಿಸಿದ್ದು, ಕಾರ್ಯತಂತ್ರವನ್ನು ಬಲಪಡಿಸಿ, ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಸ್ಥಾಪಿಸಲು ನೆರವಾಗಿದೆ, ಎಂದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande