ರಾಯಚೂರು, 26 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕ್ರೀಡೆಯು ವ್ಯಕ್ತಿಯನ್ನು ಮಾನಸಿಕ ಹಾಗೂ ದೈಹಿಕವಾಗಿ ಸದೃಢಗೊಳಿಸುತ್ತದೆ ಉತ್ತಮ ಕ್ರೀಡಾಪಟುಗಳಾಗಿ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೋ.ಜ್ಯೋತಿ ದಮ್ಮ ಪ್ರಕಾಶ್ ಅವರು ಹೇಳಿದ್ದಾರೆ.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದಲ್ಲಿ ಪುರುಷರ ಕಬಡ್ಡಿ ಪಂದ್ಯಾವಳಿ ಮತ್ತು ವಿಶ್ವವಿದ್ಯಾಲಯ ತಂಡದ ಆಯ್ಕೆ ಪ್ರಕ್ರಿಯೆ 2025-26 ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಜೀವನಶೈಲಿ, ಕ್ರೀಡಾ ಮನೋಭಾವ, ಶಿಸ್ತು, ಕ್ರೀಡಾ ಕೌಶಲ್ಯ ಬೆಳೆಸಲು, ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲು ಮತ್ತು ಉನ್ನತ ಮಟ್ಟದ ಕ್ರೀಡಾ ಸಾಧನೆಗಳನ್ನು ಉತ್ತೇಜಿಸಲು ಪಂದ್ಯಾವಳಿ ಹಮ್ಮಿಕೊಳ್ಳುವುದು ಮುಖ್ಯವಾಗಿದೆ.
ವಿದ್ಯಾರ್ಥಿಗಳು ತಮ್ಮ ಸಾಮಥ್ರ್ಯವನ್ನು ಕ್ರೀಡಾ ಪ್ರದರ್ಶನವಾಗಿ ಪರಿವರ್ತಿಸಲು ಅಗತ್ಯವಿರುವ ಮಾರ್ಗದರ್ಶನ ಮತ್ತು ಕ್ರೀಡಾ ಸಮಯವನ್ನು ಮತ್ತು ದಕ್ಷಿಣ ವಲಯ ಪಂದ್ಯಾವಳಿಯಲ್ಲಿ ಭಾಗವಹಿಸಲು, ಕ್ರೀಡಾಪಟುಗಳು ವಿಶ್ವವಿದ್ಯಾನಿಲಯ/ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದ ಸಭೆಗಳಲ್ಲಿ ಉತ್ತಮ ಸಾಧನೆ ಮಾಡಲು ತರಬೇತಿ ನೀಡುವ ಜೊತೆಗೆ ವಿಶ್ವವಿದ್ಯಾಲಯವು ಪೆÇ್ರೀತ್ಸಾಹಿಸುತ್ತದೆ ಎಂದು ಅವರು ನುಡಿದರು.
ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ.ಎ.ಚನ್ನಪ್ಪ ಕೆ.ಎ.ಎಸ್ ಇವರು ಅಂತಿಮ ಕಬಡ್ಡಿ ಸ್ಪರ್ಧೆ ವೀP್ಷÀಣೆಗೆ ಸಾಕ್ಷಿಯಾಗುವುದಲ್ಲದೆ ಸಮಾರೋಪ ವೇದಿಕೆಯಲ್ಲಿ ವಿಜೇತರಾದ ಲಿಂಗಸೂಗೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ ಸ್ಥಾನ, ರಾಯಚೂರಿನ ವಿಆರ್‍ಈಟಿ ಕಾಲೇಜಿಗೆ ದ್ವಿತೀಯ ಬಹುಮಾನ ವಿತರಿಸಿ ಮುಂದಿನ ರಾಷ್ಟ್ರ ಮಟ್ಟದ ಪಂದ್ಯಾವಳಿಯಲ್ಲಿ ನಮ್ಮ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ ಭಾಗವಹಿಸುವವರಿಗೆ ಶುಭ ಹಾರೈಸಿದರು.
ಉಪ ಕುಲಸಚಿವರಾದ ಡಾ.ಕೆ.ವೆಂಕಟೇಶ್ ಮಾತನಾಡುತ್ತಾ ಕ್ರೀಡೆ ಮತ್ತು ದೈಹಿಕ ಚಟುವಟಿಕೆಯ ಬಗ್ಗೆ ಜೀವಮಾನದ ಪ್ರೀತಿಯನ್ನು ಉತ್ತೇಜಿಸಲು ನಮ್ಮ ಕ್ರೀಡಾ ತರಬೇತಿ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಲಾಗಿದೆ. ಕ್ರೀಡೆಗಳಲ್ಲಿ ಸೋಲು-ಗೆಲುವು ಮುಖ್ಯವಲ್ಲ ವಿದ್ಯಾರ್ಥಿಗಳು ಮೊದಲು ಆಸಕ್ತಿಯಿಂದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದು ಮುಖ್ಯ. ಆಶಾ ಭಾವನೆಯೊಂದಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವಂತಹ ಛಲ ಹೊಂದಬೇಕು. ಆಗ ಮಾತ್ರ ದೊಡ್ಡ ಮಟ್ಟದ ಸಾಧನೆ ಮಾಡಲು ಸಾಧ್ಯ ಎಂದು ಅವರು ಹೇಳಿದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಅಡಿಯಲ್ಲಿ ಬರುವ ಸುಮಾರು 15 ಕಾಲೇಜುಗಳ ನಡುವೆ ಕಬಡ್ಡಿ ಕ್ರೀಡಾಕೂಟ ಏರ್ಪಡಿಸಲಾಗಿತ್ತು. ವಿವಿಧ ಮಹಾವಿದ್ಯಾಲಯಗಳ ಪ್ರಾಚಾರ್ಯರು, ಉಪನ್ಯಾಸಕರು, ಕ್ರೀಡಾ ವಿಭಾಗದ ಸಂಯೋಜಕರು, ದೈಹಿಕ ಶಿP್ಷÀಣ ನಿರ್ದೇಶಕರು, ತರಬೇತುದಾರರು, ವಿದ್ಯಾರ್ಥಿ ಕ್ರೀಡಾ ಪಟುಗಳು, ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇಂಗ್ಲಿಷ್ ವಿಭಾಗದ ಉಪನ್ಯಾಸಕರಾದ ಅನಿಲ್ ಅಪ್ರಾಳ್ ಸ್ವಾಗತಿಸಿ, ನಿರೂಪಿಸಿದರೆ, ಕ್ರೀಡಾ ವಿಭಾಗದ ಸಂಯೋಜಕರಾದ ಮಲ್ಲಿಕಾರ್ಜುನ್.ಎನ್ ಪಂದ್ಯಾವಳಿ ರೂಪಿಸಿ ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್