ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಚಿತ್ರಕಲಾ ಶಿಬಿರಕ್ಕೆ ಚಾಲನೆ
ವಿಜಯಪುರ, 26 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ನಾವು ಆದಿಕಾಲದಲ್ಲಿ ಗಿಡ ಮರಗಳ ಅಡಿಯಲ್ಲಿ ವಿವಿಧ ಪ್ರಕಾರಗಳ ವೈವಿದ್ಯಮಯ ಆಟ ಪಾಟ, ವಿದ್ಯಾಭ್ಯಾಸದ ಜೊತೆಗೆ ಇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಸಂತೋಷವನ್ನು ಹಂಚಿಕೊಳ್ಳುವ ಪ್ರಸಂಗ ಇಂದು ಮರಳಿ ನೆನಪಿಸುವಂತಾಗಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾ
ಪ್ರವಾಸೋದ್ಯಮ


ವಿಜಯಪುರ, 26 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ನಾವು ಆದಿಕಾಲದಲ್ಲಿ ಗಿಡ ಮರಗಳ ಅಡಿಯಲ್ಲಿ ವಿವಿಧ ಪ್ರಕಾರಗಳ ವೈವಿದ್ಯಮಯ ಆಟ ಪಾಟ, ವಿದ್ಯಾಭ್ಯಾಸದ ಜೊತೆಗೆ ಇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಸಂತೋಷವನ್ನು ಹಂಚಿಕೊಳ್ಳುವ ಪ್ರಸಂಗ ಇಂದು ಮರಳಿ ನೆನಪಿಸುವಂತಾಗಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಧಾರವಾಡ ವೃತ್ತದ ಅಧೀಕ್ಷಕ ಪುರಾತತ್ವವೀಧರರಾದ ರಮೇಶ ಮೂಲಿಮನಿ ಹೇಳಿದರು.

ನಗರದ ಗೋಳಗುಮ್ಮಟ ಆವರಣದಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಜೈನ್ ವಿಶ್ವವಿದ್ಯಾಲಯ ಬೆಂಗಳೂರು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಪ್ರವಾಸೋದ್ಯಮ ಮಂತ್ರಾಲಯ ಬೆಂಗಳೂರು ಹಾಗೂ ಕ್ಯಾನವಾಸ್ ಆರ್ಟ್ ಫೌಂಡೇಶನ್ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದ ಚಿತ್ರಕಲಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಮಳೆಯ ಮಧ್ಯೆಯೇ ಸಾಕಷ್ಟು ಯುವಕ ಯುವತಿಯರು ಈ ಚಿತ್ರಕಲಾ ಶಿಬಿರದಲ್ಲಿ ಪಾಲ್ಗೊಂಡಿದ್ದು ಎಲ್ಲರೂ ಸಕಾರಾತ್ಮಕ ಭಾವನೆ ಹೊಂದಿ ಶಿಭಿರವನ್ನು ಯಶಸ್ವಿಗೊಳಿಸುವಂತೆ ಹಾಗೂ ಎಲ್ಲರಿಗೂ ಶುಭವಾಗಲೆಂದು ಹಾರೈಸಿದರು.

ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಅರವಿಂದ ಹೂಗಾರ ಮಾತನಾಡಿ ತಾವೆಲ್ಲರೂ ಈ ಚಿತ್ರಕಲಾ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ತಂದಿದ್ದು, ಚಿತ್ರಕಲಾ ಶಿಬಿರದ ಮೂಲಕ ಶಿಬಿರದ ಉದ್ದೇಶ ಯಶಸ್ವಿಗೆ ಸಹಕರಿಸಬೇಕು ಎಂದು ಅವರು ಹೇಳಿದರು.

ಬೆಂಗಳೂರಿನ ಚಿಂತಾಮಣಿ ಕಲಾಕೇಂದ್ರದ ಜೈನ್(ಡೀಮ್-ಟು ಬಿ) ವಿಶ್ವವಿದ್ಯಾಲಯ ಡೀನ್ ಡಾ. ಅವಿನಾಶ ಕಾಟೆ ಅವರು ಮಾತನಾಡಿ, ಇಂದು ಹಲವಾರು ಚಿತ್ರಕಲಾ ವಿದ್ಯಾಲಯಗಳು ಮುಚ್ಚುವ ಸ್ಥಿತಿಯಲ್ಲಿವೆ. ಈ ಚಿತ್ರಕಲೆಯನ್ನು ಸಂರಕ್ಷಿಸಿ ಬೆಳೆಸುವ ಅವಶ್ಯಕತೆ ಇದೆ. ಈ ದಿಸೆಯಲ್ಲಿ ನಮ್ಮ ವಿಶ್ವವಿದ್ಯಾಲಯದಿಂದ ಪದವಿ, ಸ್ನಾತ್ತಕೋತ್ರರ ಪದವಿಧರರಿಗೆ ಹಾಗೂ ಸಂಶೋದನೆ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಕೊಡುವ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ಅಂತರಾಷ್ಟ್ರೀಯ ಮಟ್ಟದಲ್ಲಿ ಚಿತ್ರಕಲಾ ಶಿಬಿರಗಳನ್ನು ಆಯೋಜನೆ ಮಾಡಲು ಚಿಂತಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಾಗಲಕೋಟೆಯ ಬದಾಮಿಯಲ್ಲಿ ಆಯೋಜಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಚಿತ್ರಕಲೆಯಲ್ಲಿ ತೊಡಗಿಕೊಂಡ ಯುವಕ-ಯುವತಿಯರಿಗೆ ಪ್ರೋತ್ಸಾಹಿಸಲಾಗುವುದು. ಈ ನಿಟ್ಟಿನಲ್ಲಿ ಹಲವಾರು ವಿದ್ಯಾಲಯಗಳನ್ನು ತೆರೆಯಲು ಕ್ರಮವಹಿಸಲಾಗುವುದು. ತಮಗೆ ಯಾವುದೇ ರೀತಿಯ ಸಹಾಯ ಬಯಸಿ ನಮ್ಮನ್ನು ಸಂಪರ್ಕಿಸಿದಲ್ಲಿ ಎಲ್ಲ ರೀತಿಯ ಸಹಾಯ ಸಹಕಾರ ನೀಡುವುದಾಗಿ ಅವರು ತಿಳಿಸಿದರು.

ಈ ಶಿಭಿರದಲ್ಲಿ ಭಾಗವಹಿಸಿದ ಕಲಾವಿದರಿಂದ ವಿವಿಧ ಕಲಾಕೃತಿಗಳನ್ನು ರಚಿಸಲಾಯಿತು. ಶಿಬಿರದಲ್ಲಿ ಹಿರಿಯ ಕಲಾವಿದರಾದ ಪಿ.ಎಸ್ ಕಡೇಮನಿ, ಮಹಾನಗರ ಪಾಲಿಕೆ ಸದಸ್ಯರಾದ ದಿನೇಶ ಹಳ್ಳಿ, ಮಹೇಶ ಕ್ಯಾತನ್, ಚಂದ್ರಕಾಂತ ಶೆಟ್ಟಿ, ವಿದ್ಯಾಧರ ಸಾಲಿ, ನರಸಿಂಹಮೂರ್ತಿ, ಜೀವಿ ಹಂಪಣ್ಣವರ, ಲಿಂಗರಾಜ್ ಕಾಚಾಪುರ, ಗಾಘವೇಂದ್ರ ಪಾಟೀಲ್, ವಿಶ್ವನಾಥ ಎಚ್.ಎಮ್, ಶಿವಾನಂದ ಅಥಣಿ, ಮುಸ್ತಾಕ್ ತಿಕೋಟ, ಡಾ.ರಹಮಾನ್ ಪಟೇಲ್, ರಾಜಶೇಖರ ಶಾಮಣ್ಣ, ಡಾ. ಶಶಿಕಲಾ ಹೂಗಾರ, ಎಂ.ಜಿ ಮಕಾಂದಾರ,ಸುಬಾಸ ಕೆಂಬಾವಿ, ರುದ್ರೇಶ ಕುಂಬಾರ, ದಾದಾ ಚಿತ್ರದುರ್ಗ,ಮದನ್, ವಿಶ್ವನಾಥ ಹಂಡಿ,ಪ್ರಶಾಂತ ಮನಗೂಳಿ, ಆನಂದ ಮಹಾಂತಮಠ, ಬಸವರಾಜ ಪಾಟೀಲ್, ಶಿವಣ್ಣ ಗೊಳಸಂಗಿ, ಅಮಿತ ಕಮ್ಮಾರ, ಡಾ.ಸುಬ್ಬಯ್ಯ ನೀಲಾ, ಮಹಾದೇವಿ ಕೊಪ್ಪದ, ದಾಕ್ಷಾಯಣಿ ವಿಮನಾಥ ಹಾಗೂ ರಾಜ್ಯದ ಇತರೆ ಕಲಾವಿದರು ಭಾಗವಹಿಸಿದ್ದರು.

ಕ್ಯಾನವಾಸ್ ಆರ್ಟ್ ಫೌಂಡೇಶನ್ ಕಾರ್ಯದರ್ಶಿಗಳಾದ ರಮೇಶ ಚವ್ಹಾಣ ಶಿಭಿರಕ್ಕೆ ಆಗಮಸಿದ ಎಲ್ಲರನ್ನು ಸ್ವಾಗತಿಸಿ ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande