ಪರಿಸರದಲ್ಲಿ ಏರೋಸೋಲ್ಸ್‍ನಿಂದ ದುಷ್ಪರಿಣಾಮ – ಪ್ರೊ.ಟೋಮೋಕಿ ನಕಾಯಾಮ
ಬಳ್ಳಾರಿ, 26 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಪರಿಸರದಲ್ಲಿರುವ ಏರೋಸೋಲ್ಸ್ ಕಣಗಳು ಮನುಷ್ಯರ ಆರೋಗ್ಯ ಮತ್ತು ಸುತ್ತಲಿನ ಪರಿಸರವನ್ನು ಯಾವ ರೀತಿಯಾಗಿ ದುಷ್ಪರಿಣಾಮ ಬೀರುತ್ತವೆ ಎಂದು ಜಪಾನ್‍ನ ನಾಗಸಾಕಿ ವಿಶ್ವವಿದ್ಯಾಲಯದ ಪ್ರೊ. ಟೊಮೊಕಿ ನಕಯಾಮ ಅವರು ತಿಳಿಸಿದ್ದಾರೆ. ಶ್ರೀಮತಿ ಸರಳಾದೇವಿ ಸತೀ
ಪರಿಸರದಲ್ಲಿ ಏರೋಸೋಲ್ಸ್‍ನಿಂದ ದುಷ್ಪರಿಣಾಮ – ಪ್ರೊ.ಟೋಮೋಕಿ ನಕಾಯಾಮ


ಪರಿಸರದಲ್ಲಿ ಏರೋಸೋಲ್ಸ್‍ನಿಂದ ದುಷ್ಪರಿಣಾಮ – ಪ್ರೊ.ಟೋಮೋಕಿ ನಕಾಯಾಮ


ಪರಿಸರದಲ್ಲಿ ಏರೋಸೋಲ್ಸ್‍ನಿಂದ ದುಷ್ಪರಿಣಾಮ – ಪ್ರೊ.ಟೋಮೋಕಿ ನಕಾಯಾಮ


ಪರಿಸರದಲ್ಲಿ ಏರೋಸೋಲ್ಸ್‍ನಿಂದ ದುಷ್ಪರಿಣಾಮ – ಪ್ರೊ.ಟೋಮೋಕಿ ನಕಾಯಾಮ


ಬಳ್ಳಾರಿ, 26 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಪರಿಸರದಲ್ಲಿರುವ ಏರೋಸೋಲ್ಸ್ ಕಣಗಳು ಮನುಷ್ಯರ ಆರೋಗ್ಯ ಮತ್ತು ಸುತ್ತಲಿನ ಪರಿಸರವನ್ನು ಯಾವ ರೀತಿಯಾಗಿ ದುಷ್ಪರಿಣಾಮ ಬೀರುತ್ತವೆ ಎಂದು ಜಪಾನ್‍ನ ನಾಗಸಾಕಿ ವಿಶ್ವವಿದ್ಯಾಲಯದ ಪ್ರೊ. ಟೊಮೊಕಿ ನಕಯಾಮ ಅವರು ತಿಳಿಸಿದ್ದಾರೆ.

ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜಿಗೆ ತಮ್ಮ ಸಂಶೋಧನಾ ವಿದ್ಯಾರ್ಥಿನಿ ಫರಹ ಅವರೊಂದಿಗೆ ಭೇಟಿ ನೀಡಿ, `ವಿದ್ಯಾರ್ಥಿಗಳೊಂದಿಗೆ ವಿಜ್ಞಾನ’ದ ಸಂವಾದದಲ್ಲಿ ಪಾಲ್ಗೊಂಡು, ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಕಡಿಮೆ ವೆಚ್ಚದ ಸೆನ್ಸರ್‍ಗಳನ್ನು ಬಳಕೆ ಮಾಡಬೇಕೆಂದು ಕಿವಿಮಾತು ಹೇಳಿದರು.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ರಾಮಕೃಷ್ಣರೆಡ್ಡಿ ಅವರು, ದಿನನಿತ್ಯದ ಜೀವನದಲ್ಲಿ ಅಟಮೋಸ್ಪರಿಕ್ ಏರೋಸೋಲ್ಸ್ ಯಾವ ರೀತಿಯಾಗಿ ಆರೋಗ್ಯಕ್ಕೆ ಹಾಗೂ ಪರಿಸರದಲ್ಲಿ ಕೆಟ್ಟ ಪ್ರಭಾವ ಬೀರುತ್ತದೆ ಎಂಬುದಾಗಿ ವೈಜ್ಞಾನಿಕವಾಗಿ ತಿಳಿಸಿದರು.

ಪ್ರಾಂಶುಪಾಲ ಡಾ. ಜಿ. ಪ್ರಹ್ಲಾದ್ ಚೌದ್ರಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ವಿದ್ಯಾರ್ಥಿಗಳು ಸಂಶೋಧನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ವಿಶ್ವಮಟ್ಟದಲ್ಲಿ ಸಂಶೋಧಕರಾಗಿ ಹೊರಹೊಮ್ಮಿ ದೇಶಕ್ಕೆ ಕೊಡುಗೆಯನ್ನು ನೀಡಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾದ ಟೋಮೋಕಿಯ ನಕಾಯಾಮ ಅವರನ್ನು ಭೌತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಕುಂಚಮ್ ನರಸಿಂಹುಲು ಪರಿಚಯಿಸಿದರು. ಪ್ರಾಸ್ತಾವಿಕವಾಗಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್. ಮಂಜುನಾಥ ಅವರು ಮಾತನಾಡಿದರು.

ಭೌತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರು ಹಾಗೂ ಸಂಘಟನೆ ಸಮಿತಿ ಸದಸ್ಯರಾದ ರಮಾಬಾಯಿ, ಡಾ.ಟಿ. ದೊಡ್ಡಬಸವರಾಜ, ಡಾ. ಶಿಲ್ಪಾ ಕುಲಕರ್ಣಿ, ಡಾ. ರೇಖಾ ಅಣ್ಣಿಗೇರಿ, ಡಾ. ಗೀತಾ ಬಾಬುಸಿಂಗ್, ಅರುಂಧತಿ, ತಿಪ್ಪೇಶ್ ಹಾಗೂ ಸಿರುಗುಪ್ಪ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಶಾಲಿನಿ ವಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande