ನವದೆಹಲಿ, 23 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಆಯುಷ್ಮಾನ್ ಭಾರತ್ – ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ 7ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಮೋದಿ ಸರ್ಕಾರದ ಈ ವಿಶ್ವದ ಅತಿದೊಡ್ಡ ಸರ್ಕಾರಿ ಆರೋಗ್ಯ ವಿಮಾ ಯೋಜನೆಯಿಂದ 550 ದಶಲಕ್ಷಕ್ಕೂ ಹೆಚ್ಚು ಜನರಿಗೆ ಪ್ರಯೋಜನ ಲಭಿಸಿವೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ , ಯೋಜನೆ 70 ವರ್ಷಕ್ಕೂ ಮೇಲ್ಪಟ್ಟ ನಾಗರಿಕರಿಗೆ, ಸಾಮಾಜಿಕ-ಆರ್ಥಿಕ ಸ್ಥಿತಿಗೆ ಸಂಬಂಧವಿಲ್ಲದೆ, ವರ್ಷಕ್ಕೆ ₹5 ಲಕ್ಷವರೆಗಿನ ವಿಮಾ ರಕ್ಷಣೆ ನೀಡುತ್ತದೆ. ದೇಶಾದ್ಯಂತ 1.8 ಲಕ್ಷ ಆಯುಷ್ಮಾನ್ ಕೇಂದ್ರಗಳು ಹಾಗೂ 7,000 ಕ್ಕೂ ಹೆಚ್ಚು ನೋಂದಾಯಿತ ಆಸ್ಪತ್ರೆಗಳ ಮೂಲಕ ಪ್ರತಿ ಕುಟುಂಬಕ್ಕೆ ನಗದುರಹಿತ ದ್ವಿತೀಯ ಮತ್ತು ತೃತೀಯ ಹಂತದ ವೈದ್ಯಕೀಯ ಸೇವೆ ಖಾತರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa