ಗುವಾಹಟಿ, 23 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಹಿರಿಯ ಅಸ್ಸಾಮಿ ಗಾಯಕ ಮತ್ತು ನಟ ಜುಬೀನ್ ಗಾರ್ಗ್ ಅವರ ಪಾರ್ಥಿವ ಶರೀರವನ್ನು ಇಂದು ಕಾಮರ್ಕುಚಿ ಎನ್‌ಸಿ ಗ್ರಾಮದಲ್ಲಿನ ಸ್ಮಶಾನಕ್ಕೆ ಕೊಂಡೊಯಲಾಯಿತು. ಅವರ ಅಂತಿಮ ಯಾತ್ರೆ ಅರ್ಜುನ್ ಭೋಗೇಶ್ವರ ಕ್ರೀಡಾ ಸಂಕೀರ್ಣದಿಂದ ಪ್ರಾರಂಭಗೊಂಡು ಸುಮಾರು 20 ಕಿಮೀ ದೂರವಿರುವ ಸ್ಮಶಾನದಲ್ಲಿ ಅಂತ್ಯಗೊಂಡಿತು.
ಲಕ್ಷಾಂತರ ಅಭಿಮಾನಿಗಳು, ಹಿತೈಷಿಗಳು ಮತ್ತು ಸೆಲೆಬ್ರಿಟಿಗಳು ಅಂತಿಮ ಯಾತ್ರೆಗೆ ಹಾಜರಾದರು.
ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಎರಡನೇ ಮರಣೋತ್ತರ ಪರೀಕ್ಷೆ ನೆರವೇರಿದ ನಂತರ, ಅವರ ದೇಹವನ್ನು ಸಾಂಪ್ರದಾಯಿಕ ಅಸ್ಸಾಮಿ ‘ಗಮೋಚಾ’ಯಿಂದ ಮುಚ್ಚಿದ ಗಾಜಿನ ಶವಪೆಟ್ಟಿಗೆಯಲ್ಲಿ ಕ್ರೀಡಾ ಸಂಕೀರ್ಣಕ್ಕೆ ತರಲಾಯಿತು.
85 ವರ್ಷದ ತಂದೆ ಮತ್ತು ಪತ್ನಿ ಗರಿಮಾ ಸೈಕಿಯಾ ಸೇರಿದಂತೆ ಕುಟುಂಬದವರು ಪ್ರತ್ಯೇಕ ವಾಹನಗಳಲ್ಲಿ ಅಂತ್ಯಕ್ರಿಯೆಗೆ ಭಾಗವಹಿಸಿದರು.
ಪೂರ್ಣ ಸರ್ಕಾರಿ ಗೌರವಗಳೊಂದಿಗೆ ಗರ್ಗ್ ಅವರಿಗೆ ಅಂತಿಮ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa