ಗದಗ, 22 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ ನಡೆಯಲಿರುವ ಜಾತಿ ಸಮೀಕ್ಷೆಯಲ್ಲಿ ಕ್ಷೌರಿಕ ಸವಿತಾ ಸಮಾಜದ ಗುರುತಿನ ವಿವರಗಳನ್ನು ಸ್ಪಷ್ಟವಾಗಿ ದಾಖಲಿಸುವಂತೆ ಮನವಿ ಮಾಡಲಾಗಿದೆ. ಗದಗ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಕೃಷ್ಣಾ ಎಚ್. ಹಡಪದ ಅವರು, ಸಮೀಕ್ಷೆಗೆ ತೆರಳುವ ಗಣತಿದಾರರು ಸಮಾಜದ ಮನೆಗಳಿಗೆ ಹೋದಾಗ ಧರ್ಮ: ಹಿಂದೂ, ಜಾತಿ: ಸವಿತಾ ಸಮಾಜ, ಉಪಜಾತಿ: ಕ್ಷೌರಿಕ, ವೃತ್ತಿ: ಕ್ಷೌರಿಕ/ಮಂಗಳವಾದ್ಯ ಎಂದು ನಮೂದಿಸಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ 59ನೇ ಪ್ರಶ್ನೆಯಲ್ಲಿ ಜಾತಿ ಆಧಾರದ ಮೇಲೆ ಬೇಧಭಾವ ಅನುಭವಿಸುತ್ತಿದ್ದೀರಾ ಎಂಬುದಕ್ಕೆ “ಹೌದು” ಎಂದು ದಾಖಲಿಸುವಂತೆ ಸೂಚಿಸಿದರು.
ರಾಜ್ಯ ಸವಿತಾ ಸಮಾಜದ ನಾಯಕ ಬೈಲಪ್ಪ ನಾರಾಯಣಸ್ವಾಮಿ ಅವರು ಮಾತನಾಡಿ, “ಒಗ್ಗಟ್ಟು ಪ್ರದರ್ಶಿಸಿ ಒಂದೇ ಮಾದರಿಯಲ್ಲಿ ವಿವರ ನೀಡಿದರೆ ಮಾತ್ರ ನಮ್ಮ ಸಮುದಾಯದ ಹಿಂದುಳಿದ ಸ್ಥಿತಿ ಸರ್ಕಾರಕ್ಕೆ ಸ್ಪಷ್ಟವಾಗುತ್ತದೆ. ಜಾತಿ ಕಾಲಂನಲ್ಲಿ ಸವಿತಾ ಸಮಾಜ ಹಾಗೂ ಉಪಜಾತಿಯಲ್ಲಿ ಕ್ಷೌರಿಕ ಎಂದು ಬರೆದು, ಬೇರೆ ಹೆಸರನ್ನು ಬಳಸಬಾರದು. ಸಮಾಜದ 26 ಉಪಪಂಗಡಗಳನ್ನೂ ಗುರುತಿಸಿ ನಿಖರ ಮಾಹಿತಿಯನ್ನು ನೀಡಬೇಕು” ಎಂದು ಮನವರಿಕೆ ಮಾಡಿದರು.
ಸಮಾಜದ ಪ್ರಕಟಣೆಯ ಮೂಲಕ ಈ ಬಗ್ಗೆ ಸಮುದಾಯದ ಎಲ್ಲರಿಗೂ ತಿಳಿಸಲಾಗಿದ್ದು, ಗಣತಿದಾರರು ಸಹ ಸಹಕರಿಸಬೇಕೆಂದು ಕೋರಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / lalita MP