ರಾಯಚೂರು, 22 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕೇಂದ್ರ ಸರ್ಕಾರವು ಗೋಧಿ ದಾಸ್ತಾನು ಮಿತಿಗೆ ಸಂಬಂಧಿಸಿದಂತೆ ಹೊರಡಿಸಿದ್ದ ಆದೇಶವನ್ನು 2026ರ ಮಾರ್ಚ್ ಅಂತ್ಯದವರೆಗೆ ವಿಸ್ತರಿಸಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಲ್ಲಿ ಗೋಧಿ ಮಾರಾಟಗಾರರಿಗೆ 31ನೇ ಮಾರ್ಚ್ 2026ರವರೆಗೆ ಗೋಧಿಗೆ ದಾಸ್ತಾನು ಮಿತಿ ವಿಧಿಸಲಾಗಿದ್ದು, ವ್ಯಾಪಾರಿಗಳು/ಸಗಟು ಮಾರಾಟಗಾರರು 2,000 ಮೇಟ್ರಿಕ್ ಟನ್, ಚಿಲ್ಲರೆ ವ್ಯಾಪಾರಿಗಳು ಪ್ರತಿ ಚಿಲ್ಲರೆ ಮಾರಾಟ ಮಳಿಗೆಗೆ 08 ಮೇಟ್ರಿಕ್ ಟನ್, ದೊಡ್ಡ ಸರಪಳಿ ಚಿಲ್ಲರೆ ವ್ಯಾಪಾರಿಗಳು ಪ್ರತಿ ಔಟ್‍ಲೆಟ್‍ಗೆ ಗರಿಷ್ಠ ಪ್ರಮಾಣ 18 ಮೇಟ್ರಿಕ್ ಟನ್, ಸಂಸ್ಕರಣಾದಾರರ ಮಾಸಿಕ ಸ್ಥಾಪಿತ ಸಾಮಥ್ರ್ಯದ ಎಂ.ಐ.ಸಿ 60 ರಷ್ಟು ಗೋಧಿ ದಾಸ್ತಾನು ಮಾಡಿಟ್ಟುಕೊಳ್ಳಲು ಅವಕಾಶವಿದೆ.
ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಗೋಧಿ ವರ್ತಕರು ಹಾಗೂ ಪೋಸ್ಟ್ ರ್‍ಗಳು ಕೇಂದ್ರ ಸರ್ಕಾರದ ವೆಬ್ ಪೋರ್ಟಲ್ ವಿಳಾಸ :http://evegoils.nic.in/wsp/login ನಲ್ಲಿ ನೋಂದಣಿ ಮಾಡಿ ನಿಯಮಿತವಾಗಿ ಪ್ರತಿ ಶುಕ್ರವಾರ ದಾಸ್ತಾನು ಗೋಷಿಸುವಂತೆ ಮತ್ತು ಗೋಧಿ ದಾಸ್ತಾನನ್ನು ನಿಯಮಿತವಾಗಿ ತಪಾಸಣೆ ಮಾಡುವಂತೆ ತಿಳಿಸಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್