ಬಳ್ಳಾರಿ : ಜನತಾಬಜಾರ್ ನ 70ನೇ ಸರ್ವ ಸದಸ್ಯರ ಸಭೆ
ಬಳ್ಳಾರಿ, 22 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಬಳ್ಳಾರಿಯ ಕೇಂದ್ರ ಸಹಕಾರ ಸಗಟು ಮಾರಾಟ ಸಂಘ (ಜನತಾ ಬಜಾರ್) ದ 70ನೇ ಸರ್ವ ಸದಸ್ಯರ ಸಭೆಯು ಸೋಮವಾರ ಯಶಸ್ವಿಯಾಗಿ ನೆರವೇರಿತು. ಬಳ್ಳಾರಿ ಕೇಂದ್ರ ಸಹಕಾರ ಸಗಟು ಮಾರಾಟ ಸಂಘ (ಜನತಾ ಬಜಾರ್)ದ ಅಧ್ಯಕ್ಷ ಕೆ.ಎ. ವೇಮಣ್ಣ ಅವರ ಅಧ್ಯಕ್ಷತೆಯಲ್ಲಿ ಸ
ಬಳ್ಳಾರಿ : ಯಶಸ್ವಿಯಾಗಿ ನಡೆದ ಜನತಾಬಜಾರ್ ನ 70ನೇ ಸರ್ವ ಸದಸ್ಯರ ಸಭೆ


ಬಳ್ಳಾರಿ : ಯಶಸ್ವಿಯಾಗಿ ನಡೆದ ಜನತಾಬಜಾರ್ ನ 70ನೇ ಸರ್ವ ಸದಸ್ಯರ ಸಭೆ


ಬಳ್ಳಾರಿ, 22 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಬಳ್ಳಾರಿಯ ಕೇಂದ್ರ ಸಹಕಾರ ಸಗಟು ಮಾರಾಟ ಸಂಘ (ಜನತಾ ಬಜಾರ್) ದ 70ನೇ ಸರ್ವ ಸದಸ್ಯರ ಸಭೆಯು ಸೋಮವಾರ ಯಶಸ್ವಿಯಾಗಿ ನೆರವೇರಿತು.

ಬಳ್ಳಾರಿ ಕೇಂದ್ರ ಸಹಕಾರ ಸಗಟು ಮಾರಾಟ ಸಂಘ (ಜನತಾ ಬಜಾರ್)ದ ಅಧ್ಯಕ್ಷ ಕೆ.ಎ. ವೇಮಣ್ಣ ಅವರ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ಸಭೆ ನಡೆದಿದ್ದು, ವಾರ್ಷಿಕ ಮಹಾಸಭೆಯ ನೋಟೀಸಿನ ಪ್ರಕಾರ 2024-25 ರ ಸಾಲಿನ ಆಡಳಿತ ಮಂಡಳಿ ವರದಿ ಮತ್ತು ಲೆಕ್ಕ ಪರಿಶೋಧನಾ ವರದಿಯನ್ನು ಮಂಡಿಸಿ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು.

ಸಭೆಯಲ್ಲಿ 2023-24ರ ಸಾಲಿನ ವಾರ್ಷಿಕ ಮಹಾಜನ ಸಭೆಯ ನಡಾವಳಿಗಳನ್ನು ಓದಿ ಅನುಮೋದನೆ ಪಡೆಯಲಾಯಿತು. 2025-26ರ ಸಾಲಿನ ಮುಂಗಡ ಪತ್ರ ಮತ್ತು 2025-26ರ ಸಾಲಿಗಾಗಿ ಸಿದ್ದಪಡಿಸಲಾದ ಸಂಘದ ಕಾರ್ಯಚಟುವಟಿಕೆಗಳಿಗೆ ಅನುಮೋದನೆ ಪಡೆಯಲಾಯಿತು. ಅಲ್ಲದೇ, 2024-25ರ ಸಾಲಿನ ಮುಂಗಡ ಪತ್ರದ ಹೆಚ್ಚುವರಿ ಖರ್ಚುಗಳಿಗೆ ಅನುಮೋದನೆ ಪಡೆಯಲಾಯಿತು. ಅಲ್ಲದೇ, ಸಮಗ್ರ ಬೈಲಾವನ್ನು ಅಳವಡಿಸಿಕೊಳ್ಳುವ ಕುರಿತು ಚರ್ಚೆ ನಡೆಯಿತು.

ಬಳ್ಳಾರಿ ಕೇಂದ್ರ ಸಹಕಾರ ಸಗಟು ಮಾರಾಟ ಸಂಘ (ಜನತಾ ಬಜಾರ್)ದ ಅಧ್ಯಕ್ಷರಾದ ಕೆ.ಎ. ವೇಮಣ್ಣ ಅವರು ಸ್ವಾಗತ ಕೋರಿ, ವರದಿ ಮಂಡನೆ ಮಾಡಿದರು. ನಿರ್ದೇಶಕ ವೆಂಕಟೇಶ ಹೆಗಡೆ ಅವರು ಜನತಾ ಬಜಾರ್ ಕುರಿತು ಯಶೋಗಾಥೆಯನ್ನು ವಿವರಿಸಿದರು.

ನಿಕಟಪೂರ್ವ ಅಧ್ಯಕ್ಷರಾದ ಜಿ. ನೀಲಕಂಠಪ್ಪ, ಮಾಜಿ ಉಪಾಧ್ಯಕ್ಷೆ ನಸೀಮಾ ಬೇಗಂ, ಉಪಾಧ್ಯಕ್ಷರಾದ ಎಸ್. ಮುಜಾಹಿದ್, ನಿರ್ದೇಶಕರುಗಳಾದ ಶ್ರೀಮತಿ ಪಲ್ಲೇದ ಮೈತ್ರಿ, ಕೆ. ವೆಂಕಟಸ್ವಾಮಿ ಅಲ್ಲೀಪುರ, ಪಿ. ದಾನರೆಡ್ಡಿ, ವಿ. ಪ್ರದೀಪ್ ರೆಡ್ಡಿ, ಕೆ. ಭರಮರೆಡ್ಡಿ, ಹಲಕುಂದಿ ವಿಜಯಕುಮಾರ್ ಗೌಡ, ಕೆ.ಎಂ. ಕೇದಾರನಾಥ, ಕೋರಿ ಚನ್ನಬಸಪ್ಪ, ಎಂ. ನರೇಶ್ ಕುಮಾರ್, ಪರಿಣಿತ ಸದಸ್ಯರಾದ ಪತ್ರಕರ್ತ ಎಚ್.ಎಂ. ಮಹೇಂದ್ರ ಕುಮಾರ್ ಅವರು ವೇದಿಯಲ್ಲಿದ್ದರು.

ಕುಮಾರಿ ಸಾಯಿಶೃತಿ ಹಂದ್ಯಾಳು ಹಾಗೂ ಯಲ್ಲನಗೌಡ ಅವರು ಸಂಗೀತ ಕಾರ್ಯಕ್ರಮ ಪ್ರಸ್ತುತ ಪಡಿಸಿದರು ಕ್ಯಾಷಿಯೋ ಶಿವಕುಮಾರ, ತಬಲಾ .ಯೊಗೀಶ್ ಬಣಗಾರ ಸಾತ್ ನೀಡಿದರು. ಪ್ರಧಾನ ವ್ಯವಸ್ಥಾಪಕರಾದ ಜೆ.ಎಂ. ನಾಗರಾಜ್ ಅವರು ವರದಿ ಮಂಡನೆ ಮಾಡಿದರು. ಕೆ.ಎಂ. ಕೇದಾರನಾಥ ಅವರು ಕಾರ್ಯಕ್ರಮ ನಿರೂಪಿಸಿದರು. ಅಲ್ಲೀಪುರ ವೆಂಕಟಸ್ವಾಮಿ ಅವರು ವಂದನಾರ್ಪಣೆ ಸಲ್ಲಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande