ರಾಯಚೂರು : ಸೆ.25ರಂದು ಗ್ರಾಮೀಣ ದಸರಾ
ರಾಯಚೂರು, 22 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಗ್ರಾಮೀಣ ದಸರ ಅಂಗವಾಗಿ ಸಿಂಧನೂರ ತಾಲೂಕಿನ ಆರ್.ಹೆಚ್.ಕಾಲೋನಿ-2ರ ಗ್ರಾಮದ ಸರ್ಕಾರಿ ಶಾಲೆಯ ಹತ್ತಿರ ಸೆ.25ರ ಸಂಜೆ 4.30ಕ್ಕೆ ದಸರಾ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಅಂದು ಮಹಿಳೆಯರಿಂದ ಪೂರ್ಣ ಕುಂಭ-ಕಳಸ ಮತ್ತು ಆಕರ್ಷಕ ಕಲಾ ತಂ
ರಾಯಚೂರು : ಸೆ.25ರಂದು ಗ್ರಾಮೀಣ ದಸರಾ


ರಾಯಚೂರು, 22 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಗ್ರಾಮೀಣ ದಸರ ಅಂಗವಾಗಿ ಸಿಂಧನೂರ ತಾಲೂಕಿನ ಆರ್.ಹೆಚ್.ಕಾಲೋನಿ-2ರ ಗ್ರಾಮದ ಸರ್ಕಾರಿ ಶಾಲೆಯ ಹತ್ತಿರ ಸೆ.25ರ ಸಂಜೆ 4.30ಕ್ಕೆ ದಸರಾ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.

ಅಂದು ಮಹಿಳೆಯರಿಂದ ಪೂರ್ಣ ಕುಂಭ-ಕಳಸ ಮತ್ತು ಆಕರ್ಷಕ ಕಲಾ ತಂಡಗಳೊಂದಿಗೆ ಆರ್.ಹೆಚ್.ಕಾಲೋನಿ-2ರ ಕೆರೆಯಿಂದ ಸರಕಾರಿ ಶಾಲೆವರೆಗೆ ಮೆರವಣಿಗೆ ಹಾಗೂ ಹಸಿರು ದಸರಾ ಕಾರ್ಯಕ್ರಮದಡಿ ಕ್ಲಷ್ಟರ್ ವ್ಯಾಪ್ತಿಯಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಜಿಲ್ಲಾಧಿಕಾರಿಗಳಾದ ನೀತೀಶ್ ಕೆ., ಅವರು ಕಾರ್ಯಕ್ರಮ ಉದ್ಘಾಟಿಸುವರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕುಮಾರ್ ಕಾಂದೂ ಅವರು ಭಾಗಿಯಾಗುವವರು.

ಸಾಂಸ್ಕೃತಿಕ ಕಾರ್ಯಕ್ರಮಗಳು: ಸರಿಗಮಪ ಖ್ಯಾತಿಯ ಸುಪ್ರೀತ್ ಮತ್ತು ವರ್ಣಾ ಬೆಂಗಳೂರು ಇವರಿಂದ ಸಂಗೀತ ಕಾರ್ಯಕ್ರಮ, ರಂಗಧಾರ ರೇಪರ್ಟರಿ (ರಿ) ಕೊಪ್ಪಳ ತಂಡದಿಂದ ಶಿಕ್ಷಣ, ಆರೋಗ್ಯ, ಕೃಷಿಗೆ ಸಂಬಂಧಿಸಿದಂತೆ ಜಾಗೃತಿ ರೂಪಕ ನಾಟಕಗಳು, ಗ್ರಾಮೀಣ ಕಲಾ ತಂಡಗಳಿಂದ ಕಲೆ-ಸಂಸ್ಕೃತಿ-ಜನಪದ ಕಾರ್ಯಕ್ರಮಗಳು ಹಾಗೂ ವಿವಿಧ ಕಾಲೇಜು ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಆರ್.ಹೆಚ್.ಕಾಲೋನಿ-2ರಲ್ಲಿ ಕ್ಲಸ್ಟರ್ ಮಟ್ಟದ ಕ್ರೀಡಾಸ್ಪರ್ಧೆಗಳು ನಡೆಯಲಿದ್ದು ಪುರುಷರಿಗಾಗಿ ಕೆಸರಿನಲ್ಲಿ ಹಗ್ಗ ಜಗ್ಗಾಟ, ಕಬಡ್ಡಿ ಪಂದ್ಯಾವಳಿಗಳಿವೆ. ಮಹಿಳೆಯರಿಗಾಗಿ ಕೆಸರಿನಲ್ಲಿ ಹಗ್ಗ ಜಗ್ಗಾಟ, ಕಬಡ್ಡಿ, ರಂಗೋಲಿ, ರೊಟ್ಟಿ ತಟ್ಟುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿಂಧನೂರು ದಸರಾ ಉತ್ಸವ ಸಮಿತಿ ತಿಳಿಸಿದೆ.

ಸಿಂಧನೂರು ತಾಲೂಕ ಆಡಳಿತ, ತಾಲೂಕ ಪಂಚಾಯಿತಿ, ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸಿಂಧನೂರು ದಸರಾ ಉತ್ಸವ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿವೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande