ಕೊಪ್ಪಳ, 22 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಎನ್.ಹೆಚ್.ಎಂ ಅಡಿಯಲ್ಲಿ ಆರ್.ಕೆ.ಎಸ್.ಕೆ ಕೋ-ಆರ್ಡಿನೇಟರ್ ಹುದ್ದೆಯ 2ನೇ ಸುತ್ತಿನ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗೆ ನಾಳೆ ಮೂಲ ದಾಖಲಾತಿಗಳ ಪರಿಶೀಲನೆ ನಡೆಯಲಿದೆ.
ಅಭ್ಯರ್ಥಿಯು ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಿದ ದಾಖಲಾತಿಗಳ ಮೂಲ ದಾಖಲಾತಿಗಳೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಆಡಳಿತ ಭವನ, ಕೊಪ್ಪಳ ಇಲ್ಲಿಗೆ ಕಚೇರಿ ಅವಧಿಯಲ್ಲಿ ಅಪ್‍ಲೋಡ್ ಮಾಡಿದ ದಾಖಲಾತಿಗಳ ಒಂದು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಹಾಜರಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಲಿಂಗರಾಜು ಟಿ. ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್