ರಾಷ್ಟ್ರೀಯ ಹೆದ್ದಾರಿ 748ಎಗೆ ಭೂಸ್ವಾಧೀನ ಘೋಷಣೆ : ಭೂಸರ್ವೆಗೆ ಸಹಕರಿಸಿ-ಆಯುಕ್ತರು
ರಾಯಚೂರು, 22 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಅವರ ಅಧಿಸೂಚನೆ ಸಂಖ್ಯೆ ಎಸ್‍ಓ 3715(ಇ) ದಿನಾಂಕ: 13.08.2025 ರಂದು ರಾಷ್ಟ್ರೀಯ ಹೆದ್ದಾರಿ ಕಾಯ್ದೆ 1956 ಕಲಂ 3(ಎ) ರಂತೆ ಎನ್‍ಹೆಚ್-748ಎ ಕ್ಕೆ ಸಂಬಂಧಿಸಿದಂತೆ 273.4 ಕಿ.ಮೀ ಯಿಂದ 321 ಕಿ.ಮೀ ರವರ
ರಾಷ್ಟ್ರೀಯ ಹೆದ್ದಾರಿ 748ಎಗೆ ಭೂಸ್ವಾಧೀನ ಘೋಷಣೆ : ಭೂಸರ್ವೆಗೆ ಸಹಕರಿಸಿ-ಆಯುಕ್ತರು


ರಾಯಚೂರು, 22 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಅವರ ಅಧಿಸೂಚನೆ ಸಂಖ್ಯೆ ಎಸ್‍ಓ 3715(ಇ) ದಿನಾಂಕ: 13.08.2025 ರಂದು ರಾಷ್ಟ್ರೀಯ ಹೆದ್ದಾರಿ ಕಾಯ್ದೆ 1956 ಕಲಂ 3(ಎ) ರಂತೆ ಎನ್‍ಹೆಚ್-748ಎ ಕ್ಕೆ ಸಂಬಂಧಿಸಿದಂತೆ 273.4 ಕಿ.ಮೀ ಯಿಂದ 321 ಕಿ.ಮೀ ರವರೆಗೆ ರಸ್ತೆಗೆ ಒಳಪಡುವ ದೇವದುರ್ಗ ತಾಲೂಕಿನ ತಿಪ್ಪಲದಿನ್ನಿ ಗ್ರಾಮ, ರಾಯಚೂರು ತಾಲೂಕಿನ ಕಾಟ್ಲಟ್ಕೂರು, ಮಂಡಲಗೇರಾ, ಸಿಂಗನೋಡಿ, ಪೋತ್ಗಲ್, ಅಸ್ಕಿಹಾಳ, ರಾಯಚೂರು, ವಡವಟ್ಟಿ, ಬಾಯಿದೊಡ್ಡಿ, ಮನ್ಸಲಾಪುರ, ಕಲ್ಮಲಾ, ಹುಣಸಿಹಾಳ ಹುಡಾ ಮತ್ತು ಯಕ್ಲಾಸಪುರ ಹಾಗೂ ಸಿರವಾರ ತಾಲೂಕಿನ ಸಿರವಾರ್, ಜಾಲಾಪುರ, ಅತ್ನೂರು ಮತ್ತು ಜಕ್ಕಲದಿನ್ನಿ ಗ್ರಾಮಗಳ ಜಮೀನುಗಳನ್ಮ್ನ ಭೂಸ್ವಾಧೀನಪಡಿಸಿಕೊಳ್ಳಲು ಘೋಷಣೆಯಾಗಿದೆ. ಆದ್ದರಿಂದ ಈ ಅಧಿಸೂಚನೆಯಂತೆ ಭೂಸ್ವಾಧೀನ ಪ್ರಕ್ರಿಯೆಯನ್ನು ಆದ್ಯತೆ ಮೇರೆಗೆ ಪ್ರಾರಂಭಿಸಲು ಸರ್ಕಾರದಿಂದ ಸೂಚನೆಗಳಿರುವುದರಿಂದ ಮತ್ತು ಈ ಯೋಜನೆಯು ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಆಗಿರುವುದರಿಂದ ದಿನಾಂಕ: 22.09.2025 ರಂದು ಜಮೀನುಗಳ ಜಂಟಿ ಮೇಜನ ಸರ್ವೆ(Joint Measurement Survey – JMS) ಕಾರ್ಯವನ್ನು ಸಿರವಾರ ತಾಲೂಕಿನಿಂದ ಪ್ರಾರಂಭಿಸಲಾಗುತ್ತದೆ.

ಈ ಅಧಿಸೂಚನೆಯಲ್ಲಿ ನಮೂದಾದ ಸರ್ವೆ ನಂಬರಗಳ ಭೂ ಮಾಲೀಕರು, ಸಾರ್ವಜನಿಕರು, ಸ್ಥಳೀಯರು ಭೂ ಸರ್ವೆ ಮಾಡಲು ಆಗಮಿಸುವ ಅಧಿಕಾರಿ ಸಿಬ್ಬಂದಿಯೊಂದಿಗೆ ಸಹಕರಿಸಲು ಕೋರಲಾಗಿದೆ. ಮುಂದುವರೆದು, ಈ ಅಧಿಸೂಚನೆಯಲ್ಲಿ ನಮೂದಾದ ಸರ್ವೆ ನಂಬರ್‍ಗಳಲ್ಲಿ ಯಾವುದೇ ತರಹದ ವಹಿವಾಟು, ಮನೆ ಅಥವಾ ಕಟ್ಟಡಗಳನ್ನು ಕಟ್ಟುವುದು, ಗಿಡ-ಮರಗಳನ್ನು ಹಾಕುವುದು, ಭೂಮಿಯನ್ನು ಅಭಿವೃದ್ಧಿ ಪಡಿಸುವುದು, ಭೂಮಿಯನ್ನು ಬಿನ್ ಶೇತ್ಕಿಯನ್ನು ಮಾಡುವುದು, ಬೋರವೆಲ್ ಹಾಕುವುದನ್ನು ಇತರೆ ಯಾವುದೇ ಮಾಲ್ಕಿಗಳನ್ನು ಈ ಅಧಿಸೂಚನೆಯಾದ ದಿನಾಂಕದ ನಂತರ ಕೈಗೊಳ್ಳಬಾರದೆಂದು ರಾಯಚೂರ ಸಹಾಯಕ ಆಯುಕ್ತರ ಕಚೇರಿಯ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande