ವಿಜಯಪುರ, 22 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಬಸವಜಯ ಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಖಂಡನಾ ಸಭೆ ನಡೆಯಿತು. ಸಭೆಯ ಬಳಿಕ ಬಸವಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಯಾವುದೇ ಧರ್ಮಗುರುಗಳನ್ನು ಉಚ್ಚಾಟನೆ ಮಾಡುವ ಅಧಿಕಾರ ಇರೋದು ಕೇವಲ ದೇವರಿಗೆ, ದೇವರ ಸ್ವರೂಪರಾದ ಭಕ್ತರಿಗೆ ಮಾತ್ರ ಎಂದರು.
ಏಕಪಕ್ಷೀಯ ಕಾನೂನು ಬಾಹೀರ ಸಂಬಂಧ ಕೈಗೊಂಡಿದ್ದಾರೆ. ನಮ್ಮನ್ನು ಉಚ್ಚಾಟನೆ ಮಾಡುವ ಅಧಿಕಾರ ಈ ಜಗತ್ತಿನಲ್ಲಿ ಯಾರಿಗೂ ಇಲ್ಲ. ನಾನು ಭಕ್ತರ ಹೃದಯದಲ್ಲಿ ಪೀಠ ಕಟ್ಟಿದ್ದೇನೆ. ಪೀಠಕ್ಕೂ ಟ್ರಸ್ಟ್ ಗೂ ಯಾವುದೇ ಸಂಬಂಧ ಇಲ್ಲ. ಪೀಠವನ್ನು ಯಾವುದೇ ಕಲ್ಲು ಮಣ್ಣಿನಲ್ಲಿ ಕಟ್ಟಿಲ್ಲ. ಭಕ್ತರ ಹೃದಯದಲ್ಲಿ ಪೀಠ ಕಟ್ಟಿದ್ದೇನೆ. ಭಕ್ತರ ತೀರ್ಮಾನವೇ ಅಂತಿಮ ತೀರ್ಮಾನ ಎಂದರು.
ಸಮಾಜ ಬಾಂಧವರನ್ನು ಕೂಡಿಸುತ್ತೇನೆ ಎಲ್ಲರೂ ಹೇಗೆ ಹೇಳ್ತಾರೆ ಹಾಗೆ ಮಾಡ್ತೇನೆ. ಮೂರ್ನಾಲ್ಕು ದಿನದಲ್ಲಿ ಕೂಡಲಸಂಗಮದಲ್ಲಿ ರಾಜ್ಯಮಟ್ಟದ ಸಭೆ ಕರೆಯುತ್ತೇನೆ. ಭಕ್ತರು ಏನು ಹೇಳ್ತಾರೆ ಹಾಗೆ ಮಾಡ್ತಿನಿ. ಕೂಡಲಸಂಗಮದಲ್ಲೇ ಮತ್ತೊಂದು ಮಠ ಕಟ್ಟುವ ವಿಚಾರ ಹೊಂದಿದ್ದೇವೆ. ಭಕ್ತರ ಹೃದಯವೇ ನನಗೆ ಸಿಂಹಾಸನ ಹಾಗೂ ಕಿರೀಟ.
ಕೂಡಲಸಂಗಮದಲ್ಲಿ ೧೩ ಗುಂಟೆ ಭೂಮಿ ಭಕ್ತರು ದಾನ ಮಾಡಿದ್ದಾರೆ. ದಾವಣೆಗೆರೆಯಲ್ಲಿ ಭಕ್ತರು ದಾನ ಮಾಡಿದ್ದಾರೆ. ಅಲ್ಲಿ ನಾನು ಯಾವ ಚಟುವಟಿಕೆ ಮಾಡಿಲ್ಲ. ಇವತ್ತಿನವರೆಗೆ ಭಕ್ತರ ಕಾಣಿಕೆ ಹಾಗೂ ಮಠದ ಆಸ್ತಿಯಿಂದ ಯಾವ ಆಸ್ತಿ ಮಾಡಿಲ್ಲ. ನನ್ನ ಭಕ್ತರು ಮನಸ್ಸಿಗೆ ನೋವಾಗಿದೆ. ಅವರ ಮುಖ ನೋಡಿ ನಾನು ಭಾವುಕನಾಗಿದ್ದೇನೆ. ನೋವು ನಿವಾರಿಸುವ ಶಕ್ತಿ ದೇವರು ಕೊಡಲಿ ಭಕ್ತರಿಗೆ ನೀಡಲಿ ಎಂದರು. ನಾನು ಹಿಂದುತ್ವ ಪ್ರತಿಪಾದನೆ ಮಾಡ್ತಿನಿ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು,
ಕಾಶಪ್ಪನವರ ಸಿಡಿ ಬೆದರಿಕೆ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸುಮ್ಮನೆ ತೇಜೊವಧೆ ಕೆಲಸ ಮಾಡಬಾರದು. ಈಗ ಆರ್ಟಿಪಿಸಿಯಲ್ ಇಂಟೆಲಿಜೆನ್ಸ್(ಎಐ) ಮೂಲಕವಾಗಲಿ. ಏನಾದರೂ ಕೃತ್ಯ ಮಾಡಿದರು ಅಂದರೆ ಅದನ್ನು ಯಾವ ಭಕ್ತರು ನಂಬೋದಿಲ್ಲ. ಜನರಿಗೆ ಸತ್ಯ ಏನು ಅಂತ ಗೊತ್ತಿದೆ. ಏನೆ ಬಂದರೂ ಗಟ್ಟಿಯಾಗಿ ಎದುರಿಸುವ ಕೆಲಸ ಮಾಡುತ್ತೇನೆ. ಪಾದಯಾತ್ರೆ ಶುರುವಾದಾಗಿನಿಂದ
ಇಂತ ನೂರಾರು ಷಡ್ಯಂತ್ರ ಮಾಡುತ್ತಲೇ ಬಂದಿದ್ದಾರೆ. ನಾನು ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ಪೀಠವನ್ನು ಭಕ್ತರು ಎಲ್ಲಿ ತೋರಿಸುತ್ತಾರೊ ಅಲ್ಲಿ ಆರಂಭಿಸುತ್ತೇನೆ. ಕೂಡಲಸಂಗಮದಲ್ಲೇ ಸಭೆ ಕರೆಯುತ್ತೇನೆ. ಭಕ್ತರ ನಿರ್ಣಯಕ್ಕೆ ನಾನು ಬದ್ದನಾಗಿರುತ್ತೇನೆ ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande