ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ : ಬಸನಗೌಡ ದದ್ದಲ್
ರಾಯಚೂರು, 22 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ರಾಯಚೂರು ಗ್ರಾಮೀಣ ಕ್ಷೇತ್ರದ ಸವಾರ್ಂಗೀಣ ಅಭಿವೃದ್ಧಿ ತಮ್ಮ ಗುರಿಯಾಗಿದ್ದು, ಈ ದಿಶೆಯಲ್ಲಿ ನಾನಾ ಯೋಜನೆಗಳ ಸಮರ್ಪಕ ಜಾರಿಗೆ ಒತ್ತು ಕೊಡಲಾಗಿದೆ ಎಂದು ಮಹರ್ಷಿ ವಾಲ್ಮೀಕಿ ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರ
ರಾಯಚೂರು ಗ್ರಾಮೀಣ ಕ್ಷೇತ್ರದ  ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಬಸನಗೌಡ ದದ್ದಲ್


ರಾಯಚೂರು ಗ್ರಾಮೀಣ ಕ್ಷೇತ್ರದ  ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಬಸನಗೌಡ ದದ್ದಲ್


ರಾಯಚೂರು, 22 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ರಾಯಚೂರು ಗ್ರಾಮೀಣ ಕ್ಷೇತ್ರದ ಸವಾರ್ಂಗೀಣ ಅಭಿವೃದ್ಧಿ ತಮ್ಮ ಗುರಿಯಾಗಿದ್ದು, ಈ ದಿಶೆಯಲ್ಲಿ ನಾನಾ ಯೋಜನೆಗಳ ಸಮರ್ಪಕ ಜಾರಿಗೆ ಒತ್ತು ಕೊಡಲಾಗಿದೆ ಎಂದು ಮಹರ್ಷಿ ವಾಲ್ಮೀಕಿ ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು ಹೇಳಿದರು.

ಸೆ.22ರಂದು ರಾಯಚೂರು ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯ ದೇವಸುಗೂರ ಗ್ರಾಮಕ್ಕೆ ಭೇಟಿ ನೀಡಿ, ಶ್ರೀ ಸೂಗುರೇಶ್ವರ ದೇವಸ್ಥಾನದ ಹತ್ತಿರ 51 ಅಡಿ ಎತ್ತರದ ಶ್ರೀ ವೀರಭದ್ರೇಶ್ವರ ಸ್ವಾಮಿಯ ಮೂರ್ತಿ ಮತ್ತು 31 ಅಡಿ ಎತ್ತರದ ಶಿವಲಿಂಗ ಧಾರಣೆಯ ಆಂಜನೇಯ ಸ್ವಾಮಿ ಮೂರ್ತಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ನಮ್ಮ ದೇಶ ಮೂಲತಃ ಹಳ್ಳಿಗಳ ದೇಶವಾಗಿದೆ. ಪ್ರತಿಯೊಂದು ಹಳ್ಳಿಗಳು ಈಗ ಬದಲಾಗುತ್ತಿವೆ. ಗ್ರಾಮೀಣ ಜನರ ನಿರೀಕ್ಷೆಗಳು ಬದಲಾಗುತ್ತಿವೆ. ಈ ದಿಶೆಯಲ್ಲಿ ತಾವು ಗ್ರಾಮಗಳ ಬಗ್ಗೆ ವಿಶೇಷ ಕಾಳಹಿ ವಹಿಸಿದ್ದು, ಗ್ರಾಮೀಣ ಜನರ ಬದುಕು ಸುಧಾರಿಸುವ ನಿಟ್ಟಿನಲ್ಲಿ ತಾವು ಯೋಚಿಸಿ ಆಯಾ ಕಡೆಗಳಲ್ಲಿ ಯೋಜನೆಗಳ ಸಮರ್ಪಕ ಜಾರಿಗೆ ಅಧಿಕಾರಿಗಳಿಗೆ ಸೂಚಿಸಿ ಶ್ರಮಿಸುತ್ತಿರುವುದಾಗಿ ಹೇಳಿದರು.

ಶ್ರೀ ಸೂಗೂರೇಶ್ವರರು ಈ ಭಾಗದ ಆರಾಧ್ಯ ದೈವವಾಗಿದ್ದಾರೆ. ಅವರ ಕೃಪಾಶೀರ್ವಾದ ನಮಗೆಲ್ಲರಿಗೂ ಬೇಕು. ದೇವಸ್ಥಾನಕ್ಕೆ ಅಗತ್ಯವಿರುವ ನಾನಾ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕರು ತಿಳಿಸಿದರು.

ನಾನಾ ಕಾಮಗಾರಿಗೆ ಭೂಮಿಪೂಜೆ: ಶ್ರೀ ಸೂಗುರೇಶ್ವರ ದೇವಸ್ಥಾನದ ಹತ್ತಿರ ನೂತನ ಕಲ್ಯಾಣ ಮಂಟಪ ಅಡುಗೆ ಕೋಣೆ ಮತ್ತು ಭೋಜನಾಲಯ ನಿರ್ಮಾಣ ಕಾಮಗಾರಿಗೆ, ಶ್ರೀ ಸೂಗುರೇಶ್ವರ ದೇವಸ್ಥಾನದ ಆವರಣದಲ್ಲಿ ಶೇಡ್ ನಿರ್ಮಾಣ ಕಾಮಗಾರಿಗೆ ಸಹ ಇದೆ ವೇಳೆ ಶಾಸಕರು ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ದೇವಸುಗೂರ ಬ್ಲಾಕ್ ಅಧ್ಯಕ್ಷರು, ಊರಿನ ಹಿರಿಯ ಮುಖಂಡರು, ಸುತ್ತಲಿನ ಗ್ರಾಮಗಳ ಹಿರಿಯ ಮುಖಂಡರು, ನಾಮ ನಿರ್ದೇಶನ ಸದಸ್ಯರು, ಅಧಿಕಾರಿಗಳು, ಗ್ರಾಮ ಪಂಚಾಯತ್ ಸದಸ್ಯರು, ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande