ಶಿವಮೊಗ್ಗ, 22 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಜಿಎಸ್‌ಟಿ ಕಡಿತದಿಂದ ಜನಸಾಮಾನ್ಯರಿಗೆ, ವ್ಯಾಪಾರಿಗಳಿಗೆ ತುಂಬಾ ಅನುಕೂಲವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಜಿಎಸ್ಟಿಯ ಎರಡು ಹಂತದಲ್ಲಿನ ಕಡಿತದ ಹಿನ್ನಲೆಯಲ್ಲಿ ಜಿಲ್ಲಾ ಬಿಜೆಪಿ ಶಿವಮೊಗ್ಗದ ಶಿವಪ್ಪ ನಾಯಕ ವೃತ್ತದಲ್ಲಿ ಇಂದು ನಡೆದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ವ್ಯಾಪಾರಿಗಳಿಗೆ ಸಿಹಿ ಹಂಚಿದರು. ನಂತರ ಗಾಂಧಿ ಬಜಾರ್ನ ಅಂಗಡಿಗಳಿಗೆ ತೆರಳಿ, ಸಿಹಿ ಹಂಚುವ ಜೊತೆಗೆ ಜಿಎಸ್‌ಟಿ ಕಡಿತದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇಂದಿನಿಂದ ಜಿಎಸ್‌ಟಿ ಸುಧಾರಣೆಯ ಅನುಷ್ಟಾನ ಆಗುತ್ತಿದೆ. ಇಂದು ಐತಿಹಾಸಿಕ ದಿನ. ಇದನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದರು.
ಜಿಎಸ್‌ಟಿ ಸುಧಾರಣೆಯ ಬಗ್ಗೆ ಜನರಿಗೆ ಹಾಗೂ ವ್ಯಾಪಾರಿಗಳಿಗೆ ತಿಳಿಸಿದ್ದೇವೆ. 2047ನೇ ಇಸವಿಗೆ ವಿಕಸಿತ ಭಾರತ ಪರಿವರ್ತನೆ ಆಗಬೇಕೆಂಬ ಮೋದಿ ಅವರ ಕನಸಿಗೆ ಜಿಎಸ್‌ಟಿ ಸುಧಾರಣೆ ಸಾಕಷ್ಟು ಸಹಾಯ ಮಾಡಲಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa