ತಂಬಾಕು ಉತ್ಪನ್ನಗಳ ನಿಯಂತ್ರಣಕ್ಕಾಗಿ ಕೋಟ್ಪಾ ದಾಳಿ
ಗದಗ, 22 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಗದಗ ತಾಲೂಕಿನಲ್ಲಿ ಹಮ್ಮಿಕೊಂಡು ತಂಬಾಕು ನಿಯಂತ್ರಣ ಕೋಟ್ಪಾ ಕಾಯ್ದೆ 2003 ಉಲ್ಲಂಘನೆ ಕುರಿತು ಮಾರಾಟಗಾರರಿಗೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಎಚ್ಚರಿಕೆ ನೀಡಿ 08 ಪ್ರಕರಣ ದಾಖಲಿಸಿ ರೂ. 4500 ದಂಡ ವಿಧಿಸಲಾಯಿತು ಸೆಪ್ಟಂಬರ್ 22 ಸೋಮವಾರ ದಂದು ಜಿ
ಪೋಟೋ


ಗದಗ, 22 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಗದಗ ತಾಲೂಕಿನಲ್ಲಿ ಹಮ್ಮಿಕೊಂಡು ತಂಬಾಕು ನಿಯಂತ್ರಣ ಕೋಟ್ಪಾ ಕಾಯ್ದೆ 2003 ಉಲ್ಲಂಘನೆ ಕುರಿತು ಮಾರಾಟಗಾರರಿಗೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಎಚ್ಚರಿಕೆ ನೀಡಿ 08 ಪ್ರಕರಣ ದಾಖಲಿಸಿ ರೂ. 4500 ದಂಡ ವಿಧಿಸಲಾಯಿತು

ಸೆಪ್ಟಂಬರ್ 22 ಸೋಮವಾರ ದಂದು ಜಿಲ್ಲಾ ಸಮೀಕ್ಷಣಾಧಿಕಾರಿಗಳು ಡಾ.ವೆಂಕಟೇಶ ರಾಥೋಡ್ ಇವರ ಮಾರ್ಗದರ್ಶನದಲ್ಲಿ ಲಕ್ಷ್ಮೇಶ್ವರ ಪಟ್ಟಣದಲ್ಲಿ ಕೋಟ್ಪಾ ದಾಳಿಮಾಡಲಾಯಿತು. ಪಾನ್ ಬೀಡಾ ಅಂಗಡಿ ಹೋಟೆಲ್‌ಗಳಲ್ಲಿ ಅನಧಿಕೃತ ಧೂಮಪಾನ ಅಡ್ಡಾಗಳು ಮಾಡಿಕೊಂಡು ಸಾರ್ವಜನಿಕರ ಜೀವದ ಜೋತೆ ಚೆಲ್ಲಾಟವಾಡುತ್ತಿದ್ದು ಈ ರೀತಿಯ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವದರಿಂದ ಅವರು ಸೇವಿಸಿ ಬಿಟ್ಟ ಹೊಗೆಯಿಂದ ಅಮಾಯಕರು ಆ ಹೊಗೆ ಸೇವನೆಯಿಂದ ಪರೋಕ್ಷ ಧೂಮಪಾನಿಗಳಾಗಿ ತಂಬಾಕು ಸೇವೆನೆಯಿಂದಾಗು ಅಪಾಯಕಾರಿ ಕ್ಯಾನ್ಸರ್ ಹೃದಯ ಸಂಬಂಧಿ ಕಾಯಿಲೆ ಪಾರ್ಶ್ವವಾಯ, ಇತರ ಮಾರಣಾಂತಿಕ ಕಾಯಿಲೆಗಳಿಗೆ ಬಲಿಯಾಗುತ್ತಾರೆ ಸೆಕ್ಷನ್ 4. ಕಾಯ್ದೆ ಉಲ್ಲಂಘನೆಯಾದಲ್ಲಿ ದಂಡದ ಮೊತ್ತ ರೂ.1000/- ವಾಗಿದ್ದು ಧೂಮಪಾನದ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವದನ್ನು ನಷೇಧಿಸಲಾಗಿದೆ.

ಸೆಕ್ಷನ್ 6ಬಿ ಶಾಲಾ ಕಾಳೇಜುಗಳ ಸುತ್ತ 100 ಗಜದ ವರೇಗೆ ತಂಬಾಕು ಉತ್ಪನ್ನಗಳ ನಿಷೇಧಕ್ಕೆ ಹಾಗೂ ಸೆಕ್ಷನ್ 6ಎ 18 ವರ್ಷದೋಳಗಿನ ಬದಲಿಗೆ 21 ವರ್ಷದೊಳಗಿನವರಿಗೆ ತಂಬಾಖು ಉತ್ಪನ್ನನಿಷೇಧಿಸಲಾಗಿದ್ದು ಈ ಸೆಕ್ಷನ್ ಈ ಮೊದಲು ರೂ.200/-ಇದ್ದು ಸದರಿ ರೂ.1000/-ವರೆಗೆ ದಂಡ ಹೆಚ್ಚಿಸಲಾಗಿದೆ.

ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಅಧಕೃತ ಸೆಕ್ಷನ್ 4 ಹಾಗೂ ಸೆಕ್ಷನ್ 6ಎ ನಾಮಫಲಕ ಕಡ್ಡಾಯವಾಗಿ ಸ್ಥಳದ ಮಾಲಿಕರು ಬಿತ್ತರಿಸಬೇಕು,ಕಾರಣ ಶಾಲಾ ಕಾಲೇಜುಗಳ ಸುತ್ತಲಿನ ತಂಬಾಕು ಮಾರಾಟಗಾರರು ಮಾರಾಟ ನಿಲ್ಲಿಸದಿದ್ದಲ್ಲಿ ಮುಂದಿನ ದಿನ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವದು.

ದಾಳಿಯಲ್ಲಿ ಗೋಪಾಲ ಸುರಪುರ ಜಿಲ್ಲಾ ಸಲಹೆಗಾರರು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಗದಗ. ಪೊಲೀಸ್ ಇಲಾಖೆಯಿಂದ ವೈ.ಸಿ.ದೊಡ್ಡಮನಿ ಎ.ಎಸ್.ಐ ಪ್ರಕಾಶ ಕರ್ಜಗಿ ಎಫ್.ಬಿ. ಹೂಗಾರ ಆರೋಗ್ಯ ಶಿಕ್ಷಣ ಅಧಿಕಾರಿಗಳು, ಶ್ರೀಮತಿ ಬಸಮ್ಮ ಚಿತ್ತರಗಿ ಸಾಮಾಜಿಕ ಕಾರ್ಯಕರ್ತೆ. ಜಿ.ಬಿ.ಬಣಗಾರ ಹಾಗೂ ಕೆ.ಎಂ.ಕುಲಕರ್ಣಿ ಆರೋಗ್ಯ ನಿರೀಕ್ಷಣಾಧಿಕರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande