ರಾಯಚೂರು, 22 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವಸತಿ ಶಾಲೆ ಹಾಗೂ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 6,7,8,9 ಮತ್ತು 11ನೇ ತರಗತಿಯ ವಿದ್ಯಾರ್ಥಿನಿಯರಿಗೆ ಕರಾಟೆ-ಸ್ವಯಂ ರಕ್ಷಣಾ ಕೌಶಲ್ಯ ತರಬೇತಿಗೆ ನೀಡಲು ಅರ್ಹ ಮಹಿಳಾ ತರಬೇತಿದಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರತಿ ಬ್ಯಾಚ್‍ನಲ್ಲಿ 75-100 ವಿದ್ಯಾರ್ಥಿನಿಯರಿಗೆ ಸೇರಿಸಿ 3 ಬ್ಯಾಚ್‍ಗಳಲ್ಲಿ ವಿದ್ಯಾರ್ಥಿನಿಯರಿಗೆ ಪ್ರಾಥಮಿಕ ಹಾಗೂ ಉನ್ನತೀಕರಣ ಕರಾಟೆ-ಸ್ವಯಂ ರಕ್ಷಣಾ ಕೌಶಲ್ಯ ತರಬೇತಿಯನ್ನು ವಾರದಲ್ಲಿ ಎರಡು ದಿನಗಳಂತೆ ಆರು ತಿಂಗಳ ನಡೆಸಲಾಗುತ್ತದೆ.
ತರಬೇತಿ ಕಾರ್ಯಕ್ರಮ ನಿಗದಿತ 48 ಗಂಟೆಗಳ (6 ತಿಂಗಳ) ಅವಧಿಗಳಲ್ಲಿ ವಾರದಲ್ಲಿ ಎರಡು ದಿನಗಳಂತೆ ದಿನಕ್ಕೆ 60 ನಿಮಿಷಗಳಲ್ಲಿ ನುರಿತ ಕರಾಟೆ ತರಬೇತಿದಾರರಿಂದ ಕರಾಟೆ-ಸ್ವಯಂ ರಕ್ಷಣಾ ಕೌಶಲ ತರಬೇತಿಯನ್ನು ನಿಯಮಾನುಸಾರ ನೀಡಲಾಗುತ್ತಿದ್ದು, ಜಿಲ್ಲೆಯ ಸ್ವಯಂ ರಕ್ಷಣಾ ಕೌಶಲ್ಯಗಳ ಸಂಸ್ಥೆಗಳು, ನುರಿತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಜಿಲ್ಲಾ ಅಧಿಕಾರಿಗಳು, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ರಾಯಚೂರು ಇವರ ಕಚೇರಿಗೆ ಸೆಪ್ಟೆಂಬರ್ 29ರೊಳಗಾಗಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯನ್ನು ಕಚೇರಿಯ ಸಮಯದಲ್ಲಿ ಸಂಪರ್ಕ ಮಾಡಬಹುದಾಗಿದೆ ಎಂದು ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್