ರಾಯಚೂರು, 21 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಜಿಲ್ಲಾಡಳಿತ ಹಾಗೂ ರಾಯಚೂರು ಮಹಾನಗರ ಪಾಲಿಕೆಯಿಂದ ದಿಢೀರ್ ದಾಳಿ ನಡೆಸಿ ಹೊಟೆಲ್‌ಗಳು, ಚಹಾ ಅಂಗಡಿಗಳು, ರೆಸ್ಟೊರೆಂಟಗಳು ಮತ್ತು ಬಾರಗಳಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಲಾಯಿತು.
ರಾಯಚೂರು ಸಹಾಯಕ ಆಯುಕ್ತರು ಮತ್ತು ತಹಸೀಲ್ದಾರ ನೇತೃತ್ವದಲ್ಲಿ ಜಿಲ್ಲಾ ಅಂಕಿತ ಅಧಿಕಾರಿಗಳು ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ಮತ್ತು ಸಿಬ್ಬಂದಿಯ ಒಂದು ತಂಡವು ರೈಲ್ವೆ ನಿಲಾಣದ ಸುತ್ತಲಿನ 10ಕ್ಕೂ ಹೆಚ್ಚು ಹೊಟೆಲ್‌ಗಳು, ಚಹಾ ಅಂಗಡಿಗಳು ಮತ್ತು ರೆಸ್ಟೊರೆಂಟಗಳ ಮೇಲೆ ದಾಳಿ ನಡೆಸಿ 30 ಸಾವಿರ ರೂ.ವರೆಗೆ ದಂಡಿ ವಿದಿಸಿತು.
ಪಾಲಿಕೆಯ ಕಂದಾಯ ವಲಯ ಆಯುಕ್ತರು ಹಾಗೂ ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ನೇತೃತ್ವದ ಮತ್ತೊಂದು ತಂಡವು ಸಹ ಸುಮಾರು 10 ಕ್ಕೂ ಹೆಚ್ಚು ಬಾರ್ ಹಾಗೂ ರೆಸ್ಟೋರೆಂಟೆಗಳು ಮತ್ತು ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಅಲ್ಲಿನ ಸಾಮಗ್ರಿಗಳು, ಶುಚಿತ್ವದ ಬಗ್ಗೆ ಪರಿಶೀಲಿಸಿ 50 ಸಾವಿರ ರೂ.ಗಳರೆಗೆ ದಂಡ ವಿಧಿಸಿ ಬಿಸಿ ಮುಟ್ಟಿಸಿದರು.
ಸಹಾಯಕ ಆಯುಕ್ತರು ಮತ್ತು ತಹಸೀಲ್ದಾರ ನೇತೃತ್ವದ ತಂಡವು ರೈಲ್ವೆ ನಿಲ್ದಾಣದ ಸುತ್ತಲಿನ ಸಸ್ಯಹಾರಿ ಮತ್ತು ಮೌಂಸಾಹಾರಿ ಹೊಟೆಲ್‌ಗಳಿಗೆ ಪ್ರವೇಶಿಸಿ ಅವರು ಅಡುಗೆಗೆ ಬಳಸುವ ನಾನಾ ಸಾಮಗ್ರಿಗಳ ಗುಣಮಟ್ಟ ಪರಿಶೀಲಿಸಿತು.
ಕೆಲ ಹೊಟೆಲಗಳಲ್ಲಿ ನಿಷೇಧಿತ ಉಪ್ಪನ್ನು ಮತ್ತು ನಿಷೇಧಿತ ಬಣ್ಣದ ರಸಾಯನವನ್ನು ಬಳಸುವುದರ ಬಗ್ಗೆ ಪತ್ತೆ ಹಚ್ಚಿ ದಂಡ ವಿಧಿಸಿದರು.
ಇನ್ಮುಂದೆ ಬಳಸಕೂಡದು ಎಂದು ಎಚ್ಚರಿಕೆ ನೀಡಲಾಯಿತು. ಕೆಲ ಹೊಟೆಲಗಳಲ್ಲಿ ಅಶುಚಿತ್ವ ಕಂಡು ಬಂದಿತು.
ನೊಟೀಸ್ ಜಾರಿ: ಕೆಲಸ ಮಾಡುವವರು ವ್ಶೆದ್ಯರಿಂದ ವೈದ್ಯಕೀಯ ಪ್ರಮಾಣ ಪತ್ರ ಪಡೆದಿರುವುದಿಲ್ಲ. ಹೊಟೆಲ್‌ನ ಆವರಣದ ಹೊರಗೆ ಮತ್ತು ಒಳಗೆ ಸ್ವಚ್ಛತೆ ಕಾಪಾಡಲು ವಿಫಲರಾಗಿದ್ದಾರೆ ಮತ್ತು ದುರ್ನಾತ ಬರುತ್ತಿದೆ. ಅಡುಗೆಗೆ ಬಣ್ಣವನ್ನು ಕಾನೂನಿನ ಪ್ರಕಾರ 100 ಪಿಪಿಎಂಗಿ0ತ ಅಧಿಕ ಬಳಸುತ್ತಿದ್ದಾರೆ ಎಂದು ಕೆಲ ಹೊಟೆಲಗಳಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರದಿಂದ ಸುಧಾರಣಾ ನೊಟೀಸ್ ಜಾರಿ ಮಾಡಲಾಯಿತು.
ಪ್ರಯೋಗಾಲಕ್ಕೆ ಕಳುಹಿಸಲು ನೀರು ಸಂಗ್ರಹ: ಭೇಟಿ ಸಂದರ್ಭದಲ್ಲಿ ಕೆಲ ಹೊಟೆಲಗಳಲ್ಲಿನ ನೀರಿನ ತೊಟ್ಟಿಗಳು ಮತ್ತು ಟ್ಯಾಂಕಗಳನ್ನು ಪರಿಶೀಲಿಸಲಾಯಿತು.
ನೀರಿನ ತೊಟ್ಟಿಯು ಜಂಗು ಹತ್ತಿದಂತೆ ಮತ್ತು ಅಶುಚಿತ್ವ ಕಂಡು ಬಂದ ಹಿನ್ನೆಲೆಯಲ್ಲಿ ಪ್ರಯೋಗಾಲಯಕ್ಕೆ ಕಳುಹಿಸಲು ಬಾಟಲಗಳಲ್ಲಿ ನೀರು ಸಂಗ್ರಹಿಸಲಾಯಿತು. ಪ್ರತಿ ದಿನ ನೀರಿನ ತೊಟ್ಟಿ, ಟ್ಯಾಂಕಗಳನ್ನು ಸ್ವಚ್ಛ ಮಾಡುವಂತೆ ಮಾಲೀಕರಿಗೆ ಎಚ್ಚರಿಕೆ ನೀಡಲಾಯಿತು.
ಪ್ಲಾಸ್ಟಿಕ್ ಬಳಕೆಗೆ ದಂಡ: ಪಾಲಿಕೆಯ ಕಂದಾಯ ವಲಯ ಆಯುಕ್ತರು ಹಾಗೂ ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ನೇತೃತ್ವದ ತಂಡವು ಬಾರ್‌ಗಳಲ್ಲಿ ಸ್ವಚ್ಛತೆ ಹಾಗೂ ನಿಷೇಧಿತ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಪರಿಶೀಲಿಸಿತು. ಕೆಲ ಕಡೆಗಳಲ್ಲಿ ನಿಷೇಧಿತ ಪ್ಲಾಸ್ಟಿಕ್, ನೀರಿನ ಪೌಚ್‌ಗಳ ಬಳಸುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿ ದಂಡ ವಿಧಿಸಿ ಎಚ್ಚರಿಕೆ ನೀಡಿದರು.
ರಸಾಯನಿಕ ಬಳಸದಂತೆ ಎಚ್ಚರಿಕೆ: ಹೋಟೆಲ್ ಮತ್ತು ರೆಸ್ಟೋರೆಂಟಗಳ ಪ್ರವೇಶ ವೇಳೆಯಲ್ಲಿ ಅಲ್ಲಿ ಬಳಸುತ್ತಿದ್ದ ಅಡುಗೆ ಸಾಮಗ್ರಿ, ದವಸ ದಾನ್ಯಗಳ ಗುಣಮಟ್ಟ, ಅಡುಗೆಗೆ ಬಳಸುವ ನೀರಿನ ಗುಣಮಟ್ಟದ ಬಗ್ಗೆ ಪರಿಶೀಲಿಸಿದರು. ಸಾರ್ವಜನಿಕರಿಗೆ ನೀಡುವ ಯಾವುದೇ ಪದಾರ್ಥಗಳಿಗೆ ರಾಸಾಯನಿಕ ಬಳಸಬಾರದು. ಆಹಾರದ ಸ್ವಚ್ಛತೆ ಮತ್ತು ಗುಣಮಟ್ಟದ ಬಗ್ಗೆ ವಿಶೇಷ ನಿಗಾವಹಿಸಬೇಕು. ಹೋಟೆಲ್ ಮತ್ತು ರೆಸ್ಟೋರೆಂಟಗಳಲ್ಲಿನ ಸಿಬ್ಬಂದಿಯು ವೈಯಕ್ತಿಕವಾಗಿ ಸ್ವಚ್ಛತೆಯಿಂದಿರಬೇಕು. ಆರೋಗ್ಯವಂತರಾಗಿರಬೇಕು. ಅಡುಗೆ ಮಾಡುವ ಎಲ್ಲ ಸಿಬ್ಬಂದಿಯ ಆರೋಗ್ಯ ಬಗ್ಗೆ ಕಾಲಕಾಲಕ್ಕೆ ಕಡ್ಡಾಯ ತಪಾಸಣೆ ಮಾಡಿಸಬೇಕೆಂದು ಮಾಲೀಕರಿಗೆ ಇದೆ ವೇಳೆ ಎಚ್ಚರಿಕೆ ನೀಡಲಾಯಿತು.
ಸ್ವಚ್ಛತಾ ನಿಯಮಗಳ ಬಗ್ಗೆ ನಿರ್ಲಕ್ಷ್ಯತೆ ವಹಿಸಿ ಉಲ್ಲಂಘನೆ ಮಾಡಿದರೆ ಅಂತಹ ಹೋಟೆಲ್ ಹಾಗೂ ಅಂಗಡಿಗಳ ಮೇಲೆ ದಂಡ ವಿಧಿಸಿ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗುವುದು, ಅಗತ್ಯವಿದ್ದಲ್ಲಿ ಅಂಗಡಿಯನ್ನು ಮುಟ್ಟುಗೋಲ ಅಥವಾ ವಶಪಡಿಸಕೊಳ್ಳಲಾಗುವುದು ಎಚ್ಚರಿಕೆ ನೀಡಲಾಯಿತು.
ನಾನಾ ಅಂಶಗಳ ಪರಿಶೀಲನೆ: ಆಹಾರ ಪರವಾನಿಗೆ, ನೋಂದಣಿ ನವೀಕರಣ, ಪಡೆದಿರುವ ಆಹಾರದ ಪರವಾನಿಗೆ ನೋಂದಣಿ ಪತ್ರದ ಪ್ರದರ್ಶನ ಇದೆಯೇ?, ಶುದ್ಧ ಕುಡಿಯುವ ನೀರು ನೀಡಲು ಉಪಕರಣ ಅಳವಡಿಸಿರುವುದಿಲ್ಲ. ತಿಂಡಿ ತಿನಿಸು, ಪಾನೀಯಗಳು ತೆರೆದ ಪಾತ್ರೆಯಲ್ಲಿವೆಯೇ? ತಟ್ಟೆ, ಚಮಚೆ, ಲೋಟ ಇತ್ಯಾದಿಯನ್ನು ಕುದಿಯುವ ನೀರಿನಿಂದ ಸ್ವಚ್ಚಗೊಳಿಸಿಲ್ಲ. ಆಹಾರ ತಯಾರು ಮಾಡುವ ಕೊಠಡಿ ಸಂಗ್ರಹ ಮತ್ತು ಮಾರಾಟ ಮಾಡುವ ಸ್ಥಳದಲ್ಲಿ ಸ್ವಚ್ಚತೆ ಕಾಪಾಡಿಲ್ಲ. ನೆಲ ಮೇಜುಗಳನ್ನು ನೊಣ ಹಾಗೂ ಇತರೆ ಕ್ರಿಮಿಕೀಟಗಳಿಂದ ಮುಕ್ತವಾಗಿರಿಸಲು ಕ್ರಮಿನಿನಾಶಕಗಳಿಂದ ಸ್ವಚ್ಛಗೊಳಿಸಿಲ್ಲ. ಒಡೆದ ಮೊಟ್ಟೆ, ಕಳಪೆ ಮೊಟ್ಟೆ ಬಳಸುತ್ತಿರುವುದು, ಹೊಟೆಲ್‌ನಲ್ಲಿ ಅಡುಗೆ ಮಾಡುವ, ಸರಬರಾಜು ಸಿಬ್ಬಂದಿ ತಲೆಗೆ ಟೋಪಿ, ಕೈಗೆ ಗ್ಲೌಸ್, ಮುಖಕ್ಕೆ ಮಾಸ್ಕ ಹಾಕಿದ್ದಾರಾ? ಐಎಸ್‌ಐ ಪ್ರಾಮಾಣಿಕರೀಸಿದ ಬಣ್ಣಗಳನ್ನು ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಬಳಸುತ್ತಿಲ್ಲ. ಪಾತ್ರೆ ಪರಿಕರ ತೊಳೆಯುವ ಜಾಗದಲ್ಲಿ ನೀರು ನಿಲ್ಲದಂತೆ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಅಡುಗೆ ಕೋಣೆಯಲ್ಲಿ ಸೂಚಿತ ಫ್ಯಾನ್ ಅಳವಡಿಸಿಲ್ಲ. ಕೀಟನಾಶಕ ಪ್ರಮಾಣ ಪತ್ರ ಇಟ್ಟಿರುವುದಿಲ್ಲ ಎನ್ನುವಂತಹ ನಾನಾ ಅಂಶಗಳ ಬಗ್ಗೆ ಭೇಟಿ ವೇಳೆ ಪರಿಶೀಲಿಸಲಾಯಿತು. ಲೋಪ ಕಂಡು ಬಂದ ಕಡೆಗಳಲ್ಲಿ ದಂಡ ವಿಧಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್