ರಾಯಚೂರು, 21 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ವಿಜಯಪುರದ ಬಾಲಕರ ಬಾಲಮಂದಿರದಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ, ರಾಯಚೂರಿನ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯ ವ್ಯಾಪ್ತಿಯ ರಾಂಪೂರು ರಸ್ತೆಯ ಎಂ ಎಂ ಕಾಲೋನಿ ನಿವಾಸಿಯಾದ ಅನಿಲಕುಮಾರ (17) ಶಾಲೆಗೆ ಹೋಗುತ್ತೇನೆಂದು ಹೇಳಿ ಹೋದವನು ಮರಳಿ ಬಾಲಮಂದಿರಕ್ಕೆ ಬಾರದೆ ಕಾಣೆಯಾಗಿದ್ದು, ಈ ಕುರಿತು ರಾಯಚೂರ ಮಾರ್ಕೇಟ್ ಯಾರ್ಡ್ ಠಾಣೆಯಲ್ಲಿ ಗುನ್ನೆ ನಂಬರ್: 90/2025 ಕಲಂ 137 (2) ಬಿಎನ್‌ಎಸ್-2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಅನಿಲಕುಮಾರನು ವಿಜಯಪುರದ ಬಾಲಕರ ಬಾಲಮಂದಿರದಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಸೆ.20ರಂದು ಬಿಜಾಪುರ ಬಾಲಕರ ಬಾಲಮಂದಿರದಿoದ ತಮಗೆ ಸಾಯಂಕಾಲ 6 ಗಂಟೆಗೆ ಪೋನ್ ಮಾಡಿ ನಿಮ್ಮ ಮಗನಾದ ಅನೀಲಕುಮಾರನು ಶಾಲೆಗೆ ಹೋದವನು ಇದುವರೆಗೂ ವಾಪಸ್ ಬಂದಿರುವುದಿಲ್ಲ ಅಂತಾ ತಿಳಿಸಿದಾಗ, ತಾನು ತಮ್ಮ ಸಂಬ0ಧಿಕರ ಊರುಗಳಿಗೆ ಪೋನ್ ಮಾಡಿ ವಿಚಾರಿಸಿದಾಗ ತನ್ನ ಮಗನ ಸುಳಿವು ಸಿಕ್ಕಿರುವುದಿಲ್ಲ. ನಂತರ ದಿನಾಂಕ:21.08.2025 ರಂದು ತಾನು ರಾಯಚೂರಿಗೆ ಬಂದು ಎಂ.ಎ0. ಕಾಲೋನಿಯಲ್ಲಿರುವ ತನ್ನ ತವರು ಮನೆ ಮತ್ತು ಕಾಳಿದಾಸ ನಗರದಲ್ಲಿ ಇರುವ ತನ್ನ ಅತ್ತೆ ಹುಲಿಗೆಮ್ಮಳ ಮನೆಗೆ ಬಂದು ವಿಚಾರಿಸಿದಾಗ, ದಿನಾಂಕ 21-08-2025ರ ರಂದು ಬೆಳಿಗ್ಗೆ 11 ಗಂಟೆಗೆ ಅನೀಲಕುಮಾರನು ಮನೆಗೆ ಬಂದು ತನ್ನ ಹತ್ತಿರ 200 ರೂಪಾಯಿ ಪಡೆದುಕೊಂಡು ಬಿಜಾಪುರಕ್ಕೆ ವಾಪಸ್ ಹೋಗುತ್ತೇನೆ ಅಂತಾ ಹೇಳಿ ಹೋದನು ಎಂದು ತಿಳಿಸಿದ್ದಾರೆ.
ಅಂದಿನಿ0ದ ತಾನು, ಮತ್ತು ತನ್ನ ಅತ್ತೆ ಹುಲಿಗೆಮ್ಮ, ಮೈದುನ ಭೀಮರಾಯ ಸೇರಿ ಹುಡುಕಿದರು ತನ್ನ ಮಗಳ ಸುಳಿವು ಎಲ್ಲಿಯೂ ಸಿಗಲಿಲ್ಲ. ಯಾರೋ ಅಪರಿಚಿತರು ಯಾವುದೋ ದುರುದ್ದೇಶದಿಂದ ತನ್ನ ಅಪ್ರಾಪ್ತ ಮಗನಾದ ಅನಿಲಕುಮಾರನನ್ನು ಅಪಹರಣ ಮಾಡಿಕೊಂಡು ಹೋಗಿರುವ ಸಾಧ್ಯತೆ ಇರುತ್ತದೆ ಎಂದು ಫೀರ್ಯಾದಿದಾರರು ರಾಯಚೂರಿನ ಮಾರ್ಕೇಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಚಹರೆ ಪಟ್ಟಿ: 5 ಫೀಟ್ 7 ಇಂಚು ಎತ್ತರ, ಬಿಳಿ ಮೈ ಬಣ್ಣ, ದುಂಡು ಮುಖ, ತೆಳ್ಳನೆಯ ಮೈಕಟ್ಟು, ತಲೆಯಲ್ಲಿ ಕಪ್ಪು ಕೂದಲು ಕಪ್ಪು ಬಣ್ಣದ ಟಿ-ಶರ್ಟ, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು, ಕನ್ನಡ, ತೆಲಗು ಹಾಗೂ ಹಿಂದಿ ಭಾಷೆ ಮಾತನಾಡುತ್ತಾನೆ. ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಾದಲ್ಲಿ ಮಾರ್ಕೆಟ್ ಯಾರ್ಡ ಪೊಲೀಸ್ ಠಾಣೆಯ ಪಿ.ಎಸ್.ಐ ಮೊಬೈಲ್ ಸಂಖ್ಯೆ: 9480803849 ಅಥವಾ ಠಾಣೆಯ ದೂರವಾಣಿ ಸಂಖ್ಯೆ: 08532-235600ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಠಾಣೆಯ ಆರಕ್ಷಕ ಉಪ ನಿರೀಕ್ಷಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್