ಸೆ.25ರಂದು 13 ಗ್ರಾಮಗಳಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಪಿಂಚಣಿ ದಿನ
ವಿಜಯಪುರ, 21 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ವಿವಿಧ ಸಾಮಾಜಿಕ ಭದ್ರತೆ ಯೋಜನೆಗಳಿಗೆ ಸಂಬಂಧಿಸಿದಂತೆ ಪಿಂಚಣಿದಾರರು ತಮ್ಮ ಕುಂದುಕೊರತೆಗಳನ್ನು ನೋಂದಾಯಿಸಲು, ಪಿಂಚಣಿ ಕುರಿತಾದ ಮಾಹಿತಿ ಪಡೆಯಲು ಹಾಗೂ ಹಂಚಿಕೊಳ್ಳಲು ಜಿಲ್ಲೆಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿಂಚಣಿ ದಿನ ನಡೆಸಲಾಗುತ್ತಿದ್ದು, ಇದೇ ಸೆಪ
ಸೆ.25ರಂದು 13 ಗ್ರಾಮಗಳಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಪಿಂಚಣಿ ದಿನ


ವಿಜಯಪುರ, 21 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ವಿವಿಧ ಸಾಮಾಜಿಕ ಭದ್ರತೆ ಯೋಜನೆಗಳಿಗೆ ಸಂಬಂಧಿಸಿದಂತೆ ಪಿಂಚಣಿದಾರರು ತಮ್ಮ ಕುಂದುಕೊರತೆಗಳನ್ನು ನೋಂದಾಯಿಸಲು, ಪಿಂಚಣಿ ಕುರಿತಾದ ಮಾಹಿತಿ ಪಡೆಯಲು ಹಾಗೂ ಹಂಚಿಕೊಳ್ಳಲು ಜಿಲ್ಲೆಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿಂಚಣಿ ದಿನ ನಡೆಸಲಾಗುತ್ತಿದ್ದು, ಇದೇ ಸೆಪ್ಟೆಂಬರ್ 25ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲೆಯ ವಿವಿಧ 13 ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಪಿಂಚಣಿ ದಿನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆನಂದ.ಕೆ ತಿಳಿಸಿದ್ದಾರೆ.

ವಿಜಯಪುರ ತಾಲೂಕಿನ ಗ್ರೇಡ್-2 ತಹಶೀಲ್ದಾರರು ಮದಭಾವಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ, ಬಬಲೇಶ್ವರ ತಾಲೂಕಿನ ಗ್ರೇಡ್-2 ತಹಶೀಲ್ದಾರರು ನಿಡೋಣಿ ಗ್ರಾಮದ ಪಂಚಾಯತಿ ಕಾರ್ಯಾಲಯದಲ್ಲಿ, ತಿಕೋಟಾ ತಾಲೂಕಿನ ಗ್ರೇಡ್-2 ತಹಶೀಲ್ದಾರ ಅವರು ಕೋಟ್ಯಾಳ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ, ಹಾಗೂ ಬಸವನ ಬಾಗೇವಾಡಿ ತಾಲೂಕಿನ ಗ್ರೇಡ್-2 ತಹಶೀಲ್ದಾರ ಅವರು ಉಕ್ಕಲಿ ಗ್ರಾಮ ಪಂಚಾಯತಿಯ ಕಾರ್ಯಾಲಯದಲ್ಲಿ ಪಿಂಚಣಿ ದಿನವನ್ನು ನಡೆಸಲಿದ್ದಾರೆ.

ನಿಡಗುಂದಿ ತಾಲೂಕಿನ ತಹಶೀಲ್ದಾರ ಅವರು ವಂದಾಲ ಗ್ರಾಮ ಪಂಚಾಯತಿಯ ಕಾರ್ಯಾಲಯ ಸಭಾ ಭವನದಲ್ಲಿ, ಕೋಲ್ಹಾರ ತಹಶೀಲ್ದಾರ ಅವರು ಮುಳವಾಡ ಗ್ರಾಮ ಪಂಚಾಯತಿಯ ಕಾರ್ಯಾಲಯದಲ್ಲಿ, ಮುದ್ದೇಬಿಹಾಳ ಗ್ರೇಡ್-2 ತಹಶೀಲ್ದಾರ ಅವರು ಇಂಗಳಗೇರಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ, ತಾಳಿಕೋಟೆ ಗ್ರೇಡ್-2 ತಹಶೀಲ್ದಾರ ಅವರು ಕೊಡಗಾನೂರ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಹಾಗೂ ಇಂಡಿ ತಹಶೀಲ್ದಾರ ಅವರು ಸಾಲಟಗಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಪಿಂಚಣಿ ದಿನ ನಡೆಸಲಿದ್ದಾರೆ.

ಚಡಚಣ ತಹಶೀಲ್ದಾರ ಅವರು ಹತ್ತಳ್ಳಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ, ಸಿಂದಗಿ ತಹಶೀಲ್ದಾರ ಅವರು ಯರಗಲ್ಲ ಬಿ.ಕೆ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ, ದೇವರ ಹಿಪ್ಪರಗಿ ತಹಶೀಲ್ದಾರ ಅವರು ಕೊಂಡಗೂಳಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಆಲಮೇಲ ತಹಶೀಲ್ದಾರ ಅವರು ದೇವಣಗಾಂವ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಪಿಂಚಣಿ ದಿನ ನಡೆಸಲಿದ್ದಾರೆ.

ಪಿಂಚಣಿ ದಿನದಂದು ಗ್ರಾಮ ಆಡಳಿತಾಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತಿ ಕಾರ್ಯದರ್ಶಿಗಳು ಹಾಗೂ ಅಂಚೆ ಕಚೇರಿ ಸಿಬ್ಬಂದಿಗಳು ತಮ್ಮ ಗ್ರಾಮದ ಸಂಪೂರ್ಣ ಪಿಂಚಣಿದಾರರ ಮಾಹಿತಿಯೊಂದಿಗೆ ಹಾಜರಿರುವುದು.

ಪಿಂಚಣಿ ದಿನದ ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು.

ಪಿಂಚಣಿ ದಿನ ಹಾಗೂ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಂಡಿರುವುದರ ಕುರಿತು ನಿಗಧಿತ ನಮೂನೆ ಹಾಗೂ ಛಾಯಾ ಚಿತ್ರಗಳನ್ನು ಅದೇ ದಿನ ಸಂಜೆ 6ಗಂಟೆಯೊಳಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬೇಕೆಂದು ಎಂದು ಜಿಲ್ಲಾಧಿಕಾರಿ ಅವರ ಪ್ರಕಟಣೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande