ಯರಮರಸ್ ನಲ್ಲಿ 2419 ಮನೆಗಳ ನಿರ್ಮಾಣ : ಸಚಿವ ಎನ್ಎಸ್ ಬೋಸರಾಜು ಪರಿಶೀಲನೆ
ರಾಯಚೂರು, 21 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ರಾಯಚೂರು ನಗರ ವ್ಯಾಪ್ತಿಯ ನಿರಾಶ್ರಿತರಿಗೆ ಶಾಶ್ವತ ಸೂರು ಕಲ್ಪಿಸಲು ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅಧಿಕಾರಿಗಳು ಗುಣಮಟ್ಟದೊಂದಿಗೆ ಮನೆಗಳನ್ನು ನಿರ್ಮಿಸುವ ಮೂಲಕ ಕಾನೂನಾತ್ಮಕವಾಗಿ ತ್ವರಿತಗತಿಯಲ್ಲಿ ಮನೆಗಳನ್ನು ನಿರಾಶ್ರಿತರಿಗೆ ಹಂಚಿಕೆ ಮ
ಯರಮರಸ್ ನಲ್ಲಿ 2419 ಮನೆಗಳ ನಿರ್ಮಾಣ  : ಸಚಿವ ಎನ್ಎಸ್ ಬೋಸರಾಜು ಪರಿಶೀಲನೆ


ಯರಮರಸ್ ನಲ್ಲಿ 2419 ಮನೆಗಳ ನಿರ್ಮಾಣ  : ಸಚಿವ ಎನ್ಎಸ್ ಬೋಸರಾಜು ಪರಿಶೀಲನೆ


ಯರಮರಸ್ ನಲ್ಲಿ 2419 ಮನೆಗಳ ನಿರ್ಮಾಣ  : ಸಚಿವ ಎನ್ಎಸ್ ಬೋಸರಾಜು ಪರಿಶೀಲನೆ


ರಾಯಚೂರು, 21 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ರಾಯಚೂರು ನಗರ ವ್ಯಾಪ್ತಿಯ ನಿರಾಶ್ರಿತರಿಗೆ ಶಾಶ್ವತ ಸೂರು ಕಲ್ಪಿಸಲು ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅಧಿಕಾರಿಗಳು ಗುಣಮಟ್ಟದೊಂದಿಗೆ ಮನೆಗಳನ್ನು ನಿರ್ಮಿಸುವ ಮೂಲಕ ಕಾನೂನಾತ್ಮಕವಾಗಿ ತ್ವರಿತಗತಿಯಲ್ಲಿ ಮನೆಗಳನ್ನು ನಿರಾಶ್ರಿತರಿಗೆ ಹಂಚಿಕೆ ಮಾಡಬೇಕು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ ಎಸ್ ಬೋಸರಾಜು ಅವರು ತಿಳಿಸಿದ್ದಾರೆ.

ರಾಯಚೂರಿನ ಹೊರವಲಯದ ಯರಮರಸ್ ಬಳಿಯಲ್ಲಿ ನಿರ್ಮಿಸಲಾಗುತ್ತಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆ ಯೋಜನೆಯಡಿ (ಎ ಎಚ್ ಪಿ) ರಾಯಚೂರು ಮಹಾನಗರ ಪಾಲಿಕೆಯ ಜಿ+3 ಮಹಡಿಯ ಮಾದರಿಯಲ್ಲಿ ನಿರ್ಮಿಸಿದ 2419 ಮನೆಗಳಿಗೆ ಭೇಟಿ ನೀಡಿ ಪರಿಸೀಲಿಸಿ ಮಾತನಾಡಿದರು.

ಈಗಾಗಲೆ ನಾಲ್ಕೈದು ವರ್ಷಗಳಕಾಲ ಮನೆಗಳ ನಿರ್ಮಾಣದಲ್ಲಿ ವಿಳಂಬವಾಗಿದೆ. ಬಡವರಿಗೆ ಸೂರಿನ ಭದ್ರತೆ ನೀಡಲು ಸರ್ಕಾರಗಳು ಮನೆಗಳನ್ನು‌ ನಿರ್ಮಿಸುವುದಲ್ಲದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಬ್ಸಿಡಿ‌ ಯೋಜೆನೆಯಡಿಯಲ್ಲಿ ಮನೆಗಳನ್ನು ಖರೀದಿಸಲು ಸಹ ಅವಕಾಶ ಕಲ್ಪಿಸಲಾಗಿದೆ.‌ ಸಬ್ಸಿಡಿಗೆ ಅವಕಾಶವಿದೆ ಅರ್ಹ ನಿರಾಶ್ರಿತರು ಎಲ್ಲಾ ಸೌಲಭ್ಯಗಳೊಂದಿಗೆ ನಿರ್ಮಿಸಲಾಗಿರುವ ಮನೆಗಳನ್ನು ಪಡೆಯಬಹುದಾಗಿದೆ. ಅಧಿಕಾರಿಗಳು ನಿರಾಶ್ರಿತ ಫಲಾನುಭವಿಗಳನ್ನು ಗುರಿತಿಸಿ ಮನೆಗಳನ್ನು ಹಂಚಿಕೆ ಮಾಡಬೇಕು ಎಂದು ತಿಳಿಸಿದರು.

ಒಟ್ಟು 2419 ಮನೆಗಳ ಪೈಕಿ ಎರಡು ವಿಭಾಗಗಳಾಗಿ ವಿಂಗಡಿಸಿ ಮನೆಗಳನ್ನು ಕಟ್ಟಲಾಗಿದೆ. ಮೊದಲ ಭಾಗದಲ್ಲಿ 1191 ಮನೆಗಳು ನಿರ್ಮಿಸಲಾಗಿದೆ. ಎರಡನೆ ವಿಭಾಗದಲ್ಲಿ 1228 ಮನೆಗಳನ್ನು ನಿರ್ಮಿಸಲಾಗಿದೆ. ತ್ವರಿತಗತಿಯಲ್ಲಿ ನಿರ್ಮಾಣ ಕಾಮಗಾರಿಯನ್ನು ಮುಗಿಸಿ ಹಂಚಿಕೆ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಸಚಿವರಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಆಯುಕ್ತರು, ರಾಯಚೂರು ಸಹಾಯಕ ಆಯುಕ್ತರು, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್, ಭೂದಾಖಲೆಗಳ ನಿರ್ದೇಶಕರು, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಹೇಶಕುಮಾರ, ತಾಲೂಕ ಭೂದಾಖಲೆಗಳ ಸಹಾಯ ನಿರ್ದೇಶಕರಾದ ಬಾಳಪ್ಪ, ವಿಮಾನ ನಿಲ್ದಾಣದ ಎಂಜಿನಿಯರ್ ಪ್ರವೀಣ, ಕಾಂಗ್ರೆಸ್ ಮುಖಂಡರಾದ ಕೆ ಶಾಂತಪ್ಪ, ಅಮರೇಗೌಡ ಹಂಚಿನಾಳ, ರುದ್ರಪ್ಪ ಅಂಗಡಿ, ಸಣ್ಣ ನರಸರಡ್ಡಿ ಸೇರಿ ಸಂಬಂಧಿಸಿದ ಗುತ್ತಿಗೆದಾರರು, ಎಂಜಿನಿಯರ್‌ಗಳು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande