ತ್ವರಿತ ಗತಿಯಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಮುಗಿಸಿ- ಎನ್ಎಸ್ ಬೋಸರಾಜು
ರಾಯಚೂರು, 21 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ರಾಯಚೂರು ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಯನ್ನು ಗುಣಮಟ್ಟದೊಂದಿಗೆ ತ್ವರಿತಗೊಳಿಸಿ ಆದಷ್ಟು ಬೇಗ ಶೀಘ್ರ ನೀಲನಕ್ಷೆಯಲ್ಲಿ ಪ್ರಸ್ತಾಪಿಸಿರುವ ರನ್‌ವೇ, ಸಿಆರ್‌ಎಫ್ ಕಟ್ಟಡ, ಎಟಿಸಿ ಕಟ್ಟಡ ಮತ್ತು ಮಾಸ್ಟರ್ ಪ್ಲಾನ್‌ನಲ್ಲಿ ತೋರಿಸಿದ ಎಲ್ಲ ಕಾಮಗಾರಿಗ
ತ್ವರಿತಗತಿಯಲ್ಲಿ ವಿಮಾನ ನಿಲ್ದಾಣ ಕಾಮಗಾರಿಯನ್ನು ಮುಗಿಸಿ- ಎನ್ಎಸ್ ಬೋಸರಾಜು


ತ್ವರಿತಗತಿಯಲ್ಲಿ ವಿಮಾನ ನಿಲ್ದಾಣ ಕಾಮಗಾರಿಯನ್ನು ಮುಗಿಸಿ- ಎನ್ಎಸ್ ಬೋಸರಾಜು


ತ್ವರಿತಗತಿಯಲ್ಲಿ ವಿಮಾನ ನಿಲ್ದಾಣ ಕಾಮಗಾರಿಯನ್ನು ಮುಗಿಸಿ- ಎನ್ಎಸ್ ಬೋಸರಾಜು


ರಾಯಚೂರು, 21 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ರಾಯಚೂರು ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಯನ್ನು ಗುಣಮಟ್ಟದೊಂದಿಗೆ ತ್ವರಿತಗೊಳಿಸಿ ಆದಷ್ಟು ಬೇಗ ಶೀಘ್ರ ನೀಲನಕ್ಷೆಯಲ್ಲಿ ಪ್ರಸ್ತಾಪಿಸಿರುವ ರನ್‌ವೇ, ಸಿಆರ್‌ಎಫ್ ಕಟ್ಟಡ, ಎಟಿಸಿ ಕಟ್ಟಡ ಮತ್ತು ಮಾಸ್ಟರ್ ಪ್ಲಾನ್‌ನಲ್ಲಿ ತೋರಿಸಿದ ಎಲ್ಲ ಕಾಮಗಾರಿಗಳನ್ನು ನಿಗದಿಪಡಿಸಿದ ಅವಧಿಯೊಳಗೆ ಪೂರ್ಣವಾಗಬೇಕು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ಎಸ್ ಬೋಸರಾಜು ಅವರು ತಿಳಿಸಿದ್ದಾರೆ.

ರಾಯಚೂರಿನ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಯ ಉದ್ದೇಶಿತ ಸ್ಥಳವಾದ ಯರಮರಸ್ ಹೊರವಲಯದ ಪ್ರದೇಶಕ್ಕೆ ಮಹಾನಗರ ಪಾಲಿಕೆ ಆಯುಕ್ತರಾದ ಜುಬೇನ್ ಮೊಹಪೋತ್ರ, ಸಹಾಯಕ ಆಯುಕ್ತರಾದ ಗಜಾನನ್ ಬಾಳೆ ಸೇರಿ ಸಂಬಂದಿಸಿದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕಾಮಗಾರಿಯನ್ನು ಪರಿವೀಕ್ಷಣೆ ಮಾಡಿದರು.

ವಿಮಾನ ನಿಲ್ದಾಣಕ್ಕೆ ಕಾಯ್ದಿರಿಸಿದ ಒಟ್ಟು ಒಟ್ಟು 322.3 ಎಕರೆ ವಿಸ್ತೀರ್ಣ ಸ್ಥಳದ ಹದ್ದುಬಸ್ತುಗಾಗಿ ಅಂದಾಜು ನಾಲ್ಕು ಕಿ.ಮೀ.ಸುತ್ತಳತೆಯಷ್ಟು ನಿರ್ಮಿಸಲಾದ ಕಾಂಪೌಂಡ್ ಗೋಡೆಯನ್ನು ಪರಿಸೀಲಿಸಿದರು. ನೀಲ ನಕ್ಷೆಯಂತೆ ಹಂತ ಹಂತವಾಗಿ ಎಲ್ಲಾ ಕಾಮಗಾರಿಗಳ‌ ಕಟ್ಟಡಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಯಾವುದೆ ಕಾಮಗಾರಿಗಳನ್ನು ಬಾಕಿ‌ ಉಳಿಸದಂತೆ ಒಂದೆಹಂತದಲ್ಲಿ ಮುಗಿಸಲು ಅಗತ್ಯ ಕ್ರಮ ಕೈಗೊಂಡು ಗುಣಮಟ್ಟದೊಂದಿಗೆ ಕಾಮಗಾರಿ ನಿರ್ವಹಿಸಬೇಕೆಂದು ತಿಳಿಸಿದರು.

ಭೂ ಸ್ವಾಧೀನ ಪ್ರಕ್ರಿಯೆಗೆ ಸಂಬಂದಿಸಿದಂತೆ ನ್ಯಾಯಾಲಯದಲ್ಲಿರುವ ಕೆಲ ಪ್ರಕರಣಗಳನ್ನು ಹೊರತುಪಡಿಸಿ ಉಳಿದೆಲ್ಲ ಭೂ ಪ್ರದೇಶವನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದಷ್ಟು ಬೇಗ ಕಾಮಗಾರಿಗಳನ್ನು ಮುಗಿಸಲು ಕ್ರಮ ಕೈಗೊಳ್ಲ್ಳಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಜುಬೆನ್ ಮೊಹಪೋತ್ರ, ಸಹಾಯಕ ಆಯುಕ್ತರಾದ ಗಜಾನನ ಬಾಳೆ ಅವರು ಸಚಿವರಿಗೆ ಮಾಹಿತಿ ನೀಡಿದರು.

ನಿಲ್ದಾಣದಲ್ಲಿ‌ ವಿಮಾನ ಲ್ಯಾಂಡಿಗ್ ಹಾಗೂ ಟೇಕಾಫ್ ಗೆ ಗುರುತಿಸಲಾದ ಸುಮಾರು 1.75 ಕಿ.ಮೀ ಉದ್ದದ ರನ್ ವೇ ಕಾಮಗಾರಿ. ವಿಮಾನ ನಿಲ್ದಾಣ ಹಾಗೂ ಪ್ರಯಾಣಿಕರ ತಂಗುದಾಣ ಟರ್ಮಿನಲ್ ಕಟ್ಟಡ ನಿರ್ಮಾಣ ಸೇರಿದಂತೆ ಸಿಎಫ್‌ಆರ್ ಕಟ್ಟಡ ಸೇರಿ ಇನ್ನುಳಿದ ಎಲ್ಲಾ ಕಟ್ಟಡದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಆದಷ್ಟು ಬೇಗ ಕಾಮಗಾರಿ ಮುಗಿಸು ಭರವಸೆ ನೀಡಿದರು.

ಮಹಾನಗರ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ವೆಂಕಟೇಶ ಗಲಗ, ಭೂದಾಖಲೆಗಳ ನಿರ್ದೇಶಕರು, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ತಾಲೂಕ ಭೂದಾಖಲೆಗಳ ಸಹಾಯ ನಿರ್ದೇಶಕರಾದ ಬಾಳಪ್ಪ, ವಿಮಾನ ನಿಲ್ದಾಣದ ಎಂಜಿನಿಯರ್, ಕಾಂಗ್ರೆಸ್ ಮುಖಂಡರಾದ ಕೆ ಶಾಂತಪ್ಪ, ಅಮರೇಗೌಡ ಹಂಚಿನಾಳ, ರುದ್ರಪ್ಪ ಅಂಗಡಿ, ಸಣ್ಣ ನರಸರಡ್ಡಿ, ವಿನೋದ್ ಕುಮಾರ್ ಸೇರಿ ಸಂಬಂಧಿಸಿದ ಗುತ್ತಿಗೆದಾರರು, ಎಂಜಿನಿಯರ್‌ಗಳು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande