ಬಿಎಂಸಿಆರ್‌ಸಿ : ‘ಫಾರ್ಮಕೋವಿಜಿಲನ್ಸ್’ ವಾರಾಚರಣೆ
ಬಳ್ಳಾರಿ, 21 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಔಷಧಶಾಸ್ತ ವಿಭಾಗದಿಂದ ‘ಫಾರ್ಮಕೋವಿಜಿಲನ್ಸ್’ ವಾರಾಚರಣೆ ಅಂಗವಾಗಿ ಬಿಎಂಸಿಆರ್‌ಸಿ ಆವರಣದಲ್ಲಿ ಜಾಥ ನಡೆಯಿತು. ಜಾಥಾಗೆ ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ನಿದೇರ್ಶಕ ಡಾ.ಗ
ಬಿಎಂಸಿಆರ್‌ಸಿ: ‘ಫಾರ್ಮಕೋವಿಜಿಲನ್ಸ್’ ವಾರಾಚರಣೆ


ಬಳ್ಳಾರಿ, 21 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಔಷಧಶಾಸ್ತ ವಿಭಾಗದಿಂದ ‘ಫಾರ್ಮಕೋವಿಜಿಲನ್ಸ್’ ವಾರಾಚರಣೆ ಅಂಗವಾಗಿ ಬಿಎಂಸಿಆರ್‌ಸಿ ಆವರಣದಲ್ಲಿ ಜಾಥ ನಡೆಯಿತು.

ಜಾಥಾಗೆ ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ನಿದೇರ್ಶಕ ಡಾ.ಗಂಗಾಧರ ಗೌಡ ಅವರು ಚಾಲನೆ ನೀಡಿ, ಔಷದೋಪಚಾರದಿಂದ ಉಂಟಾಗುವ ಅಡ್ಡಪರಿಣಾಮಗಳ ಕುರಿತು ಸಹ ಸಾರ್ವಜನಿಕರು ಸೂಕ್ತ ಮಾರ್ಗದರ್ಶನ ಹೊಂದಬೇಕು ಎಂದು ಹೇಳಿದರು.

ಔಷಧಗಳು ದೇಹದೊಂದಿಗೆ ಹೇಗೆ ಸಂವಹನ ನಡೆಸುತ್ತವೆ, ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ಅವುಗಳ ಯಾವ ರೀತಿಯ ಪರಿಣಾಮ ಬೀರುತ್ತವೆ ಎನ್ನುವುದರ ಕುರಿತು ಸಂಶೋಧನಾರ್ಥಿಗಳು ಅಧ್ಯಯನ ಮಾಡಬೇಕು. ಔಷಧಶಾಸ್ತ ಶಾಖೆಯಾದ ಫಾರ್ಮಕೊಡೈನಾಮಿಕ್ಸ್ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು, ಔಷಧದ ಕ್ರಿಯೆಯನ್ನು ನಿಯಂತ್ರಿಸುವ ಮೂಲಭೂತ ತತ್ವಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಔಷಧಶಾಸ್ತ ವಿಭಾಗದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸ್ನಾತಕೋತ್ತರ ವಿದ್ಯಾರ್ಥಿಗಳು, ವೈದ್ಯಕೀಯ, ನರ್ಸಿಂಗ್ ಮತ್ತು ಅರೆವೈದ್ಯಕೀಯ ವಿದ್ಯಾರ್ಥಿಗಳು ಜನರಲ್ಲಿ ಅರಿವು ಮೂಡಿಸುವ ಮತ್ತು ಅದರ ನೋಂದಣಿಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಮೂಲಕ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಬಿಎಂಸಿಆರ್‌ಸಿಯ ಪ್ರಭಾರಿ ವೈದ್ಯಕೀಯ ಅಧೀಕ್ಷಕ ಡಾ.ಚಿದಂಬರ ಮೂರ್ತಿ, ಔಷಧಶಾಸ್ತç ವಿಭಾಗದ ಮುಖ್ಯಸ್ಥರಾದ ಡಾ.ವೈ.ವಿಶ್ವನಾಥ್, ಡಾ.ಮುರುಗೇಶ್ ಜೆ.ವಿ., ಡಾ.ವಿಶ್ವನಾಥ್.ಎಂ., ಡಾ.ಶಕುಂತಲಾ.ಬಿ., ಡಾ.ಜ್ಯೋತಿ ಡಿ.ಬಿ., ಡಾ.ಬಾಣಾಪೂರ್ ಅಂಬಿಕ, ಡಾ.ರಾಕೇಶ್ ಕುಮಾರ್.ಪಿ.ಕೆ ಸೇರಿದಂತೆ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ.ಅನಿಸುರ್ ರೆಹಮಾನ್.ಎಂ., ಡಾ.ಅಜಯ್ ಕುಮಾರ್ ರಾಥೋಡ್, ಡಾ.ದೀಪಕ್.ಎಸ್., ಡಾ.ಚೇತನ್ ಕುಲಕರ್ಣಿ, ಡಾ.ಲಿಲ್ಲಿ ನಿತ್ಯಾ ಪ್ರಿಯದರ್ಶಿನಿ ಹಾಗೂ ಇತರರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande