ಬಿಐಟಿಎಂ : ಆಲಿಯಾ ಸಮಾ ರಾಷ್ಟ್ರೀಯ ದಾಖಲೆ
ಬಳ್ಳಾರಿ, 21 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‍ಮೆಂಟ್‍ಯ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದ ಆಲಿಯಾ ಸಮಾ ಅವರು ವಿಶ್ವೇಶ್ವರಯ್ಯ ಟೆಕ್ನಾಲಜಿಕಲ್ ಇನ್ಸಿಟ್ಯೂಟ್ ಬಿಇ ಜೊತೆಗಿನ ಆನರ್ಸ್‍ನಲ್ಲಿ 73 ಕ್ರೆಡಿಟ್‍ಗಳನ್ನು ಪಡೆದು `ಇಂಡಿಯಾ
ಬಿಐಟಿಎಂ : ಆಲಿಯಾ ಸಮಾ ರಾಷ್ಟ್ರೀಯ ದಾಖಲೆ


ಬಿಐಟಿಎಂ : ಆಲಿಯಾ ಸಮಾ ರಾಷ್ಟ್ರೀಯ ದಾಖಲೆ


ಬಳ್ಳಾರಿ, 21 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‍ಮೆಂಟ್‍ಯ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದ ಆಲಿಯಾ ಸಮಾ ಅವರು ವಿಶ್ವೇಶ್ವರಯ್ಯ ಟೆಕ್ನಾಲಜಿಕಲ್ ಇನ್ಸಿಟ್ಯೂಟ್ ಬಿಇ ಜೊತೆಗಿನ ಆನರ್ಸ್‍ನಲ್ಲಿ 73 ಕ್ರೆಡಿಟ್‍ಗಳನ್ನು ಪಡೆದು `ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್'ಗೆ ದಾಖಲಾಗಿದ್ದಾರೆ.

ಬಿಐಟಿಎಂ ಕಾಲೇಜಿನ ನಿರ್ದೇಶಕರಾದ ವೈ.ಜೆ. ಪೃಥ್ವಿರಾಜ್ ಭೂಪಾಲ್, ಪ್ರಾಚಾರ್ಯರಾದ ಡಾ. ಯಡವಳ್ಳಿ ಬಸವರಾಜ್, ಇಇಇ ವಿಭಾಗದ ಮುಖ್ಯಸ್ಥ ಡಾ. ಶರಣರೆಡ್ಡಿ ಮತ್ತು ವಿದ್ಯಾರ್ಥಿನಿಯ ಪೋಷಕರು ಈ ಸಂದರ್ಭದಲ್ಲಿ ಪತ್ರಕರ್ತರಿಗೆ ಮಾಹಿತಿ ನೀಡಿ, ಆಲಿಯಾ ಸಮಾ ಅವರು `ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್'ನಲ್ಲಿ ತನ್ನ ಹೆಸರನ್ನು ದಾಖಲು ಮಾಡುವ ಮೂಲಕ ಶಿಕ್ಷಣ ಸಂಸ್ಥೆ ಹಾಗೂ ಪೋಷಕರ ಹೆಸರನ್ನು ಖ್ಯಾತಿಗೊಳಿಸಿದ್ದಾರೆ ಎಂದರು.

2024-25ರ ಶೈಕ್ಷಣಿಕ ವರ್ಷದ ಫಲಿತಾಂಶದಲ್ಲಿ ಆಲಿಯಾ ಸಮಾ ಅವರು ಪ್ರಥಮ ರ್ಯಾಂಕ್ ಪಡೆದು 160 ಕ್ರೆಡಿಟ್ ಪಡೆದಿದ್ದರು. ಆನರಸ್ಸ್‍ನಲ್ಲಿ 73 ಕ್ರೆಡಿಟ್‍ಗಳನ್ನು ಪಡೆದು, `ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್'ನಲ್ಲಿ ಈವರೆಗೆ ಇದ್ದಿದ್ದ 39 ಕ್ರೆಡಿಟ್‍ಗಳನ್ನು ದಾಟಿ ಹೊಸ ದಾಖಲೆಯನ್ನು ನಿರ್ಮಾಣ ಮಾಡಿದ್ದಾರೆ ಎಂದರು.

ಎಂಜಿನಿಯರಿಂಗ್ ವಿಭಾಗಗಳಲ್ಲಿ ಒಟ್ಟು 11 ವಿದ್ಯಾರ್ಥಿಗಳು ಆನರ್ಸ್‍ಗೆ ದಾಖಲಾಗಿದ್ದು, ಆಲಿಯಾ ಸಮಾ ದಾಖಲೆ ಮಹತ್ತರವಾಗಿದೆ. ಈ ಬಗ್ಗೆ ವಿಶ್ವೇಶ್ವರಯ್ಯ ಟೆಕ್ನಿಕಲ್ ಯೂನಿವರ್ಸಿಟಿಗೆ ಪತ್ರ ಬರೆದು ಘಟಿಕೋತ್ಸವದಲ್ಲಿ ಸನ್ಮಾನಿಸಿ - ಗೌರವಿಸಲು ಕೋರಲಾಗುತ್ತದೆ ಎಂದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬಳ್ಳಾರಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಶಕೀಬ್, ತುಂಗಭದ್ರಾ ಮಂಡಳಿಯ ಅಧೀಕ್ಷಕ ಅಭಿಯಂತರರಾದ ಹಸ್ಮಖಾತುನ್ ದಂಪತಿಯ ಪುತ್ರಿಯಾಗಿರುವ ಆಲಿಯಾ ಸಮಾ ಅವರು, ಪೋಷಕರು ಮತ್ತು ಬೋಧಕರ ಪ್ರೋತ್ಸಾಹ - ಮಾರ್ಗದರ್ಶನ ನನ್ನನ್ನು ವಿಶೇಷ ಸಾಧನೆಗೆ ಕರೆದೊಯ್ದಿದೆ ಎಂದು ಹೇಳಿದರು.

ವಿದ್ಯಾರ್ಥಿನಿಯ ಪೋಷಕರು, `ಆಲಿಯಾ ಸಮಾಳ ಸಾಧನೆಯಲ್ಲಿ ಅವಿರತ ಪ್ರಯತ್ನ, ನಿಶ್ಚಿತವಾದ ಗುರಿ, ಪರಿಶ್ರಮವಿದೆ. ಮಗಳ ಸಾಧನೆ ನಮಗೆ ಖುಷಿ ತಂದಿದೆ' ಎಂದು ಸಂತೋಷ ವ್ಯಕ್ತಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande