ಏಷ್ಯಾ ಕಪ್ ಸೂಪರ್ ಫೋರ್ : ಭಾರತ–ಪಾಕಿಸ್ತಾನ ಕಾಳಗ
ದುಬೈ, 21 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : 2025ರ ಏಷ್ಯಾ ಕಪ್‌ನಲ್ಲಿ ಭಾನುವಾರ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಭಾರತ–ಪಾಕಿಸ್ತಾನ ಸೆಣಸಾಟ ನಡೆಯಲಿದೆ. ಸೂಪರ್ ಫೋರ್ ಹಂತದ ಈ ಪಂದ್ಯವು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಟಾಸ್ ಪಂದ್ಯ ಆರಂಭಕ್ಕ
Cricket


ದುಬೈ, 21 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : 2025ರ ಏಷ್ಯಾ ಕಪ್‌ನಲ್ಲಿ ಭಾನುವಾರ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಭಾರತ–ಪಾಕಿಸ್ತಾನ ಸೆಣಸಾಟ ನಡೆಯಲಿದೆ. ಸೂಪರ್ ಫೋರ್ ಹಂತದ ಈ ಪಂದ್ಯವು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಟಾಸ್ ಪಂದ್ಯ ಆರಂಭಕ್ಕೂ ಅರ್ಧ ಗಂಟೆ ಮೊದಲು ನಡೆಯಲಿದೆ.

ಭಾರತ ತನ್ನ ಹಿಂದಿನ ಗುಂಪು ಹಂತದ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದು ಭರ್ಜರಿ ಪ್ರಾರಂಭ ಮಾಡಿತ್ತು. ಆದರೆ ಆ ಜಯದ ನಂತರದ ಹ್ಯಾಂಡ್‌ಶೇಕ್ (ಹಸ್ತಲಾಘವ) ವಿವಾದವು ಇಂದಿನ ಸೆಣಸಾಟಕ್ಕೂ ಹೆಚ್ಚುವರಿ ಕುತೂಹಲ ಮೂಡಿಸಿದೆ. ಈ ವಿವಾದಕ್ಕೆ ಇಂದು ಯಾವ ತಿರುವು ಸಿಗುತ್ತದೆ ಎಂಬುದರತ್ತ ಎಲ್ಲರ ದೃಷ್ಟಿಯಿದೆ.

ಭಾರತ–ಪಾಕಿಸ್ತಾನ ನಡುವಿನ ಪ್ರತಿಯೊಂದು ಪಂದ್ಯವು ಕೇವಲ ಕ್ರೀಡಾ ಸ್ಪರ್ಧೆಯಲ್ಲ, ಅದು ಭಾವೋದ್ರೇಕ, ಒತ್ತಡ ಮತ್ತು ರಾಜಕೀಯ–ಸಾಮಾಜಿಕ ಅಂಶಗಳ ಪ್ರತೀಕವಾಗಿಯೂ ಪರಿಣಮಿಸುತ್ತದೆ. ಇಂದಿನ ಪಂದ್ಯದಲ್ಲಿ ಕ್ರೀಡಾ ರೋಚಕತೆಗೆ ಜತೆಗೆ ಹಸ್ತಲಾಘವ ವಿವಾದದ ಪರಿಹಾರ ಕೂಡ ಕೇಂದ್ರ ಬಿಂದು ಆಗಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande