ನಾಳೆ ಜುಬೀನ್ ಗಾರ್ಗ್ ಪಾರ್ಥಿವ ಶರೀರ ಗುವಾಹಟಿಗೆ : ಬಿಸ್ವಾ ಶರ್ಮಾ
ಗುವಾಹಟಿ, 20 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ದುರಂತವಾಗಿ ಮೃತಪಟ್ಟ ಅಸ್ಸಾಂನ ಪ್ರಸಿದ್ಧ ಗಾಯಕ-ನಟ ಜುಬೀನ್ ಗಾರ್ಗ್ ಅವರ ಪಾರ್ಥಿವ ಶರೀರ ನಾಳೆ ಬೆಳಿಗ್ಗೆ 6 ರಿಂದ 7 ಗಂಟೆಯೊಳಗೆ ಗುವಾಹಟಿಗೆ ತಲುಪಲಿದೆ ಎಂದು ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ ತಿಳಿಸ
ನಾಳೆ ಜುಬೀನ್ ಗಾರ್ಗ್ ಪಾರ್ಥಿವ ಶರೀರ ಗುವಾಹಟಿಗೆ : ಬಿಸ್ವಾ ಶರ್ಮಾ


ಗುವಾಹಟಿ, 20 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ದುರಂತವಾಗಿ ಮೃತಪಟ್ಟ ಅಸ್ಸಾಂನ ಪ್ರಸಿದ್ಧ ಗಾಯಕ-ನಟ ಜುಬೀನ್ ಗಾರ್ಗ್ ಅವರ ಪಾರ್ಥಿವ ಶರೀರ ನಾಳೆ ಬೆಳಿಗ್ಗೆ 6 ರಿಂದ 7 ಗಂಟೆಯೊಳಗೆ ಗುವಾಹಟಿಗೆ ತಲುಪಲಿದೆ ಎಂದು ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

ಸಿಂಗಾಪುರದಲ್ಲಿ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ಜುಬೀನ್ ಗಾರ್ಗ್ ಅವರ ದೇಹವನ್ನು ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳ ಸಮ್ಮುಖದಲ್ಲಿ ಶೇಖರ್ ಜ್ಯೋತಿ ಗೋಸ್ವಾಮಿ, ಸಂದೀಪನ್ ಗಾರ್ಗ್ ಮತ್ತು ವ್ಯವಸ್ಥಾಪಕ ಸಿದ್ಧಾರ್ಥ್ ಶರ್ಮಾ ಅವರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಮೊದಲು ಜುಬೀನ್ ಅವರ ಪಾರ್ಥಿವ ಶರೀರವನ್ನು ಅವರ ನಿವಾಸಕ್ಕೆ ಕೊಂಡೊಯ್ಯಲಾಗುವುದು. ಅಲ್ಲಿ ಒಂದು ಗಂಟೆ ಇರಿಸಿದ ನಂತರ ಸರುಸಜೈ ಅಥ್ಲೆಟಿಕ್ ಕ್ರೀಡಾಂಗಣಕ್ಕೆ ತರಲಾಗುವುದು. ಒಳಾಂಗಣ ಕ್ರೀಡಾಂಗಣದ ಎದುರು ದೇಹವನ್ನು ಸಾರ್ವಜನಿಕ ಶ್ರದ್ಧಾಂಜಲಿಗಾಗಿ ಇಡಲಾಗುತ್ತದೆ. ಹೆಚ್ಚಿನವರು ಆಗಮಿಸಲು ಹೆಲಿಪ್ಯಾಡ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ” ಎಂದು ಹೇಳಿದರು.

ಶ್ರದ್ಧಾಂಜಲಿ ಸಮಾರಂಭವನ್ನು ಗುವಾಹಟಿ ನಗರಾದ್ಯಂತ ನೇರ ಪ್ರಸಾರ ಮಾಡಲಾಗುವುದು. ಭಾನುವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ ಮತ್ತು ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದ್ದು, ಅವುಗಳನ್ನು ಬೈಹತಾ ಮೂಲಕ ತಿರುಗಿಸಲಾಗುತ್ತದೆ. ಇದೇ ದಿನ ರಾಜ್ಯಾದ್ಯಂತ ಬಂದ್ ಘೋಷಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande