ನವದೆಹಲಿ, 20 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಗುಜರಾತ್ ಪ್ರವಾಸ ಕೈಗೊಂಡಿದ್ದು, ಬೆಳಿಗ್ಗೆ ಭಾವನಗರದಲ್ಲಿ “ಸಮುದ್ರ ಸೇ ಸಮೃದ್ಧಿ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ₹34,200 ಕೋಟಿಗೂ ಹೆಚ್ಚು ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಮಧ್ಯಾಹ್ನ 12:30ಕ್ಕೆ ಅವರು ಧೋಲೇರಾ ವಿಶೇಷ ಹೂಡಿಕೆ ಪ್ರದೇಶದ ವೈಮಾನಿಕ ಸಮೀಕ್ಷೆ ನಡೆಸಲಿದ್ದು, ಮಧ್ಯಾಹ್ನ 1:30ಕ್ಕೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ, ಅವರು ಲೋಥಾಲ್‌ನಲ್ಲಿರುವ ಸುಮಾರು ₹4,500 ಕೋಟಿಯ ರಾಷ್ಟ್ರೀಯ ಸಾಗರ ಪರಂಪರೆ ಸಂಕೀರ್ಣ ಪ್ರಗತಿ ಪರಿಶೀಲನೆ ಮಾಡಲಿದ್ದಾರೆ.
ಹಸಿರು ಕೈಗಾರಿಕೀಕರಣಕ್ಕೆ ಉತ್ತೇಜನ ನಿಟ್ಟಿನಲ್ಲಿ ಧೋಲೇರಾ ವಿಶೇಷ ಹೂಡಿಕೆ ಪ್ರದೇಶವನ್ನು ಹಸಿರು ಕೈಗಾರಿಕಾ ನಗರವಾಗಿ ರೂಪಿಸುವ ದೃಷ್ಟಿಯಿಂದ ಪ್ರಧಾನಿ ವೈಮಾನಿಕ ಸಮೀಕ್ಷೆ ನಡೆಸಲಿದ್ದು, ಲೋಥಾಲ್‌ನಲ್ಲಿರುವ ರಾಷ್ಟ್ರೀಯ ಸಾಗರ ಪರಂಪರೆ ಸಂಕೀರ್ಣವು ಪ್ರಾಚೀನ ಕಡಲ ಸಂಪ್ರದಾಯಗಳ ಸಂರಕ್ಷಣೆ, ಪ್ರವಾಸೋದ್ಯಮ ಹಾಗೂ ಸಂಶೋಧನೆಗೆ ಉತ್ತೇಜನ ನೀಡಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa