ವಿಶ್ವ ಶಾಂತಿ ಮತ್ತು ಸ್ಥಿರತೆಗಾಗಿ ಭಾರತ ಸ್ವಾವಲಂಬಿಯಾಗಬೇಕು : ಪ್ರಧಾನಿ ಮೋದಿ
ಭಾವನಗರ, 20 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಗುಜರಾತ್‌ನ ಭಾವನಗರದಲ್ಲಿ ನಡೆದ ಸಮುದ್ರದಿಂದ ಸಮೃದ್ಧಿಗೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ₹34,200 ಕೋಟಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಶಿಲಾನ್ಯಾಸ ನೆರವೇರಿಸಿದರು. ಸಂದರ್ಭದಲ್ಲಿ ಮಾತನಾಡಿ
Pm


ಭಾವನಗರ, 20 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಗುಜರಾತ್‌ನ ಭಾವನಗರದಲ್ಲಿ ನಡೆದ ಸಮುದ್ರದಿಂದ ಸಮೃದ್ಧಿಗೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ₹34,200 ಕೋಟಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಶಿಲಾನ್ಯಾಸ ನೆರವೇರಿಸಿದರು.

ಸಂದರ್ಭದಲ್ಲಿ ಮಾತನಾಡಿದ ಅವರು, 2047ರೊಳಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸಲು ಸ್ವಾವಲಂಬನೆ ಅವಶ್ಯಕ ಎಂದು ಒತ್ತಿ ಹೇಳಿದರು.

“ಚಿಪ್ ಆಗಲಿ, ಹಡಗು ಆಗಲಿ – ಭಾರತದಲ್ಲಿಯೇ ತಯಾರಿಸಬೇಕು. ವಿದೇಶಿ ಅವಲಂಬನೆ ನಮ್ಮ ದೊಡ್ಡ ಶತ್ರು ಎಂದು ಅವರು, ಭಾರತವು ಶತಮಾನಗಳಿಂದ ಸಮುದ್ರಶಕ್ತಿಯಾಗಿದೆ, ಆದರೆ ತಪ್ಪು ನೀತಿಗಳಿಂದ ಹಡಗು ನಿರ್ಮಾಣ ಉದ್ಯಮ ಕುಸಿಯಿತು ಎಂದು ಕಾಂಗ್ರೆಸ್‌ನ ಮೇಲೆ ಟೀಕೆ ನಡೆಸಿದರು.

ಪ್ರಸ್ತುತ ಕೇವಲ 5% ವ್ಯಾಪಾರವೇ ಭಾರತೀಯ ಹಡಗುಗಳಲ್ಲಿ ಸಾಗುತ್ತಿದ್ದು, ಉಳಿದ 95% ವಿದೇಶಿ ಹಡಗುಗಳ ಅವಲಂಬನೆಯಾಗಿದೆ ಎಂದರು. ಇದರಿಂದ ವರ್ಷಕ್ಕೆ $75 ಬಿಲಿಯನ್ (ಸುಮಾರು ₹6 ಲಕ್ಷ ಕೋಟಿ) ವಿದೇಶಗಳಿಗೆ ಪಾವತಿಸಲಾಗುತ್ತಿದೆ ಎಂದು ತಿಳಿಸಿದರು.

ನೂರು ಸಮಸ್ಯೆಗಳಿಗೆ ಒಂದೇ ಪರಿಹಾರ ಸ್ವಾವಲಂಬಿ ಭಾರತ ಎಂದು ಮೋದಿ ಕರೆ ನೀಡಿದ್ದು 21ನೇ ಶತಮಾನದ ಭಾರತ ಸಮುದ್ರವನ್ನು ಮಹಾ ಅವಕಾಶವೆಂದು ಕಂಡುಕೊಳ್ಳುತ್ತಿದ್ದು, ಬಂದರು ಆಧಾರಿತ ಅಭಿವೃದ್ಧಿಯೇ ಭವಿಷ್ಯದ ಸ್ವಾವಲಂಬನೆಯ ಆಧಾರವಾಗಲಿದೆ ಎಂದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande