ದುಬೈ, 20 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಏಷ್ಯಾ ಕಪ್ 2025ರ ಓಮನ್ ವಿರುದ್ಧದ ಪಂದ್ಯದ ವೇಳೆ ಭಾರತ ತಂಡದ ಎಡಗೈ ವೇಗದ ಬೌಲರ್ ಅರ್ಶ್‌ದೀಪ್ ಸಿಂಗ್ ಮಹತ್ವದ ಮೈಲಿಗಲ್ಲು ತಲುಪಿದರು. ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ವಿಕೆಟ್‌ಗಳನ್ನು ಕಬಳಿಸಿದ ಮೊದಲ ಭಾರತೀಯ ಬೌಲರ್ ಎಂಬ ದಾಖಲೆ ನಿರ್ಮಿಸಿದರು.
ಪಂದ್ಯದ ಕೊನೆಯ (20ನೇ) ಓವರ್‌ನಲ್ಲಿ ಓಮನ್‌ನ ವಿನಾಯಕ ಶುಕ್ಲಾ ಅವರನ್ನು ಔಟ್ ಮಾಡುವ ಮೂಲಕ ಅರ್ಶ್‌ದೀಪ್ ಈ ಐತಿಹಾಸಿಕ ಸಾಧನೆ ಸಾಧಿಸಿದರು.
2022ರಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಪರ ಟಿ20ಐ ಪ್ರವೇಶಿಸಿದ ಅರ್ಶ್‌ದೀಪ್, ತಮ್ಮ ಮೊದಲ ಪಂದ್ಯದಲ್ಲೇ 2/18 ವಿಕೆಟ್‌ಗಳನ್ನು ಪಡೆದಿದ್ದರು. ಇದುವರೆಗೆ 64 ಪಂದ್ಯಗಳಲ್ಲಿ 100 ವಿಕೆಟ್ ಗಳಿಸಿರುವ ಅವರು, ಯುನೈಟೆಡ್ ಸ್ಟೇಟ್ಸ್ ವಿರುದ್ಧದ 4/9 ಬೌಲಿಂಗ್ ಅವರ ಅತ್ಯುತ್ತಮ ಸಾಧನೆಯಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa