ಅಮೆರಿಕಾದ ಎಚ್೧ಬಿ ವೀಸಾ ಭಾರಿ ದುಬಾರಿ
ವಾಷಿಂಗ್ಟನ್, 20 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಅಮೆರಿಕಾದಲ್ಲಿ ಉದ್ಯೋಗ ವೀಸಾ (H-1B) ಪಡೆಯುವುದು ಈಗ ಅತ್ಯಂತ ದುಬಾರಿಯಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್ ಸಹಿ ಹಾಕಿದ ಹೊಸ ಕಾರ್ಯಕಾರಿ ಆದೇಶದಂತೆ, H-1B ವೀಸಾ ಅರ್ಜಿಯ ಶುಲ್ಕವನ್ನು ನೇರವಾಗಿ ಯುಎಸ್ $100,000 (ಸುಮಾರು ₹83 ಲಕ್ಷ
Visa


ವಾಷಿಂಗ್ಟನ್, 20 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಅಮೆರಿಕಾದಲ್ಲಿ ಉದ್ಯೋಗ ವೀಸಾ (H-1B) ಪಡೆಯುವುದು ಈಗ ಅತ್ಯಂತ ದುಬಾರಿಯಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್ ಸಹಿ ಹಾಕಿದ ಹೊಸ ಕಾರ್ಯಕಾರಿ ಆದೇಶದಂತೆ, H-1B ವೀಸಾ ಅರ್ಜಿಯ ಶುಲ್ಕವನ್ನು ನೇರವಾಗಿ ಯುಎಸ್ $100,000 (ಸುಮಾರು ₹83 ಲಕ್ಷ) ಕ್ಕೆ ಏರಿಸಲಾಗಿದೆ. ಈ ಕ್ರಮವು ಭಾರತೀಯ ಐಟಿ ವೃತ್ತಿಪರರು ಸೇರಿದಂತೆ ಅಮೆರಿಕಾದಲ್ಲಿ ಕೆಲಸ ಮಾಡುವ ಸಾವಿರಾರು ವಿದೇಶಿ ಕಾರ್ಮಿಕರ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.

ಇದಕ್ಕೂ ಮುನ್ನ, H-1B ವೀಸಾ ವೆಚ್ಚವು $1,700ರಿಂದ $4,500ರೊಳಗೆ ಇತ್ತು. ಸಾಮಾನ್ಯವಾಗಿ ಕಂಪನಿಗಳೇ ಈ ವೆಚ್ಚವನ್ನು ಹೊರುತ್ತಿದ್ದವು. ಆದರೆ ಈಗಿನ ಹೆಚ್ಚಳವು ಅಮೆಜಾನ್, ಐಬಿಎಂ, ಮೈಕ್ರೋಸಾಫ್ಟ್, ಗೂಗಲ್ ಮೊದಲಾದ ತಂತ್ರಜ್ಞಾನ ದೈತ್ಯ ಸಂಸ್ಥೆಗಳಿಗೂ ಭಾರೀ ಹೊರೆ ತರುತ್ತದೆ.

ಟ್ರಂಪ್ ಈ ನಿರ್ಧಾರವನ್ನು ಸಮರ್ಥಿಸಿಕೊಂಡು, “ಅಮೆರಿಕಾದಲ್ಲಿ ಹೆಚ್ಚು ಕೌಶಲ್ಯ ಹೊಂದಿದವರನ್ನು ಮಾತ್ರ ಕೆಲಸಕ್ಕೆ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಕಂಪನಿಗಳು ಇಂತಹ ಪ್ರತಿಭಾವಂತರನ್ನು ತರಲು ಹೆಚ್ಚುವರಿ ಹಣ ಪಾವತಿಸಲು ಸಿದ್ಧವಾಗಿವೆ” ಎಂದು ಹೇಳಿದ್ದಾರೆ.

ಈ ಕ್ರಮವು ಅಮೆರಿಕನ್ ಉದ್ಯೋಗಗಳನ್ನು ವಿದೇಶಗಳಿಗೆ ತಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಜೊತೆಗೆ, ಅಮೆರಿಕಾದಲ್ಲಿ ಅಧ್ಯಯನ ಮಾಡಲು ಬರುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಸಂಖ್ಯೆಯೂ ಕುಸಿಯುವ ಭೀತಿ ಎದುರಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande