ತಾವರಗೇರ, 02 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ನಾದಯೋಗಿ ಗುರು ಪುಟ್ಟರಾಜ ಸಂಗೀತ ಮತ್ತು ಲಲಿತ ಕಲಾ ಸಂಸ್ಥೆಯ `ಸಂಗೀತ ನಿನಾದ’ ಕಾರ್ಯಕ್ರಮವು ತಾವರಗೇರಿಯ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ಆರ್.ಜಿ. ಅಂಬಿಗರ ಅವರು ಕಾರ್ಯಕ್ರಮ ಉದ್ಘಾಟಿಸಿ, ಆಧುನಿಕ ಕಾಲ ಘಟ್ಟದಲ್ಲಿ ಯುವಪೀಳಿಗೆಗೆ ಸಂಸ್ಕøತಿಯ ಅರಿವು ಬೇಕಾಗಿದೆ. ಈ ನಿಟ್ಟಿನಲ್ಲಿ ಕೆಲ ಸಂಘ ಸಂಸ್ಥೆಗಳು ಸಂಸ್ಕøತಿ, ಸಂಸ್ಕಾರ, ಸಂಗೀತ, ಸಾಂಸ್ಕøತಿಕ ಚಟುವಟಿಕೆಗಳತ್ತ ಗಮನ ನೀಡುತ್ತಿರುವುದು ಸ್ವಾಗತಾರ್ಹ ಎಂದರು.
ಪ್ರಭಾರಿ ಪ್ರಾಚಾರ್ಯರಾದ ಕೆ.ಎಸ್. ಹುಲಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಆತಿಥಿಗಳಾಗಿ ಶರೀಫಸಾಬ್ ಭಾವಿಕಟ್ಟಿ, ಪರಶುರಾಮ, ರಾಮಚಂದ್ರಪ್ಪ ಉಪ್ಪಾರ ಅವರು ವೇದಿಕೆಯಲ್ಲಿದ್ದರು.
ಸಂಜನ ಬೆಲ್ಲದ ಅವರು ವಚನ ಸಂಗೀತ, ಸಂಗೀತ ಶರಣಪ್ಪ ಅವರಿಂದ ಜನಪದ ಸಂಗೀತ, ಪ್ರಭು ದೊಡ್ಡಮನಿ ಅವರಿಂದ ತಬಲಾ ಸೋಲೋ, ಶ್ಯಾಮಲಾ ದೊಡ್ಡಮನಿ ಅವರಿಂದ ಸುಗಮ ಸಂಗೀತ, ಸಾವಿತ್ರಿ ಅವರಿಂದ ಭಾವಗೀತೆಗಳು ಮೂಡಿ ಬಂದವು. ವಾದ್ಯ ವೃಂದದ ಕೀಬೋರ್ಡನಲ್ಲಿ ರಾಮಚಂದ್ರಪ್ಪ ಉಪ್ಪಾರ, ಕೊಳಲಿನಲ್ಲಿ ನಾಗರಾಜ ಶ್ಯಾವಿ, ತಬಲದಲ್ಲಿ ಮಾರುತಿ ದೊಡ್ಡಮನಿ, ರಿದಂ ಪ್ಯಾಡ್ನಲ್ಲಿ ಸಂಜನ ಬೆಲ್ಲದ ಅವರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್