ಹುಬ್ಬಳ್ಳಿ, 03 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ನೈಋತ್ಯ ರೈಲ್ವೆಯು ನವೆಂಬರ್ 2, 2025ರಿಂದ ರೈಲು ಸಂಖ್ಯೆ 16221 ತಾಳಗುಪ್ಪ–ಮೈಸೂರು ಕುವೆಂಪು ಡೈಲಿ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ.
ಹೊಸ ವೇಳಾಪಟ್ಟಿಯ ಪ್ರಕಾರ ಈ ರೈಲು ತಾಳಗುಪ್ಪದಿಂದ ಬೆಳಿಗ್ಗೆ 5.50ಕ್ಕೆ ಹೊರಡಲಿದೆ. ಪ್ರಸ್ತುತ 6.15ಕ್ಕೆ ಹೊರಡುವ ಸಮಯಕ್ಕಿಂತ 25 ನಿಮಿಷ ಮುಂಚಿತವಾಗಿ ಪ್ರಯಾಣ ಪ್ರಾರಂಭವಾಗಲಿದೆ.
ಇದರ ಜೊತೆಗೆ, ರೈಲು ಸಂಖ್ಯೆ 16227 ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್ ರೈಲು ತಾಳಗುಪ್ಪ ತಲುಪುವ ವೇಳೆಯಲ್ಲೂ ಬದಲಾವಣೆ ಆಗಿದೆ. ಪ್ರಸ್ತುತ ಬೆಳಿಗ್ಗೆ 7.15ರ ಬದಲು ಈ ರೈಲು ಬೆಳಿಗ್ಗೆ 7.50ಕ್ಕೆ ತಲುಪಲಿದೆ.
ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಕುವೆಂಪು ಎಕ್ಸ್‌ಪ್ರೆಸ್ ಸಾಗರ ಜಂಬಗಾರು, ಶಿವಮೊಗ್ಗ, ಭದ್ರಾವತಿ, ತಾರೀಕೆರೆ, ಬೀರೂರು, ಕಡೂರು, ಅರಸೀಕೆರೆ, ಹಾಸನ, ಹೊಳೆನರಸೀಪುರ, ಕೃಷ್ಣರಾಜನಗರ ಸೇರಿದಂತೆ ನಿಲ್ದಾಣಗಳಲ್ಲಿ ನಿಗದಿತ ಸಮಯಕ್ಕೆ ನಿಲ್ಲಲಿದ್ದು, ಮೈಸೂರು ಜಂಕ್ಷನ್‌ಗೆ ಮಧ್ಯಾಹ್ನ 3.30ಕ್ಕೆ ತಲುಪಲಿದೆ.
ಪ್ರಯಾಣಿಕರು ತಮ್ಮ ಪ್ರಯಾಣವನ್ನು ಹೊಸ ವೇಳಾಪಟ್ಟಿಯ ಪ್ರಕಾರ ಹೊಂದಿಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa