ಜಮಖಂಡಿ ಉಪವಿಭಾಗಾಧಿಕಾರಿಗಳ ಸರ್ಕಾರಿ ವಾಹನ ಜಪ್ತಿ
ವಿಜಯಪುರ, 02 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಭೂಸ್ವಾಧೀನದ ಪರಿಹಾರದ ಹಣ ನೀಡದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಉಪವಿಭಾಗಾಧಿಕಾರಿಗಳ ಸರ್ಕಾರಿ ವಾಹನ ಜಪ್ತಿಗೈದಿರುವ ಘಟನೆ ನಡೆದಿದೆ. ನ್ಯಾಯಾಲಯದ ಆದೇಶದ ಮೇರೆಗೆ ಎಸಿ ಶ್ವೇತಾ ಬೀಡಿಕರ ಸರ್ಕಾರಿ ವಾಹನ ಜಪ್ತಿ ಮಾಡಲಾಗಿದೆ. ಇನ್ನು ಕೆರೆ
ಜಪ್ತಿ


ವಿಜಯಪುರ, 02 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಭೂಸ್ವಾಧೀನದ ಪರಿಹಾರದ ಹಣ ನೀಡದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಉಪವಿಭಾಗಾಧಿಕಾರಿಗಳ ಸರ್ಕಾರಿ ವಾಹನ ಜಪ್ತಿಗೈದಿರುವ ಘಟನೆ ನಡೆದಿದೆ.

ನ್ಯಾಯಾಲಯದ ಆದೇಶದ ಮೇರೆಗೆ ಎಸಿ ಶ್ವೇತಾ ಬೀಡಿಕರ ಸರ್ಕಾರಿ ವಾಹನ ಜಪ್ತಿ ಮಾಡಲಾಗಿದೆ. ಇನ್ನು ಕೆರೆ ನಿರ್ಮಾಣಕ್ಕೆ ಸರ್ಕಾರ ಭೂಸ್ವಾಧೀನ ಮಾಡಿಕೊಂಡಿತ್ತು.‌

4 ಎಕರೆ 28 ಗುಂಟೆ ಜಮೀನು ಭೂಸ್ವಾಧೀನಪಡಿಸಿಕೊಂಡು ಪರಿಹಾರ ನೀಡಿರಲಿಲ್ಲ.

ಮುಧೋಳ ತಾಲೂಕಿನ ಬೆಳಗಲಿ ಗ್ರಾಮದ ಬಾಳಪ್ಪ ನಿಂಗಪ್ಪ ಕಪ್ಪಲಗುದ್ದಿ, ದರೆಪ್ಪ ಮುತ್ತಪ್ಪ ಕಪ್ಪಲಗುದ್ದಿ ಎಂಬ ರೈತರ ಜಮೀನು ಭೂಸ್ವಾಧೀನ ಮಾಡಲಾಗಿತ್ತು.

ಕಚೇರಿಗೆ ಅಲೆದು ಸುಸ್ತಾಗಿ ರೈತರು ನ್ಯಾಯಾಲಯದ ಮೊರೆ ‌ಹೋಗಿದ್ದರು.‌ 43,33,306 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಜಮಖಂಡಿ ಹಿರಿಯ ದಿವಾಣಿ ನ್ಯಾಯಾಲಯ ಆದೇಶ ಮಾಡಿತ್ತು.

ನ್ಯಾಯಾಲಯದ ಆದೇಶದ ಬಳಿಕವೂ ಪರಿಹಾರ ನೀಡದ ಅಧಿಕಾರಿಗಳು, ಹೀಗಾಗಿ ಅಧಿಕಾರಿಗಳ ವಾಹನ, ಕಚೇರಿ ಪೀಠೋಪಕರಣ ಸೇರಿದಂತೆ ಚರಾಸ್ತಿ ಮುಟ್ಟುಗೋಲಿಗೆ ಕೋರ್ಟ್ ಆದೇಶ ಮಾಡಿತ್ತು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande