ನಿರೀಕ್ಷೆ ಮೀರಿ ಅಬಕಾರಿ ಆದಾಯ : ಸಚಿವ ಆರ್.ಬಿ. ತಿಮ್ಮಾಪುರ್
ಬೆಂಗಳೂರು, 02 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಅಬಕಾರಿ ಇಲಾಖೆಯ ಆದಾಯವು ಈ ವರ್ಷದ ಎರಡು ತ್ರೈಮಾಸಿಕದಲ್ಲೇ ನಿರೀಕ್ಷೆ ಮೀರಿ ಸಂಗ್ರಹವಾಗಿದ್ದು, ಮುಂದಿನ ದಿನಗಳಲ್ಲಿ ಪ್ರೀಮಿಯಂ ಬ್ರ್ಯಾಂಡ್ ಮದ್ಯದ ದರ ಇಳಿಕೆ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್ ತಿಳಿಸಿದ್ದಾರೆ
Timmapur


ಬೆಂಗಳೂರು, 02 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಅಬಕಾರಿ ಇಲಾಖೆಯ ಆದಾಯವು ಈ ವರ್ಷದ ಎರಡು ತ್ರೈಮಾಸಿಕದಲ್ಲೇ ನಿರೀಕ್ಷೆ ಮೀರಿ ಸಂಗ್ರಹವಾಗಿದ್ದು, ಮುಂದಿನ ದಿನಗಳಲ್ಲಿ ಪ್ರೀಮಿಯಂ ಬ್ರ್ಯಾಂಡ್ ಮದ್ಯದ ದರ ಇಳಿಕೆ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್ ತಿಳಿಸಿದ್ದಾರೆ.

ವಿಧಾನ ಸೌಧದಲ್ಲಿ ಅಬಕಾರಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ತ್ರೈಮಾಸಿಕಗಳಲ್ಲಿ ನಮ್ಮ ನಿರೀಕ್ಷೆ 16,290 ಕೋಟಿ ರೂ. ಆಗಿದ್ದರೆ, 16,358.76 ಕೋಟಿ ರೂ. ಸಂಗ್ರಹವಾಗಿದೆ. ನಿರೀಕ್ಷೆಗೂ ಮೀರಿ ಶೇಕಡಾ 142 ಆದಾಯ ಬಂದಿದೆ. ಇದು ಇಲಾಖೆಯ ಯಶಸ್ಸಿನ ಸೂಚನೆ ಎಂದರು.

ಲೈಸೆನ್ಸ್ ನವೀಕರಣ ಅವಧಿ 1 ವರ್ಷದಿಂದ 5 ವರ್ಷಕ್ಕೆ ವಿಸ್ತರಣೆ, CL-7 ಪರ್ಮಿಷನ್ ಪ್ರಕ್ರಿಯೆ ಸರಳೀಕರಣ, CL-2 ಮತ್ತು CL-9 ಅನುಮತಿಗಳಿಗೆ ಹರಾಜು ವ್ಯವಸ್ಥೆ ಹಾಗೂ ಆನ್‌ಲೈನ್ ಅರ್ಜಿ ವ್ಯವಸ್ಥೆ ಜಾರಿಗೊಳಿಸಿರುವುದಾಗಿ ವಿವರಿಸಿದರು.

ನಕಲಿ ಮದ್ಯ, ಗೋವಾ ಮದ್ಯ ಮಾರಾಟ ಹಾಗೂ ಡ್ರಗ್ಸ್‌–ಗಾಂಜಾ ಹಾವಳಿಯನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ, ಹೊಸ ಎಂಎಸ್‌ಐಎಲ್ ಮಳಿಗೆಗಳನ್ನು ತೆರೆಯುವುದಿಲ್ಲ, ಇರುವ ಮಳಿಗೆಗಳನ್ನು ಮಾತ್ರ ಹರಾಜು ಮೂಲಕ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande