ಕೊಪ್ಪಳ ಜಿಲ್ಲೆಯಲ್ಲಿ 92 ಲಕ್ಷ ಪುಟಗಳ ಡಿಜಿಟಲೀಕರಣ ಪೂರ್ಣ
ಕೊಪ್ಪಳ, 02 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಕಂದಾಯ ಇಲಾಖೆಯ ಹಳೆಯ ದಾಖಲೆಗಳನ್ನು ಸುರಕ್ಷಿತಗೊಳಿಸಲು ಹಾಗೂ ಸುಳ್ಳು ದಾಖಲೆ ಸೃಷ್ಠಿಸುವುದನ್ನು ತಡೆಗಟ್ಟಲು ಸರ್ಕಾರ ಜಾರಿಗೊಳಿಸಿರುವ ಭೂ ಸುರಕ್ಷಾ ಯೋಜನೆಯಡಿ ಜಿಲ್ಲೆಯಲ್ಲಿ ಈವರೆಗೂ ಒಟ್ಟು 92,50,801 ಪುಟಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದು ಜಿಲ
ಕೊಪ್ಪಳ ಜಿಲ್ಲೆಯಲ್ಲಿ 92 ಲಕ್ಷ ಪುಟಗಳ ಡಿಜಿಟಲೀಕರಣ ಪೂರ್ಣ


ಕೊಪ್ಪಳ, 02 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕಂದಾಯ ಇಲಾಖೆಯ ಹಳೆಯ ದಾಖಲೆಗಳನ್ನು ಸುರಕ್ಷಿತಗೊಳಿಸಲು ಹಾಗೂ ಸುಳ್ಳು ದಾಖಲೆ ಸೃಷ್ಠಿಸುವುದನ್ನು ತಡೆಗಟ್ಟಲು ಸರ್ಕಾರ ಜಾರಿಗೊಳಿಸಿರುವ ಭೂ ಸುರಕ್ಷಾ ಯೋಜನೆಯಡಿ ಜಿಲ್ಲೆಯಲ್ಲಿ ಈವರೆಗೂ ಒಟ್ಟು 92,50,801 ಪುಟಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ತಿಳಿಸಿದ್ದಾರೆ.

ಕೊಪ್ಪಳ ತಾಲ್ಲೂಕಿನಲ್ಲಿ ಒಟ್ಟು 37,994 ಕಡತಗಳಲ್ಲಿ(ಫೈಲ್) 24,110 ಕಡತಗಳ 14,76,190 ಪುಟಗಳನ್ನು ಹಾಗೂ ಒಟ್ಟು 11,684 ವಹಿಗಳಲ್ಲಿ(ರಿಜಿಸ್ಟರ್) 3,577 ವಹಿಗಳ 1,17,925 ಪುಟಗಳು ಸೇರಿದಂತೆ ಒಟ್ಟು 15,94,115 ಪುಟಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಕುಷ್ಟಗಿ ತಾಲ್ಲೂಕಿನಲ್ಲಿ ಒಟ್ಟು 62,300 ಕಡತಗಳಲ್ಲಿ 57,405 ಕಡತಗಳ 18,30,229 ಪುಟಗಳನ್ನು ಹಾಗೂ ಒಟ್ಟು 5,321 ವಹಿಗಳಲ್ಲಿ 852 ವಹಿಗಳ 73,769 ಪುಟಗಳು ಸೇರಿದಂತೆ ಒಟ್ಟು 19,03,998 ಪುಟಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಕುಕನೂರು ತಾಲ್ಲೂಕಿನಲ್ಲಿ ಒಟ್ಟು 35,000 ಕಡತಗಳಲ್ಲಿ 28,394 ಕಡತಗಳ 6,56,693 ಪುಟಗಳನ್ನು ಹಾಗೂ ಒಟ್ಟು 1,500 ವಹಿಗಳಲ್ಲಿ 1,843 ವಹಿಗಳ 7,99,881 ಪುಟಗಳು ಸೇರಿದಂತೆ ಒಟ್ಟು 14,56,574 ಪುಟಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ.

ಕನಕಗಿರಿ ತಾಲ್ಲೂಕಿನಲ್ಲಿ ಒಟ್ಟು 24,300 ಕಡತಗಳಲ್ಲಿ 21,757 ಕಡತಗಳ 11,55,126 ಪುಟಗಳನ್ನು ಹಾಗೂ ಒಟ್ಟು 2,560 ವಹಿಗಳಲ್ಲಿ 2,451 ವಹಿಗಳ 4,46,855 ಪುಟಗಳು ಸೇರಿದಂತೆ ಒಟ್ಟು 16,01,981 ಪುಟಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಯಲಬುರ್ಗಾ ತಾಲ್ಲೂಕಿನಲ್ಲಿ ಒಟ್ಟು 54,300 ಕಡತಗಳಲ್ಲಿ 36,901 ಕಡತಗಳ 9,61,530 ಪುಟಗಳನ್ನು ಹಾಗೂ ಒಟ್ಟು 1,949 ವಹಿಗಳಲ್ಲಿ 1,707 ವಹಿಗಳ 6,35,917 ಪುಟಗಳು ಸೇರಿದಂತೆ ಒಟ್ಟು 15,97,447 ಪುಟಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಗಂಗಾವತಿ ತಾಲ್ಲೂಕಿನಲ್ಲಿ ಒಟ್ಟು 34,572 ಕಡತಗಳಲ್ಲಿ 19,079 ಕಡತಗಳ 9,63,463 ಪುಟಗಳನ್ನು ಹಾಗೂ ಒಟ್ಟು 3,083 ವಹಿಗಳಲ್ಲಿ 2,868 ವಹಿಗಳ 5,66,747 ಪುಟಗಳು ಸೇರಿದಂತೆ ಒಟ್ಟು 15,30,210 ಪುಟಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಒಟ್ಟು 1,86,116 ಕಡತಗಳಲ್ಲಿ 1,30,241 ಕಡತಗಳ 52,13,002 ಪುಟಗಳು ಹಾಗೂ ಒಟ್ಟು 20,776 ವಹಿಗಳಲ್ಲಿ 12,446 ವಹಿಗಳ 25,67,325 ಪುಟಗಳು ಸೇರಿದಂತೆ ಒಟ್ಟು 77,80,327 ಪುಟಗಳ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಇನ್ನೂ ಬಾಕಿ ಉಳಿದ ಕಡತಗಳು ಹಾಗೂ ವಹಿಗಳ ಡಿಜಿಟಲೀಕರಣ ಕಾರ್ಯವು ಪ್ರಗತಿಯಲ್ಲಿದೆ.

ಜಿಲ್ಲೆಯ ಕಾರಟಗಿಯನ್ನು ಸರ್ಕಾರವು 2024 ರಲ್ಲಿ ತಾಲ್ಲೂಕನ್ನಾಗಿ ಪರಿಗಣಿಸಿ ಡಿಜಿಟಲೀಕರಣ ಮಾಡುವ ಕಾರ್ಯಕ್ಕೆ ಆದೇಶ ನೀಡಿತ್ತು. ಅದರಂತೆ ರಾಜ್ಯದಲ್ಲಿ ಮೊದಲನೆಯದಾಗಿ ಕಾರಟಗಿ ತಾಲ್ಲೂಕಿನ ಎಲ್ಲಾ ದಾಖಲೆಗಳ ಡಿಜಿಟಲೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿರುತ್ತದೆ. ಕಾರಟಗಿ ತಾಲ್ಲೂಕಿನ ಒಟ್ಟು 42,688 ಕಡತಗಳ 7,95,700 ಪುಟಗಳು ಹಾಗೂ ಒಟ್ಟು 4,361 ವಹಿಗಳ 6,74,774 ಪುಟಗಳು ಸೇರಿದಂತೆ ಒಟ್ಟು 14,70,474 ಪುಟಗಳ ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡಿದೆ. ಜಿಲ್ಲೆಯಾದ್ಯಂತ ಈವರೆಗೆ ಎಲ್ಲ ತಾಲ್ಲೂಕುಗಳ ಒಟ್ಟು 92,50,801 ಪುಟಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ.

ಯೋಜನೆಯ ಭಾಗವಾಗಿ ಉಳಿದ ತಾಲ್ಲೂಕುಗಳಿಗೆ ಜನವರಿ 2025 ರಿಂದ ಆ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಭೂ ಸುರಕ್ಷಾ ಯೋಜನೆಯ ಡಿಜಿಟಲೀಕರಣ ಕಾರ್ಯವನ್ನು ಉದ್ಘಾಟಿಸಲಾಗಿದ್ದು, ಡಿಜಿಟಲೀಕರಣಗೊಂಡ ಕಡತಗಳು ಮತ್ತು ವಹಿಗಳಲ್ಲಿನ ದಾಖಲೆಗಳ ನಕಲುಗಳನ್ನು 2025 ರ ಜುಲೈ 01 ರಿಂದ ಕಡ್ಡಾಯವಾಗಿ ಡಿಜಿಟಲ್ ಮಾದರಿಯಲ್ಲಿ ತಾಲ್ಲೂಕುವಾರು ತಹಶೀಲ್ದಾರ ಕಚೇರಿಯಲ್ಲಿ ಭೂ ಸುರಕ್ಷಾ ಯೋಜನೆಯ ರೆಕಾರ್ಡ್ ರೂಂ ನ ತಂತ್ರಾ0ಶದ ಮೂಲಕವೇ ಡಿಜಿಟಲ್ ದಾಖಲೆಯನ್ನು ಸಾರ್ವಜನಿಕರಿಗೆ ನೀಡುವ ವ್ಯವಸ್ಥೆಯನ್ನು ಪ್ರಾರಂಭಿಸುವ0ತೆ ಕಂದಾಯ ಆಯುಕ್ತಾಲಯ ನಿರ್ದೇಶನ ನೀಡಿ ಸುತ್ತೋಲೆ ಹೊರಡಿಸಿದೆ.

ಅದರಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಡಿಜಿಟಲ್ ದಾಖಲೆಯನ್ನು ನೀಡುವ ಕಾರ್ಯವನ್ನು ಪ್ರಾರಂಭಿಸಿದ್ದು, ಈವರೆಗೆ ಡಿಜಿಟಲೀಕರಣಗೊಂಡ ಕಡತಗಳು ಮತ್ತು ವಹಿಗಳಲ್ಲಿನ ದಾಖಲೆಗಳ ನಕಲುಗಳನ್ನು ಸಾರ್ವಜನಿಕರು ಅಭಿಲೇಖಾಲಯದ https://recordroom.karnataka.gov.in/ERECORDROOM/ ತಂತ್ರಾAಶದ ಮೂಲಕ ನಿಗದಿತ ಶುಲ್ಕ ಪಾವತಿಸಿ ದಾಖಲೆಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿರುತ್ತದೆ. ಇದರೊಂದಿಗೆ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಪಡೆಯಬಹುದಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande