ನಾಯಕನಹಟ್ಟಿ : ಬಳ್ಳಾರಿಯ ಕಲಾವಿದರಿಂದ `ದನ ಕಾಯೋರ ದೊಡ್ಡಾಟ' ಪ್ರದರ್ಶನ
ನಾಯಕನಹಟ್ಟಿ,02 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಸೂಫಿ ಸಂತರ ಭಾವೈಕ್ಯತೆಯ ನಾಡು ನಾಯಕನಹಟ್ಟಿ ಗ್ರಾಮದ ಬಿಳೆಕಲ್ಲು ಗೆಳೆಯರ ಬಳಗದ ಶಕ್ತಿ ಗಣಪತಿ ಮಹೋತ್ಸವದಲ್ಲಿ ಬಳ್ಳಾರಿಯ ಮಹಾ ದೇವಾ ತಾತ ಕಲಾ ಸಂಘ (ರಿ) ಹಂದ್ಯಾಳುನ ಕಲಾವಿದರು `ದಿವಂಗತ ಶಂಕರ ನಾಯ್ಡು'' ಅವರು ರಚಿಸಿರುವ `ದನ ಕಾಯೋರ ದೊಡ್ಡಾಟ'
ನಾಯಕನಹಟ್ಟಿ : ಬಳ್ಳಾರಿಯ ಕಲಾವಿದರಿಂದ `ದನ ಕಾಯೋರ ದೊಡ್ಡಾಟ' ಪ್ರದರ್ಶನ

ನಾಯಕನಹಟ್ಟಿ : ಬಳ್ಳಾರಿಯ ಕಲಾವಿದರಿಂದ `ದನ ಕಾಯೋರ ದೊಡ್ಡಾಟ' ಪ್ರದರ್ಶನ

ನಾಯಕನಹಟ್ಟಿ : ಬಳ್ಳಾರಿಯ ಕಲಾವಿದರಿಂದ `ದನ ಕಾಯೋರ ದೊಡ್ಡಾಟ' ಪ್ರದರ್ಶನ

ನಾಯಕನಹಟ್ಟಿ : ಬಳ್ಳಾರಿಯ ಕಲಾವಿದರಿಂದ `ದನ ಕಾಯೋರ ದೊಡ್ಡಾಟ' ಪ್ರದರ್ಶನ

ನಾಯಕನಹಟ್ಟಿ : ಬಳ್ಳಾರಿಯ ಕಲಾವಿದರಿಂದ `ದನ ಕಾಯೋರ ದೊಡ್ಡಾಟ' ಪ್ರದರ್ಶನ

ನಾಯಕನಹಟ್ಟಿ,02 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಸೂಫಿ ಸಂತರ ಭಾವೈಕ್ಯತೆಯ ನಾಡು ನಾಯಕನಹಟ್ಟಿ ಗ್ರಾಮದ ಬಿಳೆಕಲ್ಲು ಗೆಳೆಯರ ಬಳಗದ ಶಕ್ತಿ ಗಣಪತಿ ಮಹೋತ್ಸವದಲ್ಲಿ ಬಳ್ಳಾರಿಯ ಮಹಾ ದೇವಾ ತಾತ ಕಲಾ ಸಂಘ (ರಿ) ಹಂದ್ಯಾಳುನ ಕಲಾವಿದರು `ದಿವಂಗತ ಶಂಕರ ನಾಯ್ಡು' ಅವರು ರಚಿಸಿರುವ `ದನ ಕಾಯೋರ ದೊಡ್ಡಾಟ' ಹಾಸ್ಯ ನಾಟಕವನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ.

ಅಕ್ಷರ ಜ್ಞಾನದ ಮಹತ್ವವನ್ನು ಮನರಂಜನಾತ್ಮಕ ರೀತಿಯಲ್ಲಿ ತಲುಪಿಸಿದ ಈ ನಾಟಕ, ಸಾಕ್ಷರತಾ ಸಂದೇಶವನ್ನು ಜನಮನದಲ್ಲಿ ಬಿತ್ತಿತು.

ಪಾತ್ರ ನಿರ್ವಹಣೆ: ಸಾರಥಿಯಾಗಿ ಪುರುಷೋತ್ತಮ ಹಂದ್ಯಾಳು, ಗಣಪತಿಯಾಗಿ ದಾನಯ್ಯಸ್ವಾಮಿ, ದುರ್ಯೋಧನನಾಗಿ ಎಚ್.ಎಂ. ಅಂಬರೀಶ್ ಹಚ್ಚೊಳ್ಳಿ, ದುಶ್ಯಾಸನನಾಗಿ ಪಾರ್ವತೀಶ ಗೆಣಿಕೆಹಾಳ್, ದ್ರೌಪದಿ ಮತ್ತು ನೃತ್ಯಗಾರ್ತಿಯಾಗಿ ಮೌನೇಶ್ ಕಲ್ಲಳ್ಳಿ, ನಕುಲ-ಸಹದೇವ ಆಗಿ ಗುರು ಮೋಕ ಮತ್ತು ಲಿಂಗಪ್ಪ ಹಂದ್ಯಾಳು, ಕೃಷ್ಣನಾಗಿ ಕುಮಾರಗೌಡ ಅಮರಾಪುರ ಹಾಗೂ ಕಥಾ ಸಂಚಾಲಕನಾಗಿ ಸುಂಕಣ್ಣ ಹೊಸಯರಗುಡಿ ಮತ್ತು

ರುದ್ರಮುನಿ ಸ್ವಾಮಿ ಅವರು ಪ್ರೇಕ್ಷಕರನ್ನು ರಂಜಿಸಿದರು.

ಎರ್ರಿಸ್ವಾಮಿ ಆಚಾರ್ ಹಾರ್ಮೋನಿಯಂ, ಗಾದಿಲಿಂಗಪ್ಪ ಅಮರಾಪುರ ತಬಲಾ ಸಾಥ್ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

 rajesh pande