ಟಿಕ್‌ಟಾಕ್ ಕುರಿತಾಗಿ ಟ್ರಂಪ್–ಕ್ಸಿ ಜಿನ್‌ಪಿಂಗ್ ಮಾತುಕತೆ
ಲಂಡನ್, 19 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಬ್ರಿಟನ್ ಭೇಟಿಯಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಲಿದ್ದಾರೆ. ಈ ಮಾತುಕತೆಯಲ್ಲಿ ಪ್ರಮುಖವಾಗಿ ಟಿಕ್‌ಟಾಕ್ ಒಪ್ಪಂದ ಕುರಿತು ಚರ್ಚೆ ನಡೆಯಲಿದೆ. ಜೂನ್ ನಂತರ
Talk


ಲಂಡನ್, 19 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಬ್ರಿಟನ್ ಭೇಟಿಯಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಲಿದ್ದಾರೆ. ಈ ಮಾತುಕತೆಯಲ್ಲಿ ಪ್ರಮುಖವಾಗಿ ಟಿಕ್‌ಟಾಕ್ ಒಪ್ಪಂದ ಕುರಿತು ಚರ್ಚೆ ನಡೆಯಲಿದೆ.

ಜೂನ್ ನಂತರ ಉಭಯ ನಾಯಕರ ನಡುವೆ ನಡೆಯುವ ಇದು ಮೊದಲ ಸಂಭಾಷಣೆ ಆಗಿದ್ದು, ಸುಂಕ ಹಾಗೂ ವ್ಯಾಪಾರ ಸಂಬಂಧಿ ತಕರಾರುಗಳ ನಡುವೆ ಮಹತ್ವ ಪಡೆಯುತ್ತಿದೆ. ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, “ಟಿಕ್‌ಟಾಕ್ ಕುರಿತು ಒಪ್ಪಂದಕ್ಕೆ ಎರಡೂ ಕಡೆಯವರು ಬಹಳ ಹತ್ತಿರವಾಗಿದ್ದಾರೆ” ಎಂದು ಹೇಳಿದರು.

ಟ್ರಂಪ್, ತಮ್ಮ ಚುನಾವಣಾ ಪ್ರಚಾರದಲ್ಲಿ ಟಿಕ್‌ಟಾಕ್ ಪ್ರಮುಖ ಪಾತ್ರವಹಿಸಿದೆ ಎಂದು ಒಪ್ಪಿಕೊಂಡು, ಯುವ ಮತದಾರರಲ್ಲಿ ಅದು ಅವರಿಗೆ ಭಾರಿ ಯಶಸ್ಸನ್ನು ತಂದುಕೊಟ್ಟಿತು ಎಂದರು. ಅಮೆರಿಕ ಹಣಕಾಸು ಸಚಿವ ಸ್ಕಾಟ್ ಬೆಸೆಂಟ್ ಕೂಡ ಈ ಮಾತುಕತೆಯನ್ನು ದೃಢಪಡಿಸಿ, ಒಪ್ಪಂದಕ್ಕಾಗಿ ಅಮೆರಿಕ ಕಾರ್ಯಯೋಜನೆ ಸಿದ್ಧಪಡಿಸಿದೆ ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande